ಶನಿವಾರ, ಆಗಸ್ಟ್ 28, 2021

ಗಾನಸಿನಿಗಾನ


 ಹಿಂದೆ..ಗಣೇಶ ಉತ್ಸವ, ಯಾವುದಾದರೂ ಟ್ರಸ್ಟ್ ನಡೆಸುವ ಷೋ, ಯುವಕ ಸಂಘಗಳು ನಡೆಸುವ ವಾದ್ಯಗೋಷ್ಠಿಗಳಲ್ಲಿ ಹೆಸರಾಂತ ಸಿನಿಮಾ ಗಾಯಕ, ಗಾಯಕಿಯರು ಬಂದು ಹಾಡುತಿದ್ದ ಕಾಲವಿತ್ತು.


  1970 ರಲ್ಲಿ ಬೆಂಗಳೂರಿನಲ್ಲಿ "ಸೋನಾರ್ ಯುವಕ ಸಂಘ ಟ್ರಸ್ಟ್" ಅಡಿಯಲ್ಲಿ ನಡೆದ ಮ್ಯೂಸಿಕಲ್ ಷೋ ಕಾರ್ಯಕ್ರಮ ವನ್ನ ಎಸ್.ಜಾನಕಿ.ನಡೆಸಿಕೊಟ್ಟಿದ್ದರು.ಅಂದು ಎಸ್.


  ಅದೆಷ್ಟೇ ಮಹಾಗಾಯಕರಾದರೂ ಹೀಗೆ ಸಾಮಾನ್ಯವಾದ ಕಾರ್ಯಕ್ರಮಗಳಲ್ಲಿ ಹಾಡಿಹೋಗುತಿದ್ದಂತಹ ಗಾಯಕರ ಸಹೃದಯತೆ ನಿಜಕ್ಕೂ ಮೆಚ್ಚುವಂತಹುದು.


  ಇಂದು ನಾಲ್ಕಾರು ಚಿತ್ರಗಳಲ್ಲಿ ಒಂದಷ್ಟು ಹಾಡು ಹಾಡಿದ ತಕ್ಷಣ ಭೂಮಿ ಮೇಲೆ ನಿಲ್ಲಲಾಗದ ಗಾಯಕರ ನಡುವೆ ಇಂತಹ ಹಿರಿಯ ಗಾಯಕರ ಸರಳತೆ ನಿಜಕ್ಕೂ ಶ್ಲಾಘನೀಯ.


   ಆದರೆ ... ಕ್ರಮೇಣ ... ಕಾಲ ಕಳೆದಂತೆಲ್ಲಾ ಇಂತಹ ಮಹಾನ್ ಗಾಯಕರ ಕಾರ್ಯಕ್ರಮ ಗಳನ್ನ ನೇರವಾಗಿ ನೋಡುವ ಸೌಭಾಗ್ಯ ಸಾಮಾನ್ಯರಿಗೆ ದೊರಕದಂತಾಗಿತ್ತು ... ನಂತರ ಕಿರುತೆರೆಯ ಮೂಲಕ ಈ ಎಲ್ಲಾ ಕಲಾವಿದರ ಮಾತು, ಹಾಡು, ನಟನೆಯನ್ನು ಎಲ್ಲರೂ ನೋಡುವಂತೆ ಬದಲಾದ ತಂತ್ರಜ್ಞಾನ ಸಾಮಾನ್ಯರ ಪಾಲಿಗೆ ವರದಾನ ಎಂದರೂ ತಪ್ಪಲ್ಲ ..!


   ಗಾನಾಸುಮಾ ಪಟ್ಟಸೋಮನಹಳ್ಳಿ

ಗುರುವಾರ, ಆಗಸ್ಟ್ 26, 2021

ಗಾನಗಣಿಗಾರಿಕೆ

 


"ಸುಮಲತೆ" ಎಂಬ ಬಹುಭಾಷಾತಾರೆ ಸಂಸದೆಗೆ

ಜನುಮದಿನದ ಶುಭಾಶಯಗಳು

ವಿಶೇಷ ಗಾನಗಣಿಗಾರಿಕೆ


1978 ರಲ್ಲಿ ತೆಲುಗು ಮತ್ತು 1979 ರಲ್ಲಿ ತಮಿಳು ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಸುಮಲತಾ ತಮ್ಮ ಹದಿನೈದನೇ ವರ್ಷದಲ್ಲಿ ನಾಯಕನಾಗಿ ಮೊದಲಬಾರಿಗೆ ನಟಿಸಿದವರು.ಹಾಗೆ ಮಲಯಾಳಂ ಭಾಷೆಯಲ್ಲೂ ನಟನೆಯನ್ನ ಆರಂಭಿಸಿದರು.


   ಮೂಲತಃ ಆಂಧ್ರವಾದವರು ಜನಿಸಿದ್ದು ಮದ್ರಾಸಿನಲ್ಲಿ 1963 ಆಗಸ್ಟ್ 27 ರಲ್ಲಿ. ಆಂಧ್ರದ ಗುಂಟೂರಿನಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಈಕೆ ಚಿತ್ರನಟಿಯಾಗಿ 220 ಚಿತ್ರಗಳಲ್ಲಿ ನಟಿಸಿದ್ದಾರೆ.

   ಸುಮಾರು 6 ಭಾಷೆ ಮಾತನಾಡುವ ಇವರು ಚಭಾಷೆಯಲ್ಲಿ ನಟಿಸಿದವರು.ಮೊದಲ ಬಾರಿಗೆ ಕನ್ನಡದಲ್ಲಿ "ರವಿಚಂದ್ರ" ಚಿತ್ರದ ಮೂಲಕ ಅಣ್ಣಾವ್ರ ಸಿನಿಮಾದಲ್ಲಿ ನಾಯಕನಟಿಯಾಗಿ ಪಾದಾರ್ಪಣೆ ಮಾಡಿದರು.ನಂತರ ಅಂಬರೀಶ್, ವಿಷ್ಣುವರ್ಧನ್, ಅಶೋಕ್ ಜೊತೆಗೆ ನಟರ ಕನ್ನಡದಲ್ಲಿ 22 ಸಿನಿಮಾಗಳಲ್ಲಿ ನಟಿಸಿದ್ದಾರೆ.ವಿಷ್ಣುವರ್ಧನ್ ಜೊತೆ ಕರ್ಣ, ಕಥಾನಾಯಕ, ಸತ್ಯಜ್ಯೋತಿ " ಹೂವಾಗಿ "ಚಿತ್ರದವರೆಗೆ ಹತ್ತು ಚಿತ್ರಗಳಲ್ಲಿ ನಟಿಸಲಾಗಿದೆ.


  ಇವರು ಮಲಯಾಳಂ, ತೆಲುಗು, ಹಿಂದಿ ಭಾಷೆಯಲ್ಲಿ ಇವರ ಅಭಿನಯಕ್ಕೆ ಹಲವು ಪ್ರಶಸ್ತಿ ಗಳಿಸಿದವರು .1987 ಇವರ ಪಾಲಿಗೆ ಅದೃಷ್ಠದ ವರ್ಷ.


ಇವರಿಗೆ ಮೊದಲಬಾರಿಗೆ "ಅತ್ಯುತ್ತಮ ಹೊಸ ಮುಖ ಪ್ರಶಸ್ತಿ: ಥಿಸೈ ಮಾರಿಯಾ ಪರವೈಗಲ್ (1979) (ತಮಿಳು) ನೀಡಲಾಯಿತು. ನಂತರ


  ವಿಶೇಷ ತೀರ್ಪುಗಾರರ ನಂದಿ ಪ್ರಶಸ್ತಿ (ಅತ್ಯುತ್ತಮ ನಟಿ): ಶ್ರುತಿಲಯಲು (1987) (ತೆಲುಗು)

ಅತ್ಯುತ್ತಮ ನಟಿಗಾಗಿ ಚಲನಚಿತ್ರ ಅಭಿಮಾನಿಗಳ ಪ್ರಶಸ್ತಿ: ಶ್ರುತಿಲಯಲು (1987) (ತೆಲುಗು)

ಅತ್ಯುತ್ತಮ ನಟಿಗಾಗಿ ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿ: ಆಟಗಾರ ಮತ್ತು ತೂವನತುಂಬಿಕಲ್ (1987) (ಮಲಯಾಳಂ)

ಅತ್ಯುತ್ತಮ ನಟಿಗಾಗಿ ಲಕ್ಸ್ ಪ್ರಶಸ್ತಿ: ಮಹಿಳಾ (1987) (ಮಲಯಾಳಂ)

ಅತ್ಯುತ್ತಮ ನಟಿಗಾಗಿ ಚಲನಚಿತ್ರ ಅಭಿಮಾನಿಗಳ ಪ್ರಶಸ್ತಿ: ವಯಸ್ಸು (1987) (ಹಿಂದಿ)

ಅತ್ಯುತ್ತಮ ನಟಿಗಾಗಿ ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿ: ಇಸಾಬೆಲ್ಲಾ (1988) (ಮಲಯಾಳಂ) [18]


 ಹೀಗೆಹಾಲವು ಭಾಷೆಗಳಲ್ಲಿ ನಟಿಸಿದ ನಂತರ ಮಂಡ್ಯದ ನಟ ಅಂಬರೀಶ್ ರನ್ನ ವಿವಾಹವಾದರು.


  "ನ್ಯೂಡೆಲ್ಲಿ" ಎಂಬ ಚಿತ್ರ ಮಲಯಾಳಂ, ಹಿಂದಿ, ಕನ್ನಡದಲ್ಲಿ ರೀಮೇಕ್ ಆಗಿ ಇವರಿಗೆ ಅಪಾರ ಜನಪ್ರಿಯತೆ ಮತ್ತು ಪ್ರಶಸ್ತಿ ಯನ್ನ ತಂದುಕೊಟ್ಟಿತು.ಅಬ್ಬಯ್ಯ ನಾಯ್ಡುರವರ ತಾಯಿಕನಸು, ತಾಯಿಯ ಹೊಣೆಯಲ್ಲಿ ನಟಿಸಿದರು.ಇವರ ಬಹತ್ ಚಿತ್ರದ ಹಾಡುಗಳು ಬಹಳ ಜನಪ್ರಿಯತೆ ಪಡೆದಿವೆ.


   ಪರಭಾಷೆಯಿಂದ ಬಂದು ಕನ್ನಡದ ಜನಪ್ರಿಯ ನಟರನ್ನ ವಿವಾಹವಾಗಿ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿ, ಈಗ ರಾಜಕೀಯ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸುತ್ತಿರುವ ನಟಿ ಸುಮಲತಾ ಅವರಿಗೆ ಇಂದು ಜನುಮದಿನ.


  ಪ್ರೀತಿಯ ಅಂಕಣವಾದ "ಗಾನಗಣಿಗಾರಿಕೆ" ಯಲ್ಲಿ 1986 ರಲ್ಲಿ ವಿಷ್ಣುವರ್ಧನ್ ಜೊತೆ ನಟಿಸಿದ "ಸತ್ಯ ಜ್ಯೋತಿ" ಚಿತ್ರದ ಮಧುರ ಗಾಯನಗೊಂಡ ಅವರಿಗೆ ಶುಭಾಶಯ ವಾಗಿ ಹಂಚಿಕೊಳ್ಳುತ್ತಿರುವೆ.

  ಇಳಯರಾಜ ಸಂಗೀತದ ಈ ಚಿತ್ರದಲ್ಲಿ "ನೀ..ನೀಡಿದ ಪ್ರೇಮ ಸುಖ ತಂದಿದೆ ... ಹಾಡು ನನಗೆ ಬಹಳವಾಗಿ ಕಾಡುವ ಹಾಡು. ಆರ್.ಎನ್. ಚಿತ್ರದ ಈ ಹಾಡು ಸದಾ ಗುನುಗುವ, ಕಾಡುವ ಮಧುರ ಹಾಡಿನಲ್ಲಿ ನೆಲೆ ನಿಂತಿದೆ


ಸತ್ಯ ಜ್ಯೋತಿ (೧೯೮೬) - ನೀ ನೀಡಿದ ಪ್ರೇಮದ ಸುಖ ತಂದಿದೆ

ಸಂಗೀತ: ಇಳೆಯರಾಜ ಸಾಹಿತ್ಯ: ಆರ್.ಏನ್.ಜಯಗೋಪಾಲ, ಗಾಯನ: ಎಸ್.ಪಿ.ಬಿ. ಎಸ್.ಜಾನಕೀ


ಹೆಣ್ಣು: ನೀ ನೀಡಿದ ಪ್ರೇಮ ಸುಖ ತಂದಿದೆ ನಾ ಮಾಡಿದ ಪುಣ್ಯ ಫಲ ಬೇಡ

          ನೀನಾಡೋ ಮಾತೇ ಚೆಂದ ನಿನೊಡೋ ನೋಟ ಚೆಂದ

          ನೀ ಹಾಡೋ ಹಾಡೇ ಚೆಂದ ನಿನ್ನನ್ನು ಕಂಡು ಸೋತೆನು


ಗಂಡು: ಬಾನಾಡಿ ನಾಚೋ ಹಾಗೆ ನಿನ್ನ ಸೇರಿ ಈಗ ಬಾನಲ್ಲಿ ತೇಲೋ ಆಸೆ ಬಂತು ನನ್ನಲ್ಲಿ

           ಬಾಳೊಂದು ದೋಣಿ ಅಲ್ಲಿ ನಾವೂ ತೂರಿ ಜೇನಾಟ ಆಡೋ ಆಸೆ ದುಂಬಿ ನಾವಾಗಿ

ಹೆಣ್ಣು: ಕಣ್ಣಲ್ಲಿ ಕಣ್ಣ ಇಟ್ಟು ನೋಡು ನನ್ನ ನಲ್ಲ ನಿನ್ನಾಸೆ ಬಿಟ್ಟು ಬೇರೆ ಏನು ಇಲ್ಲ

          ನಿನ್ನ ಪ್ರೇಮ ಒಂದೇ ಸಾಕೂ ಬೇರೆ ಏನು ಬೇಕಿಲ್ಲ

          ನೀನೇ ಜೀವ ನೀನೇ ದೈವ ನಲ್ಲ ಎಲ್ಲ ನೀನೇ ತಾನೇ

ಗಂಡು: ನೀ ನೀಡಿದ ಪ್ರೇಮ ಸುಖ ತಂದಿದೆ ನಾ ಮಾಡಿದ ಪುಣ್ಯ ಫಲಕ್ಕೆ

          ನೀನಾಡೋ ಮಾತೇ ಚೆಂದ ನಿನೊಡೋ ನೋಟ ಚೆಂದ

          ನೀ ಹಾಡೋ ಹಾಡೇ ಚೆಂದ ನಿನ್ನನ್ನು ಕಂಡು ಸೋತೆನು


ಹೆಣ್ಣು: ಸಂಗೀತ ಏಕೆ ಬೇಕು ನೀನೇ ಹೇಳು ನಲ್ಲ ಮುತ್ತಂತೆ ನೀನು ಆಡೋ ಮಾತೇ ಸಾಕಲ್ಲ

           ಬಾನಲ್ಲಿ ಬೇರೆ ಎಲ್ಲೂ ಸ್ವರ್ಗ ಬೇರೆ ಇಲ್ಲ ನೀನೆಲ್ಲೂ ಅಲ್ಲೇ ಎಲ್ಲ ನಲ್ಲ ಸುಳ್ಳಲ್ಲ

ಗಂಡು: ಬಾಯಾರಿ ದಾಹ ದಾಗ ಎಂದಾಗ ನಾನು ಬಂದೆ ನನ್ನನ್ನೂ ಕಂಡು ಮೋಹ ಮೋಹ ಎಂದೇ

            ದಾಹ ಏನು ಮೋಹ ಏನು ಒಂದು ಕಾಣೆ ನಾನೀಗ

            ನಿನ್ನ ಸೇರೋ ಆಸೆ ಬಂದೆ ಓಡಿ ಓಡಿ ಬಂದೆ ಬೇಗ

            ನೀ ನೀಡಿದ ಪ್ರೇಮ ಸುಖ ತಂದಿದೆ ನಾ ಮಾಡಿದ ಪುಣ್ಯ ಫಲವನ್ನು

            ನೀನಾಡೋ ಮಾತೇ ಚೆಂದ ನಿನೊಡೋ ನೋಟ ಚೆಂದ

            ನೀ ಹಾಡೋ ಹಾಡೇ ಚೆಂದ ನಿನ್ನನ್ನು ಕಂಡು ಸೋತೆನು

*********************** ಗಾನಾಸುಮಾ ಪಟ್ಟಸೋಮನಹಳ್ಳಿ

ಬುಧವಾರ, ಆಗಸ್ಟ್ 25, 2021

ಗಾನಗಣಿಗಾರಿಕೆ



ಗಾನಗಣಿಗಾರಿಕೆ ****************



ಎಚ್ಚರ ....! ಗಂಡೇ ..... ಎಚ್ಚರ ....!

ಹೆಣ್ಣೇ ... ಸಂಸಾರ ... ಸಂಸಾರಿ ಹೆಣ್ಣಿಗೆ ನಮಸ್ಕಾರ.


ಬೇಡ .... ನಂಬಬೇಡ .... ಅರೆ ... ಜೀವ ಹೋದರೂ

ಹೆಂಗಸರನ್ನು ಬಳಸಿ ನೀನು ನೋಡಬೇಡ ..... !!!!


#ಗಾನಗಾರಿಕೆಯಲಿಂದು #ನರಸಿಂಹರಾಜು ರವರ

ಎರಡು ವಿಭಿನ್ನ ಗೀತೆಗಳ ಅವಲೋಕನ


1971 ರಲ್ಲಿ ಬಿಡುಗಡೆಯಾದ ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಡುಗಳ ಮೂಲಕ ಮನಸೂರೆಗೊಂಡ ಸಾಕ್ಷಾತ್ಕಾರ ಚಿತ್ರ ಕಣಗಾಲ್ ರ ಸೋದರ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಚಿತ್ರಿತವಾಗಿತ್ತು. ಸಾಹಿತ್ಯದ ಜನಪ್ರಿಯತೆಯ ಇಮ್ಮಡಿಗೊಳಿಸಿತ್ತು.

ಆದರೆ ಇದರ ಮೂಲ ವಿಡಿಯೊ ಸಿ ಡಿ ಯಿಂದ ಈ ಹಾಡನ್ನು ಹುಡುಕಿ ನಿಮಗಾಗಿ ತಂದಿರುವೆ.

ಆ ಮಧುರ ಹಾಡೆ ... ಎಚ್ಚರ ಗಂಡೇ ಎಚ್ಚರ ...!

    

      ಹೆಣ್ಣಿನ ಬಗ್ಗೆ, ಅವಳ ಆರು ಗುಣಗಳ ಕುರಿತು ವರ್ಣಿಸಿ, ಬರೆದ ಹಾಡು. ನಮ್ಮ ಸಮಾಜದಲ್ಲಿ ಹೆಣ್ಣಿಗೆ ನೀಡುವ ಆದರದ ಬಗ್ಗೆ ಬಿಂಬಿತವಾಗಿದೆ.ಪಿ.ಬಿ.ಶ್ರೀನಿವಾಸ್ ಹಿನ್ನೆಲೆ ದನಿಯಲ್ಲಿ ಹಾಗೆ ನರಸಿಂಹರಾಜು ರವರ ಅಭಿನಯದ ಪಾರ್ಕೊಂಡರಲಿ ಹಾಡುವ ಈ ಹಾಡು ಎಲ್ಲಾ ಗಂಡಸರಿಗೂ ಅವರ ಹಣ್ಣಿನ ಬಗ್ಗೆ ಹೇಳಿದ ತಿಳಿ ಮಾತಿನಂತಿತ್ತು ...


     ಈ ಚಿತ್ರ ಬಿಡುಗಡೆಗೊಂಡ ಆರು ವರುಷಗಳ ನಂತರ ತೆರೆಗೆ ಬಂದ "ಅಪರಾಧಿ" ಹೆಸರಿನ ಚಿತ್ರದ ನರಸಿಂಹರಾಜು ಅಭಿನಯದಲ್ಲಿ ಹುಚ್ಚನ ಪಾತ್ರಧಾರಿ ಅಂತಹುದೇ ಪಾರ್ಕೊಂದರಲಿ ಹೆಣ್ಣಿನ ಮೋಸದ ಬಗ್ಗೆ, ಹೆಣ್ಣಿನ ಅವಗುಣಗಳ ಬಗ್ಗೆ ಹಾಡುತ್ತಾ ಅದೇ ಹೆಣ್ಣನ್ನ ನಂಬದಿರಿ ಎಂದು ಹಾಡುವ ಹಾಡು ಭಿನ್ನವಾಗಿ ನನ್ನನ್ನ ಕಾಡಿತು.ಸಾಕ್ಷಾತ್ಕಾರ ಚಿತ್ರದ ಹಾಡಿಗೆ ವಿರುದ್ದವಾಗಿ ಮೋಸ ಹೋದನು ಹುಚ್ಚನಾಗಿ ಬುದ್ದಿವಾದ ಹೇಳುವ ಹಾಡು ಎಲ್ಲಾ ಪ್ರೇಮಿಗಳಿಗೂ ಎಚ್ಚರಿಕೆಯ ಹಾಡಾಗಿತ್ತು.

   

        ವೈ ಆರ್ ಸ್ವಾಮಿ ನಿರ್ದೇಶನದಲ್ಲಿ 1976 ರಲ್ಲಿ ಬಿಡುಗಡೆಯಾದ ಈ ಚಿತ್ರ ಸತ್ಯಂ ಸಂಗೀತದಲ್ಲಿ ಚಿ.ಉದಯಶಂಕರ್ ಸಾಹಿತ್ಯದಲಿ ಎಸ್.ಪಿ ಬಾಲಸುಬ್ರಹ್ಮಣ್ಯಂ ರ ಕಂಠದಲಿ ಅಮೋಘವಾಗಿ ಮೂಡಿ ಬಂದಿತ್ತು.

ಆರತಿ ಮತ್ತು ಶ್ರೀನಾಥ್ ಅಭಿನಯದಲ್ಲಿ ಈ ಚಿತ್ರ ಸಸ್ಪೆನ್ಸ್ ಚಿತ್ರವಾಗಿ ಅಪರಾಧಿಯೊಬ್ಬನ ಕುರಿತಾದ ಕುತೂಹಲಕಾರಿ ಚಿತ್ರವಾಗಿತ್ತು.


        ಒಂದು ಹಾಡು ಮದುವೆಯಾದ ಗಂಡಸರಿಗೆ ಹೆಣ್ಣಿನ ಮಹತ್ವ ಸಾರುವ ಗೀತೆಯಾದರೆ

ಮತ್ತೊಂದು ಗೀತೆ ಮದುವೆಯಾಗದ ಪ್ರೀತಿ ಪ್ರೇಮದ ಅಮಲಿನಲ್ಲಿ ಮುಳುಗಿರುವ ಯುವ ಪ್ರೇಮಿಗಳಿಗೆ ತಿಳಿ ಹೇಲಿ ಎಚ್ಚರಿಸುವಂತ ಗೀತೆಯಾಗಿತ್ತು.


      ಕಳೆದ ಜುಲೈ ತಿಂಗಳಲ್ಲಿ ಇವರ ಜನುಮದಿನ ಮತ್ತು ನಿಧನವಾದ ದಿನದಂದೇ ಈ ಲೇಖನ ಬರೆಯುವ ಆಸೆಯಿತ್ತು.ಕೆಲಸದ ಬಿಡುವು ಈಗ ಬರೆಯಲು ಬಿಡುವು ನೀಡಿತು.


ನಿಮ್ಮ ಮೆಚ್ವಿನ ನನ್ನ ಅಂಕಣ ಗಾನಗಣಿಗಾರಿಕೆಯಲ್ಲಿ

ನಿಮಗಾಗಿ ಈ ಯಾವುದೇ ಹಾಡುಗಳ ಸಮರ್ಪಣೆ.


ಹಾಗೆ ಅಂತರ್ಜಾಲ ಕೃಪೆಯಿಂದ ನರಸಿಂಹರಾಜು ರವರ ಕುರಿತ ಸ್ಥೂಲ ಪರಿಚಯ.


 ಜೀವನ .....

ನರಸಿಂಹರಾಜು ಅವರು ಜುಲೈ ೨೪, ೧೯೨೬ ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಜನಿಸಿದರು. ತಂದೆ ರಾಮರಾಜು ಪೊಲೀಸ್ ಇಲಾಖೆಯ ನೌಕರರಾಗಿದ್ದರು, ತಾಯಿ ವೆಂಕಟಲಕ್ಷ್ಮಮ್ಮನವರು. ಬಾಲ್ಯದಲ್ಲೇ ಅಭಿನಯಕ್ಕೆ ಬಂದವರ ಜೀವನವೇ ಕಲೆಯ ಬದುಕು.


ರಂಗಭೂಮಿಯಲ್ಲಿ ....

ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ಸಿ.ಬಿ.ಮಲ್ಲಪ್ಪನವರ ಶ್ರೀಚಂದ್ರಮೌಳೀಶ್ವರ ನಾಟಕ ಸಭಾದಲ್ಲಿ ಬಾಲಕಲಾವಿದನಾಗಿ ಸೇರಿಕೊಂಡ ನರಸಿಂಹರಾಜು ಅವರಿಗೆ ಅಲ್ಲಿಯೇ ಬದುಕಿನ ಶಿಕ್ಷಣವೂ ಆರಂಭವಾಯಿತು. ಹಾಸ್ಯಪಾತ್ರಕ್ಕೆ ಹೇಳಿ ಮಾಡಿಸಿದಂತಹ ಮುಖ, ಶರೀರವನ್ನು ಸಹಜವಾಗಿ ಪಡೆದ ನರಸಿಂಹರಾಜು ಅವರಿಗೆ ಹಾಸ್ಯಪಾತ್ರಗಳ ನಿರ್ವಹಣೆ ಸಹಜವಾಗಿತ್ತು. ರಂಗಮಂಚದ ಮೇಲೆ ಬಂದು ನಿಂತರೆ ಸಾಕು, ಪ್ರೇಕ್ಷಕರು ನಗೆಹೊನಲು ಹರಿಸುತ್ತಿದ್ದಾರೆ.


ನರಸಿಂಹರಾಜು ಅವರು ಪೌರಾಣಿಕ ಪಾತ್ರಗಳನ್ನು - ವಿಶ್ವಾಮಿತ್ರ, ರಾಮ, ಉದಾಹರಣೆಗೆ ರಾವಣ. ಭರತ, ಇನ್ನು ಕೆಲವು ಸಲ ಲಕ್ಷ್ಮಿಯ ಪಾತ್ರವನ್ನು ನಿರ್ವಹಿಸುತ್ತಿದ್ದರು. ಆಗಲೇ ಜನಪ್ರಿಯತೆ ಪಡೆದ `ಬೇಡರ ಕಣ್ಣಪ್ಪ` ನಾಟಕದಲ್ಲಿ ಅರ್ಚಕನ ಪುತ್ರ ಕಾಶಿಯ ಪಾತ್ರದಲ್ಲಿ ನರಸಿಂಹರಾಜು ತುಂಬಾ ಜನಪ್ರಿಯತೆ ಪಡೆದರು.


`ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾ`,` ಎಡತೊರೆಯ ಕಂಪನಿ`, `ಹಿರಣ್ಣಯ್ಯನವರ ಮಿತ್ರಮಂಡಲಿ`,` ಭಾರತ ಲಲಿತ ಕಲಾ ಸಂಘ`, ಬೇಲೂರಿನ `ಗುಂಡ ಜೋಯಿಸರ ಕಂಪನಿ`, ಗುಬ್ಬಿಯ` ಚೆನ್ನಬಸವ ನಾಟಕ ನಾಟಕಗಳಲ್ಲಿ ತಮ್ಮ ಜೀವನದ ಬದುಕಿನ ಆರಂಭದ ೨೭ ವರ್ಷಗಳು ನರಸಿಂಹರಾಜದಲ್ಲಿತ್ತು.


ರಾಜ್ ಕುಮಾರ್ ಅವರು `ಬೇಡರ ಕಣ್ಣಪ್ಪ` ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದ ನಂತರ ಅವರ ರಂಗಭೂಮಿಯನ್ನು ಕಡೆಗಣಿಸಲಾಗಿಲ್ಲ. ಬಾಲನಟನಾಗಿ ರಂಗ ಪ್ರವೇಶಿಸಿದ ನರಸಿಂಹರಾಜು ಬೆಳೆಯುತ್ತಿರುವಂತೆ ದೊಡ್ಡವರ ಪಾತ್ರಗಳಿಗೆ ಭಡ್ತಿ ಪಡೆದರು. ತಮ್ಮ ವಿಶಿಷ್ಟ ಅಭಿನಯದಿಂದ ಹಾಸ್ಯನಟರಾಗಿ ರೂಪುಗೊಂಡರು. ರಂಗಭೂಮಿಯಲ್ಲಿ ಪಡೆದ ಎಲ್ಲ ಬಗೆಯ ಅನುಭವ, ಅವರಿಗೆ ಸಿನಿಮಾ ಜಗತ್ತಿನಲ್ಲಿ ಉಪಯೋಗಕ್ಕೆ ಬಂದಿತು. ಚಿತ್ರರಂಗದ ಪ್ರವೇಶಕ್ಕೆ ನಿಮಿತ್ತವಾದ `ಬೇಡರ ಕಣ್ಣಪ್ಪ`ದಲ್ಲಿನ ಕಾಶಿಯ ಪಾತ್ರ ಅವರಿಗೆ ಲೀಲಾಜಾಲವಾಗಿತ್ತು. `ಬೇಡರ ಕಣ್ಣಪ್ಪ` ನಾಟಕದಲ್ಲಿ ಸಾವಿರಕ್ಕೂ ಹೆಚ್ಚಿನ ಪ್ರದರ್ಶನಗಳಲ್ಲಿ ಅವರಿಗೆ ಕಾಶಿಯ ಪಾತ್ರ ವಹಿಸಲಾಗಿದೆ. ಪ್ರತಿ ಪ್ರದರ್ಶನದಲ್ಲಿಯೂ ಅವರು ತೋರಿಸುತ್ತಿದ್ದುದು ತನ್ಮಯತೆ, ಬೆರಗು ಮೂಡಿಸುವಂತಿತ್ತು ಎಂದು ಕರೆಯಲ್ಪಡುವ ನಿಕಟ ಸಂಪರ್ಕವನ್ನು ಹೊಂದಿದ ಮಾಸ್ಟರ್ ಹಿರಣ್ಣಯ್ಯ ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ.


ನರಸಿಂಹರಾಜು ಅವರ ಬಗ್ಗೆ ಅವರ ಪುತ್ರಿ ಸುಧಾನರಸಿಂಹರಾಜು ಅವರು ದೂರದರ್ಶನದಲ್ಲಿ ಕಾರ್ಯಕ್ರಮ ಮಾಡಿದಾಗ ಸಂದರ್ಶನದಲ್ಲಿ ಭಾಗವಹಿಸಿದ್ದರು ವರನಟ ರಾಜ್ ಕುಮಾರ್ ಅವರು ಹೇಳುತ್ತಾರೆ: “ಅಂದಿನ ದಿನದಲ್ಲಿ ನಿರ್ಮಾಪಕ ನಿರ್ದೇಶಕರು, ಚಲನಚಿತ್ರಗಳಿಗೆ ಮೊದಲು ನರಸಿಂಹರಾಜು ಅವರ ದಿನಗಳನ್ನು ಗುರುತು ಹಿಡಿಯುವುದು ಉಳಿದಿರುವ ನಮ್ಮವರನ್ನು ಆಕರ್ಷಿಸುತ್ತಿದೆ. ರಾಜ್ ಅವರು ಹೇಳಿದ ಮಾತು ನರಸಿಂಹರಾಜು ಅವರು ಗಳಿಸಿದ ಶ್ರೇಷ್ಠತೆಗೆ ಮತ್ತು ಮತ್ತೆ ಮಾತನ್ನು ಹೇಳುವ ರಾಜ್ ಅವರ ಸಜ್ಜನತೆಯ ಶ್ರೇಷ್ಠತೆಗೆ ಕನ್ನಡಿ ಹಿಡಿದಿದೆ. ರಾಜ್ ಕುಮಾರ್ ಮತ್ತು ನರಸಿಂಹರಾಜು ಅವರ ಜೋಡಿ ಕನ್ನಡ ಚಿತ್ರರಂಗದಲ್ಲಿ ಸಂಭವಿಸಿದ ಅದ್ಭುತಗಳಲ್ಲೊಂದು. ಈ ಜೋಡಿಗೆ ಬಾಲಣ್ಣನನ್ನು ಕೂಡ ಸೇರಿಸಬಹುದು


ಅಂದಿನ ದಿನದಲ್ಲಿ ಬಾಲಕೃಷ್ಣ ಮತ್ತು ನರಸಿಂಹರಾಜು ಒಬ್ಬರಿಗೊಬ್ಬರು ಹೊಂದಿಕೆಯಿಂದ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದುದು ನೆನಪಾಗುತ್ತದೆ. ಬಾಲಣ್ಣ ಅವರದು ರೇಗುವ ಅಸಹನೆಯ ಪಾತ್ರವೋ ನರಸಿಂಹರಾಜು ಅವರ ಹಿಂದೆ ಹಾಗೂ ಅವರ ನಂತರ ಅನೇಕ ಕಲಾವಿದರು ಚಿತ್ರರಂಗದಲ್ಲಿ ಮೂಡಿದ್ದಾರೆ. ಹೀಗೆ ಮೂಡಿದ ಹಲವಾರು ಕಲಾವಿದರು ಜನರಿಗೆ ಇಷ್ಟವೂ ಆಗಿದ್ದಾರೆ ನಿಜ. ಆದರೆ ನರಸಿಂಹರಾಜು ಮತ್ತೆ ಆಳವಾದ ಆಪ್ತತೆ ಮೂಡಿಸಿದ ನಟರು ಚಾರ್ಲಿ ಚಾಪ್ಲಿನ್ ಉಳಿದವರು ಮಾತ್ರ.


ಕನ್ನಡದಲ್ಲಿ ಹೊಸಬಗೆಯ ಪ್ರಯೋಗ, ವೈವಿಧ್ಯಪೂರ್ಣ ಕಥೆಗಳು, ಯಶಸ್ವಿ ಚಿತ್ರಗಳು ಹೊರಬಂದದ್ದು ಕಳೆದ ಶತಮಾನದ ಐದು, ಆರು ಮತ್ತು ಏಳನೆಯ ದಶಕಗಳಲ್ಲಿ. ಈ ಅವಧಿ ಕನ್ನಡ ಚಿತ್ರರಂಗದ ಸುವರ್ಣ ಯುಗ. ಈ ಯುಗದಲ್ಲಿ ರಾರಾಜಿಸಿದ ನರಸಿಂಹರಾಜು, ೧೯೫೪ ರಲ್ಲಿ ಬಿಡುಗಡೆಯಾದ `ಬೇಡರ ಕಣ್ಣಪ್ಪ`ದಿಂದ ಆರಂಭವಾಗಿ ೧೯೭೯ ರವರೆಗಿನ ೨೫ ೨೫೦ ಹೆಚ್ಚಿನ ಹೆಚ್ಚಿನ ಚಿತ್ರಗಳಲ್ಲಿ ಹಾಸ್ಯನಟರಾಗಿ ಬೆಳಗಿದವರು.


ಶ್ರೇಷ್ಠ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಅವರಿಂದ ಸಾಕಷ್ಟು ಪ್ರಭಾವಿತರಾಗಿದ್ದ ನರಸಿಂಹರಾಜು ಅವರ ಪೀಚು ಶರೀರ, ವಿಶಿಷ್ಟ ಬಗೆಯ ಹಾವಭಾವಗಳ ಮ್ಯಾನರಿಸಂಗಳು ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಿತ್ತು. ಅವರ ಚಿತ್ರಗಳನ್ನು ಟೆಂಟ್ ಗಳಲ್ಲಿ ನೋಡುತ್ತಿದ್ದ ಗ್ರಾಮೀಣರು ಉಬ್ಬು ಹಳ್ಳಿಯ ತಮ್ಮ ಮಿತ್ರರನ್ನು `ನರಸಿಂಹರಾಜು` ಎಂದೇ ಕರೆಯುವಷ್ಟು ದಟ್ಟ ಪ್ರಭಾವವನ್ನು ನರಸಿಂಹರಾಜು ಮೂಡಿಸಿದ್ದಾರೆ. ಇದು ಜನಪದ ನಾಯಕನೊಬ್ಬ ಬೀರಿದ ಪ್ರಭಾವದಂತೆ ಈಗ ತೋರಿಸುತ್ತದೆ. 'ಬೇಡರ ಕಣ್ಣಪ್ಪ'ದಿಂದ ಆರಂಭಗೊಂಡು ಅವರು ನಟಿಸಿರುವ ಪಾತ್ರಗಳ ವೈವಿಧ್ಯತೆಯಲ್ಲಿ ಅವರಿಗೆ ಹರಿಸಿರುವ ಹಾಸ್ಯವೆಂಬ ಚೈತನ್ಯದ ವೈವಿಧ್ಯ ನಿತ್ಯ ಸ್ಮರಣೀಯವಾದುದು.


ಅವನ್ನು ಅವಿಸ್ಮರಣೀಯ ಪಾತ್ರಗಳು ಸಂಪಾದಿಸಿ

'ಸ್ಕೂಲ್ ಮಾಸ್ಟರ್' ಚಿತ್ರದ ಭಾಮೆಯ ನೋಡಲು ತಾ ಬಂದ ಹಾಡಿನಲ್ಲಿ 'ಕಣ್ ಸನ್ನೆಯಲೇ ಕನ್ಯೆಯ ಮನ ಸೆಳೆದ' ಎಂದು ಅವನು ನೋಡಲು ಬಂದ ಹುಡುಗಿ ಹಾಡಿದರೆ 'ಆ ಚಿನ್ಮಯ ಮೂರುತಿ ಶ್ರೀಗೋವಿಂದ'ನ ಸ್ಥಾನದಲ್ಲಿ ಕುಳಿತ ಈ ಪೆಚ್ಚು ನರಸಿಂಹರಾಜು ಪಿಳಿ ಪಿಳಿ ಕಣ್ಸನ್ನೆ ಮಾಡಿದ್ದು ಅಷ್ಟೇ ಮನಮೋಹಕವಾದದ್ದು. ಶ್ರೀಕೃಷ್ಣದೇವರಾಯ ಚಿತ್ರದಲ್ಲಿ ನರಸಿಂಹರಾಜು ಅವರಂತೆ ತೆನಾಲಿ ರಾಮಕೃಷ್ಣನಾಗಿ ಮತ್ತ್ಯಾರೂ ಅಭಿನಯಿಸಿರಲಾರರು. 'ಸತ್ಯ ಹರಿಶ್ಚಂದ್ರ' ಚಿತ್ರದಲ್ಲಿ ಉದಯ್ ಕುಮಾರ್ ಅವರ ಶ್ರೇಷ್ಠ ಸಿಡುಕು ಮತ್ತು ರಾಜ್ ಕುಮಾರ್ ಅವರ ಸರ್ವೋತ್ಕೃಷ್ಟ ಸೌಮ್ಯತೆಯ ನಡುವೆ ಕಪಿ ಚೇಷ್ಟೆಯ ಆದರೆ ಕಡೆಯಲ್ಲಿ ಗೌರವಯುತವಾಗಿ ಪರಿವರ್ತಿತವಾಗುವ ನಕ್ಷತ್ರಿಕನಾದ ನರಸಿಂಹರಾಜು ಅಭಿನಯ ಮತ್ತೊಂದು ಶ್ರೇಷ್ಠ ಮಜಲಿನದು. ಜೊತೆಗೆ ಆ ಚಿತ್ರದಲ್ಲಿನ ಸಶಕ್ತ ಕೊಂಡಿಯಾಗಿ ಇಡೀ ಚಿತ್ರವನ್ನೇ ತನ್ನ ಹಿಡಿತದಲ್ಲಿ ನಡೆಸುವಷ್ಟು ಸಮರ್ಥವಾದದ್ದು ಕೂಡ. 'ಅಂಡ ಪಿಂಡ ಬ್ರಹ್ಮಾಂಡ' ಎಂದು ಮೂರ್ಖನಾಗಿ ಮಾತನಾಡುತ್ತಾ 'ನಿನ್ನ ಪಿಂಡ' ಎಂದು ವಿಶ್ವಾಮಿತ್ರರಿಂದ ಬೈಯಿಸಿಕೊಳ್ಳುವುದಾಗಲಿ, 'ಏನಿದೀ ಗ್ರಹಚಾರವೋ' ಎಂದು ಹರಿಶ್ಚಂದ್ರನ ಪ್ರಾಣ ತಿನ್ನುವುದಾಗಲೀ, 'ಅಪ್ಪಾ ನನ್ನನ್ನು ಕ್ಷಮಿಸಿ ಬಿಡಪ್ಪ' ಎಂದು ಹರಿಶ್ಚಂದ್ರನ ಕ್ಷಮಾಪಣೆ ಯಾಚಿಸುವ ಧೈನ್ಯತೆಯಾಗಲೀ, ಕಡೆಗೆ ಗುರು ವಿಶ್ವಾಮಿತ್ರರಿಗೇ "ಗುರುಗಳೇ ಒಂದು ಮಾತು ಮಾತ್ರ ನನ್ನ ಅನುಭಾವಕ್ಕೆ ಬಂತು, ಈ ಅಂಡ ಪಿಂಡ ಬ್ರಹ್ಮಾಂಡದಲ್ಲಿ ಅವರವರ ಕರ್ಮ ಅವರದು" ಎಂದು ಹೇಳುವ ವೇದಾಂತ'ವಾಗಲಿ ಚಿತ್ರರಂಗದ ನಾನು ಕಂಡ ಪಾತ್ರಗಳಲ್ಲಿ ನನ್ನನ್ನು ನೋಡಿದೆ. ಸಂಧ್ಯಾರಾಗ, ವೀರ ಕೇಸರಿ, ರತ್ನ ಮಂಜರಿ, ಕಣ್ತೆರೆದು ನೋಡು, ರಾಯರ ಸೊಸೆ ಹೀಗೆ ನೀವು ಅವರ ಇನ್ನೂರೈವತ್ತು ಚಿತ್ರಗಳಲ್ಲಿ ಒಂದನ್ನು ಪೋಣಿಸುತ್ತಾ ಹೋಗಬಹುದು.


ನಿರ್ಮಾಪಕ 

ನರಸಿಂಹರಾಜು ತಮ್ಮ ಚಿತ್ರಗಳಲ್ಲೆಲ್ಲಾ ಹಾಸ್ಯಪಾತ್ರವಾಗಿಯೇ ಉಳಿದರು. ನರಸಿಂಹ ರಾಜು ಅವರು ತಾವೇ ನಿರ್ಮಿಸಿದ 'ಪ್ರೊಫೆಸರ್ ಹುಚ್ಚೂರಾಯ' ಚಿತ್ರದಲ್ಲಿ ತಮ್ಮನ್ನು ತಾವು ವಿಜೃಂಭಿಸಿಕೊಳ್ಳದೆ ಒಂದು ಸಾಮಾಜಿಕ ಕಥೆ ಹೆಣೆದು ಅದರಲ್ಲಿ ತಾವೊಂದು ಉತ್ತಮ ಹೃದಯವಂತ ವ್ಯಕ್ತಿಯಾಗಿ ಮತ್ತು ಅವರ ಸಾಮರ್ಥ್ಯ ಕುರುಹಾದ ಹಾಸ್ಯ ಲೇಪನದ ಪಾತ್ರವಾಗಿ ಮಾತ್ರ ಮೂಡಿತು, ನರಸಿಂಹರಾಜು ತಮ್ಮನ್ನು ಅಗತ್ಯವಾಗಿ ತೋರಿಸಿಕೊಡದೆ ತಮ್ಮ ವ್ಯಕ್ತಿಗೆ ಮಾತ್ರ ಇರುವ ಶ್ರೇಷ್ಠತೆಯನ್ನು ಹೊಂದಿದ್ದಾರೆ


"ನಗಬೇಕು ನಗಬೇಕು, ಇದೇ ನನ್ನ ಧರ್ಮ ನಗಲಾರೆ ಅಳುವೇ ಅಂದರೆ ನಿನ್ನ ಕರ್ಮ" ಎಂದರೆ ನರಸಿಂಹ ರಾಜು ಅವರ ಮೇಲೆ ಚಿತ್ರಿತವಾದ 'ನಕ್ಕರೆ ಅದೇ ಸ್ವರ್ಗ' ಚಿತ್ರದ ಗೀತೆ. ಇದನ್ನು ಚಾಚೂ ತಪ್ಪದೆ ತಮ್ಮ ಬಾಳಿನ ತಿರುಳನ್ನಾಗಿ ಮಾಡಿಕೊಂಡವರು ನರಸಿಂಹರಾಜು. ಅವರು ಯಾರ ಬಗ್ಗೆ ಕೆಟ್ಟ ಮಾತನ್ನು ಆಡಿದ್ದಾಗಲೀ, ಅವರ ಬಗ್ಗೆ ಯಾರೂ ಹಗುರವಾಗಿ ಮಾತನಾಡಿದ್ದಾಗಲೀ ಮಾಧ್ಯಮದಲ್ಲಿ ಕಾಣುತ್ತಿಲ್ಲ.


ವಿದಾಯ 

ಕೆಲವು ವರ್ಷ ಮದ್ರಾಸಿನಲ್ಲಿ ನೆಲೆಸಿದ್ದ ನರಸಿಂಹರಾಜು ಕನ್ನಡ ಚಿತ್ರಗಳ ನಿರ್ಮಾಣ ಚಟುವಟಿಕೆಗಳು ಬೆಂಗಳೂರಿನಲ್ಲಿ ಆರಂಭವಾದಾಗ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಿಸಲಾಗಿದೆ. ಮಕ್ಕಳು ಮೊಮ್ಮಕ್ಕಳೊಂದಿಗೆ ನೆಲೆಸಿದ್ದ ಕುಟುಂಬವತ್ಸಲ ನರಸಿಂಹರಾಜು, ತಮ್ಮ ೫೬ ನೇ ವಯಸ್ಸಿನಲ್ಲಿ ೧೯೭೯ ರ ಜುಲೈನಲ್ಲಿ ೦ ರಂದು ಎಂದಿನಂತೆ ರಾತ್ರಿ ಉಪಾಹಾರ ಸೇವಿಸಿ ಮಲಗಿದ್ದರು. ಮುಂಜಾನೆ ೪.೩೦ ರ ವೇಳೆಗೆ ತೀವ್ರ ಹೃದಯಾಘಾತದಿಂದ ನಿಧನರಾದರು


ಗಾನಾಸುಮಾ ಪಟ್ಟಸೋಮನಹಳ್ಳಿ

ಗಾನಗಣಿಗಾರಿಕೆ

 ಗಾನಗಣಿಗಾರಿಕೆ



#ಆಕಾಶವೇ_ಬೀಳಲಿ_ಮೇಲೆ ..

#ಬರೆದ_ಮೂಲಕವಿಯ_ಪಾಲಿಗೆ

#ನ್ಯಾಯವು_ದೇವರ ಸಮಯದಲ್ಲಿ_ಇಲ್ಲ ... !!!


==========================


"ಈ..ಮಾತಿಗೆ ಮನವೇ ಸಾಕ್ಷಿ ...!

ಈ ಹಾಡಿಗೆ ದೇವರೇ ಸಾಕ್ಷಿ

ಇನ್ನಾದರೂ ನನ್ನ ನಂಬಿ .... ಎನ್ನುವಂತಿದೆ ಮೂಲ ಕವಿಯ ನಿವೇದನೆ ... !!!


"ತಪ್ಪಾಗಿ ತಿಳಿದು ಬೆಪ್ಪಾದ ಗಂಡು ಗಿಳಿ

ಕಣ್ ಕಣ್ ಬಿಟ್ಟಿತಮ್ಮ ..

ಅದು ತನ್ನಂತೆ

ನಡೆಯದು ಎಂಬ ಸತ್ಯವ ಅರಿಯಿತಮ್ಮ ... "


     ಈ ಸಾಲು "ಬೆಂಕಿಯಲ್ಲಿ ಅರಳಿದ ಹೂವು" ಚಿತ್ರದ ಹಾಡೊಂದರಲ್ಲಿ ಬರುವಂತಹುದು.ಈಗ ಈ ಸಾಲುಗಳು ನೆನಪಾಗೋಕೆ ಕಾರಣವು ಇದೆ. !


"ಆಕಾಶವೇ ಬೀಳಲಿ ಮೇಲೆ..ಎಂಬ ಅತ್ಯುನ್ನತ ಹಾಡೊಂದರ ಸಾಹಿತ್ಯ ಚಿ.ಉದಯಶಂಕರ್ ಅವರಲ್ಲಿದ್ದಾರೆ. ಈ ಸಾಹಿತ್ಯ ಬೇರೊಬ್ಬರದಾಗಿತ್ತು ..! ಮಾತ್ರ ಅಜ್ಞಾನಾತವಾಗಿಯೇ ಉಳಿದುಹೋದ.ಸಾಹಿತ್ಯ ಉದಯಶಂಕರ್ ಹೆಸರಲ್ಲೇ ಜನಪ್ರಿಯವಾಗಿಹೋಯ್ತು ..!

ಆದರಿಯಲ್ಲಿ ಆ ಕವಿ ಆ ಹಾಡನ್ನ ಅಮರಗೊಳಿಸಿದ ಚಿ.ಉದಯಶಂಕರ್ ರನ್ನ ಕೊಂಡಾಡುತ್ತಾರೆ ಇಲ್ಲಿ ಆಕಸ್ಮಿಕವೆಂಬಂತೆ ...! ಸಾವಿರಾರು ಹಾಡುಗಳ ಸರಾಗವಾಗಿ ಬರೆದ ಉದಯಶಂಕರ್ ತಮ್ಮ ಹಾಡುಗಳಿಗೆ ಮೂಲ ಪ್ರೇರಣೆ ದಾಸ ಸಾಹಿತ್ಯ, ವಚನ ಸಾಹಿತ್ಯಗಳೇ ಕಾರಣವೆಂದು ಹೇಳಿದ್ದರು.ಹಾಗೆ ಈ ಹಾಡು ಕೂಡ ಯುವ ಕವಿ ಬರೆದ ಕವಿತೆಯೊಂದರ ಸ್ಪೂರ್ತಿ ಕೂಡ.


   ಈ ಚಿತ್ರರಂಗದಲ್ಲಿ ಈ ರೀತಿಯ ಸನ್ನಿವೇಶಗಳು ಆಕಸ್ಮಿಕ, ಅಚಾನಕ್ ಅಂದುಕೊಂಡರೂ ಎಷ್ಟೋ ಹಿರಿಯ ಸಾಹಿತಿಗಳ ಬಳಿ, ಸಂಗೀತ ನಿರ್ದೇಶಕರ ಬಳಿ ಉದರ ನಿಮಿತ್ತವಾಗಿ ಕೆಲಸಕ್ಕೆ ಸೇರಿ ಅವರ ಆಣತಿಯಂತೆ ತಮ್ಮ ಮಸ್ತಕದ ಪದಗಳ ಗೀಚಿದರೂ ಅದನ್ನು ತೆರೆಯಲು ಅವರ ಹೆಸರಿನಲ್ಲಿ ಮೂಡಿ ಬರುತ್ತಿದೆ ..! ಏಕೆಂದರೆ ಅವರ ಬರವಣಿಗೆ ಹಣಕ್ಕೆ ಮಾರಾಟವಾಗಿಬಿಟ್ಟಿರುತಿತ್ತು ..! ಅಲ್ಲಿ ತಮ್ಮದೇ ಬಸಿರಾದರೂ..ಹೆಸರು ಮತ್ತಾರದೋ ಆಗಿರುತಿದ್ದ ಅದೆಷ್ಟೋ ಹಾಡುಗಳು ಪರದೇಕೇ ಪೀಚೇ ಬಹಳಷ್ಟಿವೆ ..! ಇಲ್ಲಿ ಉದಯಶಂಕರ್ ಯುವ ಕವಿಯವರ ಕವಿತೆ ಮೆಚ್ಚಿ, ಇಟ್ಟುಕೊಂಡು ಬಳಸಿದ ಘಟನೆ ನಿಜಕ್ಕೂ ಕವಿತೆ ಶ್ರೇಷ್ಠತೆ ಎಂದುಕೊಳ್ಳುವೆ. ನಮ್ಮ ಜೊತೆ ಹಂಚಿಕೊಂಡ ಮೂಲ ಕವಿ ಅಣ್ಣಾವ್ರ ಅಪ್ಪಟ ಅಭಿಮಾನಿ

#ಹಾಲುಜೇನುರಾಮ್_ಕುಮಾರ್ ..!


ಆ ಮೂಲ ಕವಿಯ ಮಾತಿಗೂ ಮುನ್ನ ಹಾಡಿನ ಕುರಿತು ಒಂದಷ್ಟು ತಿಳಿಯೋಣ ..


ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದ "ಕಾವೇರಿ" ಮತ್ತು "ಲೋಕಪಾವನಿ" ನದಿಯ ದಡದಲ್ಲಿರುವ "ಕರಿಘಟ್ಟ" ಎಂಬ ಹಸಿರ ಸಿರಿಯ ತಾಣದಲ್ಲಿ ಚಿತ್ರೀಕರಣವಾದ ಈ ಹಾಡು ಕೇಳದವರೇ ಇಲ್ಲ.ನಮ್ಮ ವಾದ್ಯಗೋಷ್ಠಿ ಯಲ್ಲಂತೂ ವಧುವರರು ತಾಳಿ ಕಟ್ಟುವ ಹೊತ್ತಿಗೆ ನಾವು ಸದಾ ಹಾಡುವ ಹಾಡು ಇದೇ.

ಈ ಹಾಡಿಗೆ ಅಣ್ಣಾವ್ರು ಮತ್ತು ಬಿ.ಸರೋಜಾದೇವಿ ಅಭಿನಯ ಎಲ್ಲಾ ಯುವ ಪ್ರೇಮಿಗಳ "ಪ್ರೇಮಗೀತೆ" ಯಾಗಿ ಮನದಲ್ಲಿ ಉಳುದುಬಿಡುವಂತ ಮಹೋನ್ನತ ಹಾಡಿದು.

ಹಾಗೆ ಇದರ ಸಾಹಿತ್ಯ ಕೊಂಚ ಗಮನಿಸಿ ...

ಹಸೆಮಣೆಯು ನಮಗೆ ಇಂದು

ನಾವು ನಿಂತ ತಾಣವು

ತೂಗಾಡುವ ಹಸಿರೆಲೆಯೆ

ಶುಭಕೋರುವ ತೋರಣವು

ಹಕ್ಕಿ ಗಳ ಚಿಲಿಪಿಲಿ ಗಾನ

ಮಂಗಲಕರನಾದವು

ಈ ನದಿಯ ಕಲರವವೇ

ಮಂತ್ರಗಳ ಘೋಷವು

ಸಪ್ತಪದಿ ಈ ನಡೆಯಾಯ್ತು

ಸಂಜೆರಂಗು ಆರತಿಯಾಯ್ತು ...

ಇಂದೀಗ ಸಮಯದಲ್ಲಿ ಜೀವ ಬೆರೆತೂ

ಸ್ವರ್ಗವಾಯ್ತು ... "


  ಪ್ರೇಮಿಗಳಿಬ್ಬರು ತಮ್ಮ ಪಾಣಿಗ್ರಹಣಕ್ಕೆ ಪಕೃತಿಯನ್ನೇ ವೇದಿಕೆ ಮಾಡಿ, ಸಾಕ್ಷಿ ಮಾಡಿ ಹಾಡುವಂತ ಈ ಸಾಹಿತ್ಯ, ಪಿ.ಬಿ.ಎಸ್ ಗಾಯನ, ರಾಜನ್ ನಾಗೇಂದ್ರ ರ ಸುಮಧುರ ಸಂಗೀತ ಈ ಹಾಡು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ಸ್ವಚ್ಛ ಸುಂದರಗೀತೆ.

ಇಂತಹ ಅನನ್ಯ ಗೀತೆ ಬರೆದ ಕವಿ ಯಾರು? ಗೊತ್ತೆ?

ಅದಕ್ಕೂ ಮೊದಲು ಈ ಚಿತ್ರದ ಕುರಿತು ಒಂದಷ್ಟು ಮಾಹಿತಿ.


   1971 ರ ಹೊತ್ತಿನಲಿ ಬಿಡುಗಡೆಯಾದ ಅಣ್ಣಾವ್ರ ಚಿತ್ರ "ನ್ಯಾಯವೇ ದೇವರು".

ನಿರ್ದೇಶಕ ಸಿದ್ದಲಿಂಗಯ್ಯ "ಬಂಗಾರದ ಮನುಷ್ಯ" ಚಿತ್ರ ಮಾಡುವುದಕ್ಕೆ ಎರಡು ವರ್ಷದ ಹಿಂದೆ ನಿರ್ದೇಶನ ಮಾಡಿದ ಚಿತ್ರ "ನ್ಯಾಯವೇ ದೇವರು".


  ಅಶ್ವತ್ಥ್ ನಿವೃತ್ತ ನ್ಯಾಯಾಧೀಶ. ಆತನ ಮಗ ರಘು (ರಾಜಕುಮಾರ್) ರಘು ಹರಟೆಮಲ್ಲಿ ಲಲಿತಳನ್ನು (ಆರತಿ) ಮದುವೆ ಆಗಲೆಂದು ಅವಳ ತಂದೆ (ಸಂಪತ್) ಮತ್ತು ಅಶ್ವತ್ಥ್ ಇಬ್ಬರಿಗೂ ಆಸೆ. ಆದರೆ ರಘುವಿಗೆ ಸೈಲೆಂಟ್ ಶಾಂತಿ (ಬಿ. ಸರೋಜಾದೇವಿ) ಇಷ್ಟ.


ಅಶ್ವತ್ಥ್ ಶಾಂತಿಗೆ ದುಡ್ಡು ಕೊಟ್ಟು ಮಗನನ್ನು ಮರೆಯಲು ಹೇಳಿದರೂ ಒಂದು ಮಳೆಯ ರಾತ್ರಿ ರಘು ಶಾಂತಿ ಒಂದಾಗುತ್ತಾರೆ. ಶಾಂತಿ ಆ ರಾತ್ರಿ ಅಲ್ಲಿಂದ ಯಾರಿಗೂ ಹೇಳದೆ ಹೊರಟು ಹೋದಾಗ ಇವಳ ಸೀರೆ ಉಟ್ಟು ಇವಳ ಬ್ಯಾಗ್ ಕದ್ದಾಕಿ ರೈಲಿಗೆ ಸಿಕ್ಕಿಕೊಂಡಾಗ ಶಾಂತಿ ಆತ್ಮಹತ್ಯೆ ಮಾಡಿಕೊಂಡಳೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅವಳು ಅವಳ ಚಿಕ್ಕಪ್ಪ ಎಂ. ಪಿ. ಶಂಕರ್ ಕೊಲೆ ಆಪಾದನೆ ಮೇಲೆ ಕೋರ್ಟಿಗೆ ಬಂದಾಗ ಜಡ್ಜ್ ರಘುವಿಗೆ ಶಾಕ್.


ಪಾಪಮ್ಮ ಶಾಂತಿಯ ತಾಯಿ. ದಿನೇಶ್ ಕಳ್ಳ ಸಾಗಾಣಿಕೆ ಮಾಡುತ್ತಾನೆ. ಅವನ ಮಗ ವಿವೇಕ (ದಿವಂಗತ ನಟ ರಮೇಶ್) ಪಬ್ಲಿಕ್ ಪ್ರಾಸಿಕ್ಯೂಟರ್ ದ್ವಾರಕೀಶ್ ಕುಡುಕ ಲಾರಿ ಚಾಲಕ. ಅವನ ಮೂಗಿ ಪತ್ನಿ ಬಿ. ಜಯಾ


ಆರತಿಯ ಡಯಲಾಗ್ ಡೆಲಿವರಿ ಬಲು ವಿಶಿಷ್ಟ! ಪಿಬಿಎಸ್ ಕುಣಿದಾಡುವ ವಯಸಿದು ಮತ್ತು ಎವರ್ ಗ್ರೀನ್ ಆಕಾಶವೆ ಬೀಳಲಿ ಮೇಲೆ. ಪಿ ಸುಶೀಲ ಅವರ ಎಂದೆಂದೂ ನೀವು ಸುಖವಾಗಿರಿ ಮತ್ತು ಎಸ್ ಪಿ ಬಿ ಅವರ ಪರಮಾತ್ಮ ಆಡಿಸಿದಂತೆ ಆಡುವೆ ನಾನು. ನಾಲ್ಕೂ ಚಂದದ ಹಾಡುಗಳು.


ರಾಜ್ ಕುಮಾರ್ ಸರೋಜಾದೇವಿ ಸಲೀಂ ಅನಾರ್ಕಲಿ ನಾಟಕ ಸಿನಿಮಾಗೆ ಪೂರಕ. ಅಕ್ಬರ್ ಆಗಿ ವಜ್ರಮುನಿ ಬಹಳ ಚೆನ್ನ.

ಅಣ್ಣಾವ್ರು ಎಲ್ಲ ತರಹದ ಎಮೋಶಗಳನ್ನು ನಿರ್ವಹಿಸಿ ಮಿಂಚಿದ್ದಾರೆ.


 ಹೀಗೆ ತಯಾರಾದ ಈ ಚಿತ್ರದ "ಆಕಾಶವೇ ಬೀಳಲಿ ಮೇಲೆ ... ಹಾಡು ಹುಟ್ಟಿದ್ದು, ಅದು ಚಿ.ಉದಯಶಂಕರ್ ಕೈ ಸೇರಿದ್ದು, ನಂತರ ಮಾರ್ಪಾಡಾಗಿ ಅಣ್ಣಾವ್ರ ಶ್ರೇಷ್ಠ ಹಾಡುತ್ತಿರುವುದು ಹೇಗೆ ಈ ಕವಿತೆ ಬರೆದ ಆ ಉದಯೋನ್ಮುಖರ ಮಾತಿನಲ್ಲೇ ಕೇಳೋಣ ....


"ಗಾನಾಸುಮ ಪಟ್ಟ ಸೋಮನಹಳ್ಳಿ ಯವರ ಅಭಿಲಾಶೆಯ ಮೇರೆಗೆ ...


** ಆಕಾಶವೇ ಬೀಳಲಿ ಮೇಲೆ- ರಚನಕಾರ ತೆರೆಯುವ ಮರೆಯಲ್ಲಿ? **


ನ್ಯಾಯವೇ ದೇವರು ಚಿತ್ರದ -ಆಕಾಶವೇ ಬೀಳಲಿ ಮೇಲೆ -ಈ ಗೀತೆ ಇಂದು ಜನಮಾನಸದಲ್ಲಿ ಒಂದು ಶ್ರೇಷ್ಠ ಗೀತೆ. ಸರ್ವಕಾಲಕ್ಕೂ ಅನ್ವಯವಾಗುವ ಒಂದು ಶುದ್ಧ ಪ್ರೇಮ ಗೀತೆ. ಒಂದರ್ಥದಲ್ಲಿ ಅದು ಭಾವಗೀತೆ, ಪ್ರೇಯಸಿಗೆ ಭರವಸೆಯ ಗೀತೆ ಇತ್ಯಾದಿ ... ಹೀಗೆ ಪ್ರಶಂಸೆಗೆ ಪಾತ್ರವಾಗಿರುವ ಈ ಗೀತೆಯ ಶ್ರೇಯ ಮಧುರ ರಾಗ ಸಂಯೋಜನೆ ಮಾಡಿದ ಸಂಗೀತ ನಿರ್ದೇಶಕರಾದ ರಾಜನ್-ನಾಗೇಂದ್ರ, ಅಮರ ಗಾಯನ ಸುಧೆ ಹರಿಸಿದ ಪಿ.ಬಿ.ಶ್ರೀನಿವಾಸ್, ಗೀತೆಗೆ ತನ್ನ ಶ್ರೇಷ್ಠ ಅಭಿನಯದಿಂದ ಜೀವ ನೀಡಿದ ರಾಜ್ ಕುಮಾರ್ ರ ಜೊತೆಗೆ ಈ ಗೀತೆಯ ಕರ್ತೃವಿಗೂ ಸೇರುತ್ತದೆ ಅಲ್ಲವೇ? ಆ ಕರ್ತೃ ದಾಖಲೆಗಳ ಪ್ರಕಾರ ಸಾಹಿತ್ಯರತ್ನ ಚಿ.ಉದಯಶಂಕರ್. ಆದರೆ ವಾಸ್ತವದಲ್ಲಿ ಇಲ್ಲಿ ಮತ್ತೊಬ್ಬ ಅಪರಿಚಿತ ವ್ಯಕ್ತಿಯ ಅವಕಾಶವಿದೆ. ಆತ ಒಬ್ಬ ಸಾಮಾನ್ಯ ಲೇಖಕ. ಕಥೆ-ಕವನ ಅವನ ಹವ್ಯಾಸ ಅಷ್ಟೇ. ಕೇವಲ ಆಪ್ತರಿಗಷ್ಟೇ ವೇದ್ಯವಾಗಿದ್ದ ಅವನ ಪ್ರತಿಭೆ ಹೊರಬರಲೇ ಇಲ್ಲ. ಎಲೆ ಮರೆಯ ಕಾಯಿಯ ತೆರದಿ ಆತ ಅಡಗಿ ಕುಳಿತ. ಲೇಖಕನಾಗಲಿಲ್ಲ.ಪತ್ರಕರ್ತನಾಗಲಿಲ್ಲ, ಪತ್ರಿಕಾ ವರದಿಗಾರನಾಗಲಿಲ್ಲ. ಬದಲಾಗಿ ಸಾವಿರ ಮಂದಿಯಲ್ಲಿ ಒಬ್ಬರಂತೆ ಜೀವನೋಪಾಯಕ್ಕಾಗಿ ಒಬ್ಬ ಬ್ಯಾಂಕ್ ಉದ್ಯೋಗಿಯಾದ.

೧೯೭೧ ರಲ್ಲಿ ಆತ ತಾನು ರಚಿಸಿ ಬಹುವಾಗಿ ಮೆಚ್ಚಿದ ಐದು ಕವನಗಳನ್ನು ಪರಾಮರ್ಶೆಗಾಗಿ, ವಿಮರ್ಶೆಗಾಗಿ ಚಿ.ಉದಯ ಶಂಕರ್ ರವರಿಗೆ ನೀಡಿದರು. ಅದರಲ್ಲಿ ಎರಡನ್ನು ಮೆಚ್ಚಿ ಚಿ.ಉದಯಶಂಕರ್ ತಮ್ಮ ಬಳಿಯೇ ಉಳಿಸಿಕೊಂಡರು. ಅದರಲ್ಲಿ ಒಂದು ಈ ಆಕಾಶವೇ ..... ಆ ಕವನದಲ್ಲಿದ್ದ ಕಲ್ಪನೆ, ಪದಗಳ ಬಳಕೆಯನ್ನು, ಹೋಲಿಕೆಯನ್ನು ಬಹುವಾಗಿ ಮೆಚ್ಚಿದ ಅವರು ಸ್ವೈಚ್ಛೆಯಿಂದ ನ್ಯಾಯವೇ ದೇವರು ಚಿತ್ರದಲ್ಲಿ ಬಳಸಿದ್ದಾರೆ. ನಿರ್ಮಾಪಕ-ನಿರ್ದೇಶಕರು ಒಪ್ಪದ ಕಾರಣ ಅವರು ಆ ಗೀತೆಗೆ ಆ ಯುವಕನ ಹೆಸರು ಹಾಕಲಾಗಲಿಲ್ಲ. ತುಂಬಾ ನೋವಿನಿಂದಲೇ ಆ ಗೀತೆಗೆ ತಮ್ಮ ಹೆಸರನ್ನು ಬಳಸಿದರು. ಆದರೆ ಹಾಗೆ ಮಾಡುವ ಮುನ್ನ ಆ ಯುವಕನ ಒಪ್ಪಿಗೆಯನ್ನು ಪಡೆಯಲು ಅವರಿಗೆ ಮರೆಯಲಾಗಲಿಲ್ಲ.

ಒಂದಂತೂ ನಿಜ. ಆ ಗೀತೆಯಲ್ಲಿ ನೀವು ಕಾಣುವ ಪದ ಜೋಡಣೆ (ಟ್ಯೂನಿಗೆ ಅನುಸಾರವಾಗಿ) ಚಿ.ಉದಯ ಶಂಕರ್ ರವರದ್ದೇ. ಆದರೆ ಆ ಗೀತೆಯ ಪರಿಕಲ್ಪನೆ, ಪದಗಳ ಆಯ್ಕೆ, ಹೋಲಿಕೆ ಎಲ್ಲ ಆ ಯುವಕನದು. ರಾಜ್ ಕುಮಾರ್ ಅಭಿಮಾನಿಯಾದ ಆತನಿಗೆ ತನ್ನ ಕಲ್ಪನೆಯೇ ಹಾಡಿಗೆ ತನ್ನ ಆರಾಧ್ಯ ದೈವ ಅಭಿನಯವನ್ನು ಮರೆಯಲಾಗದ ಸವಿ ನೆನಪು. ಆ ಆಟಗಾರ ಆತ ಅದೃಷ್ಟವಂತ. ಆದ್ರೆ ಎಲ್ಲರಲ್ಲೂ ಅದನ್ನು ವ್ಯಕ್ತಪಡಿಸುವ ಸ್ಥಿತಿಯಲ್ಲಿ ಇಲ್ಲದ ದುರದೃಷ್ಟಶಾಲಿ ಕೂಡ ಆತನೇ.

ಇಲ್ಲಿ ಚಿ.ಉದಯ ಶಂಕರ್ ರವರ ತಪ್ಪು ಲವಲೇಶವೂ ಇಲ್ಲ. ಅವರನ್ನು ಯಾರೂ ನಿಂದಿಸವುದು ಬೇಡ. ಕೊನೆಯ ಪಕ್ಷ ರಾಜ್ ಕುಮಾರ್ ಅಭಿಮಾನಿಗಳಲ್ಲಿ ಆ ಗೀತೆಯಲ್ಲಿ ತನ್ನ ಅಳಿಲು ಸೇವೆ ಇದೆ ಎಂದು ಆತ ಹಂಚಿಕೊಂಡು ಸಂತೋಷಿಸಲಿ. ಅದೇ ಈ ಲೇಖನದ ಉದ್ದೇಶ. 

ಕೊನೆಯದಾಗಿ, ಆ ಯುವಕ ಯಾರು ಗೊತ್ತೇ? ರಾಜ್ ಕುಮಾರ್ ಅನನ್ಯ ಅಭಿಮಾನಿಯಾದ ಬಹುಜನರ ಪ್ರೀತಿಯ ಹಾಲು ಜೇನು ರಾಮಕುಮಾರ್ ಆದ ನಾನೇ.

ಅಂದು ಚಿ.ಉದಯಶಂಕರ್ ರವರಿಗೆ ನಾನು ನೀಡಿದ ಕವನ ಇಲ್ಲಿದೆ. ಇದು ನೆನಪಿಗಾಗಿ ನಾನು ಬರೆದಿಟ್ಟುಕೊಂಡಿರುವುದು (ಅವರಿಗೆ ನೀಡಿದ ಮೇಲೆ ಬಹಳ ದಿನಗಳ ನಂತರ) .ಅಲ್ಪ ಸ್ವಲ್ಪ ವ್ಯತ್ಯಾಸ-ತಪ್ಪು ಮಾಡಬಹುದು. ಕಾರಣ ನೆನಪಿಸಿಕೊಂಡು ಮತ್ತೆ ಬರೆದಿರುವ ಕಾರಣ.


ಆಕಾಶವು ಬಿದ್ದರೂ ಸರಿಯೇ 

ನಾನಿರುವೆ ಜೊತೆ ಜೊತೆಗೆ 

ಭೂಮಿಯು ಬಾಯ್ಬಿಟ್ಟರು ಸರಿಯೇ 

ನೀನಿರುವೆ ನನ ಎಡೆಯೊಳಗೆ   

ನಾನಿರಲು ನಿನಗಾಗಿ 

ಇರಲಾರೆಯ ನೀ ನನಗಾಗಿ 


ಒಡನಾಡಿ ನಾನಿರುವಾಗ

ಹೆದರಿಕೆಯೂ ನಿನಗೇಕಿಗ?

ಬಾಳ ಪಯಣದಿ ನೀ ನಡೆವಾಗ 

ಜೊತೆ ಜೊತೆಗೆ ನಾ ಬರುವೆ ತೋರುತಲಿ ಅನುರಾಗ

ಕಲ್ಲು ಮುಳ್ಳ ಹಾದಿಯಲಿ ಮೊದಲ ಹೆಜ್ಜೆಯ ಸರದಿ ನನಗೆ 

ನೀ ಬರುವ ಹಾದಿಯಲಿ ಇಟ್ಟು ಹೂವ ಹಾಸಿಗೆ


ಈ ಮಾತಿಗೆ ದೇವರ ಸಾಕ್ಷಿ ಬೇಕೇತಕೆ? ಭಯದೇ

ನೀನೆ ತುಂಬಿರುವ ನನ ಮನದಲ್ಲಿಸಾಕ್ಷಿ ಸಾಲದೇ 

ಮನದಾಳದಿ ನಿನ್ನಾ ನೆನಪೇ ತುಂಬಿ  

ನಾನಾಗೆನು ಬಳಕೆಯ ಮಧು ಹೀರಿ ಮರೆವ ದುಂಬಿ

ದಯಮಾಡಿ ನನ್ನ ನಂಬಿ

ಸುಂದರವೀ ವದನದಲಿ ಮಂದಹಾಸ ತುಂಬಿ 


ನಾವು ನಿಂತ ತಾಣದಿ ಹಸಮಣೆಯ ಕಲ್ಪನೆ

ಶುಭ ಕೋರುವ ತೋರಣವ ಹಸಿರೆಲೆಯಲಿ ಕಲ್ಪನೆ 

ಮಂತ್ರಘೋಷವಾಗಲೀ ಈ ನದಿಯ ಕಲರವವು

ಮಂಗಳಕರ ನಾದಕೆ ಹಕ್ಕಿಗಳ ಚಿಲಿಪಿಲಿ ಗಾನವು

ಜೊತೆಯಾಗಿ ನಡೆವುದೇ ಸಪ್ತಪದಿ ಭಾವನೆ 

ಸಂಜೆಗೆಂಪು ನೀಡಲಿ ಆರತಿಯ ಬಣ್ಣನೆ

  

ನಾವೀಗ ಭಯ ತೊರೆದು 

ಅನುರಾಗದ ಸಾಗರದಿ ಮಿಂದು 

ನೋವ ಮರೆಯುವ

ಜೋಡಿ ಹಕ್ಕಿ ಯಾಗುವ

ಸ್ವರ್ಗವಾ ಸೇರುವ 

ನಲಿವಾ ಹೊಂದುವ


*********************************** ಚಿ.ಉದಯಶಂಕರ್ ಮಾರ್ಪಡಿಸಿ ಸಿನಿಮಾಕ್ಕೆ ಒಗ್ಗಿಸಿದ ಸಾಹಿತ್ಯ ಹೀಗಿದೆ


ಚಿತ್ರ: ನ್ಯಾಯವೇ ದೇವರು

ಸಾಹಿತ್ಯ: ಚಿ.ಉದಯಶಂಕರ್

ಸಂಗೀತ: ರಾಜನ್-ನಾಗೇಂದ್ರ

ಗಾಯನ: ಪಿ .ಬಿ ಎಸ್

ನಿರ್ದೇಶನ: ಸಿದ್ದ್ದಲಿಂಗಯ್ಯ


ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು

ಭೂಮಿಯೇ ಬಾಯ್ಬಿಡಲಿ ಇಲ್ಲೇ ನಿನ್ನ ನಿನ್ನ ಕೈ ಬಿಡೆನು

ನೀನಿರುವುದೇ ನನಗಾಗಿ ಈ ಜೀವ ನಿನಗಾಗಿ

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು


ಹೆದರಿಕೆಯ ನೋಟವೇಕೆ, ಒಡನಾಡಿ ನಾನಿರುವೆ

ಹೊಸ ಬಾಳಿನ ಹಾದಿಯಲ್ಲಿ, ಜೊತೆಗೂಡಿ ನಾ ಬರುವೆ

ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನೇಡೆವೆ 

ನೀ ಅಡಿಯ ಇಡುವೆಡೆಯಲ್ಲಿ ಒಲವಿನ ಹೂ ಹಾಸುವೆ

ಈ ಮಾತಿಗೆ ಮನವೇ ಸಾಕ್ಷಿ ಈ ಭಾಷೆಗೆ ದೇವರೇ ಸಾಕ್ಷಿ

ಇನ್ನಾದರೂ ನನ್ನ ನಂಬಿ ನಗೆಯಾ ಚೆಲ್ಲು ಚೆಲುವೆ


ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು

ಭೂಮಿಯೇ ಬಾಯ್ಬಿಡಲಿ ಇಲ್ಲೇ ನಿನ್ನ ನಿನ್ನ ಕೈ ಬಿಡೆನು


ಹಸೆಮಣೆಯೂ ನಮಗೆ ಇಂದು ನಾವು ನಿಂತ ತಾಣವು

ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು

ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು

ಈ ನದಿಯ ಕಲರವವೇ ಮಂತ್ರಗಳ ಘೋಷಣೆ

ಸಪ್ತಪದಿ ಈ ನಡೆಯಾಯ್ತು ಸಂಜೆ ರಂಗು ಆರತಿಯಾಯ್ತು

ಇಂದೀಗ ಎರಡು ಜೀವ ಬೆರೆತು ಸ್ವರ್ಗವಾಯ್ತು 


ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು

ಭೂಮಿಯೇ ಬಾಯ್ಬಿಡಲಿ ಇಲ್ಲೇ ನಿನ್ನ ನಿನ್ನ ಕೈ ಬಿಡೆನು

ನೀನಿರುವುದೇ ನನಗಾಗಿ ಈ ಜೀವ ನಿನಗಾಗಿ 


ಹೀಗೆ ಕನ್ನಡ ಚಿತ್ರರಂಗದ ಅದ್ಬುತ ಹಾಡಿನ ಹಿಂದಿನ #ಗಾನಗಣಿಗಾರಿಕೆ ನಿಮಗಾಗಿ ... ನಿಮ್ಮ ಮಡಿಲಿಗೆ ..

ಮೂಲ ಸಾಹಿತಿಯ ರಚನೆಗೆ ನಿಮ್ಮ ಹಾರೈಕೆ ಹೇಳಿಬಿಡಿ.


  ಗಾನಾಸುಮಾ ಪಟ್ಟಸೋಮನಹಳ್ಳಿ

ಸೋಮವಾರ, ಆಗಸ್ಟ್ 23, 2021

ಗಾನಗಣಿಗಾರಿಕೆ-_3




 ಹಳ್ಳಿದಾರಿಯಲ್ಲಿ ... ಹಾಡಿನ ಕೋಕಿಲಮೋಹನ್ ಗೆ ಜನುಮದಿನದ ಶುಭಾಶಯಗಳು

ವಿಶೇಷ ಗಾನಗಣಿಗಾರಿಕೆ


"ಕೋಕಿಲ" ಎಂಬ ತಮ್ಮ ಮೊದಲ ಕನ್ನಡ ಚಿತ್ರದಿಂದಲೇ ಚಿತ್ರದ ಹೆಸರನ್ನ ತನ್ನ ಹೆಸರಿನೊಂದಿಗೆ ಸೇರಿಸಿಕೊಂಡು ಕನ್ನಡ ತಮಿಳಿನ ಚಿತ್ರರಂಗದಲ್ಲಿ ಯಶಸ್ಸಿನ ಶಿಖರ ಏರಿದವರು ಕೋಕಿಲ ಮೋಹನ್.


  ಇಂದು ಅವರ ಜನುಮದಿನ.


 ಕೋಕಿಲ ಮೋಹನ್ ಎಂದಾಕ್ಷಣ ನನಗೆ ತಟ್ಟನೆ ನೆನಪಾಗೋದು "ಮುನಿಯನ ಮಾದರಿ" ಚಿತ್ರದ ಹಳ್ಳಿದಾರಿಯಲ್ಲಿ..ಮತ್ತು "ಕಾಲ್ಗೆಜ್ಜೆ ತಾಳಕೆ" ಎಂಬ ಹಾಡು ಜೊತೆಗೆ "ಗಾಳಿಮಾತು" ಚಿತ್ರ "ನಮ್ಮೂರ ಸಂತೇಲಿ..ಎನ್ನು ನಾಗೇಂದ್ರ ಹಾಡಿದ ದನಿಗೆ ಅಭಿನಯಿಸಿದ ಆತ ಅದೆಷ್ಟು ಅದೃಷ್ಟವಂತ ನಟ ಎಂದರೆ ಇವರಿಗೆ ಸಿಕ್ಕ ಎಲ್ಲಾ ಹಾಡುಗಳು ಮೆಲೋಡಿಯಸ್ ಹಾಡುಗಳೇ ..!


  "ಹಣ್ಣಿನ ಸೇಡು" ಚಿತ್ರದ "ಬಾನ ಸೂರ್ಯ ದಿಕ್ಕು ತಪ್ಪಿ ... ಎಂಬ ಹಾಡು," ಹಾವಾದ ಹೂವು "ಚಿತ್ರದ" ಒಲವೇ ನೀನಾಗಿ ಬಂದೆ ".. ಎಂಬ ಹಾಡುಗಳೇ ಇದಕ್ಕೆ ಸಾಕ್ಷಿ ಎನ್ನಬಹುದು.

ಇನ್ನೂ ತಮಿಳಿನಲ್ಲಂತೂ ಕೋಕಿಲ ಮೋಹನ್ ಮತ್ತು ಇಳಯರಾಜ ಜೋಡಿಯ ಚಿತ್ರಗಳ ಹಾಡುಗಳಂತೂ ಮಾಧುರ್ಯದ ಹೊಳೆಯಲ್ಲೇ ತೇಲುಸಿಬಿಟ್ಟಂತವು ...


  ಇಂತಹ ಮಹಾನಟನ ಜನುಮದಿನದಂದು ವಿಶೇಷ ಗಾನಗಣಿಗಾರಿಕೆಯಲ್ಲಿ ಅವರ ಕುರಿತು ಲೇಖಕ ಕೆ.ಪುಟ್ಟಸ್ವಾಮಿ ಯವರು "ವಾರ್ತಾ ಭಾರತಿ" ಪತ್ರಿಕೆಯಲ್ಲಿ ಬರೆದ ಆಪ್ತ ಲೇಖನ ಈ ಹೊತ್ತಿನಲ್ಲಿ..ನಿಮಗಾಗಿ ..


ಮೋಹನ್ ಅವರು ಯಶಸ್ಸಿನ ಅಲೆಯ ಮೇಲೆ ತೇಲುತ್ತಿರುವಾಗ ತಮಿಳುನಾಡಿನ ಇಬ್ಬರು ಮಹಾನ್ ತಾರೆಗಳಾದ ರಜನಿ ಮತ್ತು ಕಮಲ್ ಸಹ ಕ್ರಿಯಾಶೀಲರಾಗಿದ್ದರು. ಅವರಿಗೆ ತಮ್ಮದೇ ಆದ ಅಭಿಮಾನಿಗಳ ಗುಂಪು, ವೈಯಕ್ತಿಕ ವರ್ಚಸ್ಸಿತ್ತು. ಆದರೆ ಇದಾವುದರ ನೆರವಿಲ್ಲದೆಯೇ ಹತ್ತು ವರ್ಷಗಳಿಗಿಂತಲೂ ಕಡಿಮೆ ಕಡಿಮೆ 80 ಚಿತ್ರಗಳಲ್ಲಿ ನಟಿಸಿ, ಆ ಸೂಪರ್ಸ್ಟಾರ್ಗಳ್ಯಾರೂ ನೀಡದಷ್ಟು ಪ್ರಮಾಣದ ಹಿಡಿತಗಳನ್ನು ನೀಡಿದ ಕನ್ನಡದ ಕೋಕಿಲ ಮೋಹನ್, ಹೆಸರಿನ ದಶಕದ ಸುಮಧುರ ಹಾಡುಗಳು, ನವಿರು ಭಾವದ ಪ್ರೀತಿಯ ಸೆಳೆತವನ್ನು ಪ್ರೇಕ್ಷಕರ ಎಡೆಗೆ ದಾಟಿಸಿದ ಮಾಯಕಾರ!


ಚಲನಚಿತ್ರರಂಗದಲ್ಲಿನ ಯಶಸ್ಸು ಅದೃಷ್ಟದಾಟ ಎಂದು ಹಲವರು ನಂಬುತ್ತಾರೆ. ಯಶಸ್ಸಿಗೆ ಸರಿಯಾದ ಕಾರಣಗಳನ್ನು ತರ್ಕಿಸಲಾಗದ ಕಾರಣ ಈ ನಂಬಿಕೆ ಘನವಾಗಿದೆ. ಅದಕ್ಕೆ ಸಾಕಷ್ಟು ದೃಷ್ಟಾಂತಗಳು ದೊರೆಯುತ್ತವೆ ಕೆಟ್ಟುಹೋಗಿದೆ ಜೊತೆಗೆ ನಂಬಿಕೆಗೆ ಮತ್ತಷ್ಟು ಬಲ ಬಂದಿದೆ ಕಾರಣಗಳಿಂದಾಗಿ ಸಾಧಾರಣ ನಟನಾದ ಹಿಂದಿಯ ರಾಜೇಂದ್ರ ಕುಮಾರ್ ಅವರು 'ಜುಬಿಲಿ ಕುಮಾರ್' ಆಗಲು ಹೇಗೆ ಸಾಧ್ಯ. 'ಮಾಣುಸ್' (ಮರಾಠಿ) ಮತ್ತು 'ಆದ್ಮಿ' (ಹಿಂದಿ) ಚಿತ್ರದ ಪಾತ್ರದಿಂದ ದಿನ ಬೆಳಗಾಗುವುದರೊಳಗೆ ತಾರೆಯಾದ ನಟಿ ಶಾಂತಾ ಹುಬ್ಳೀಕರ್ ಮೂರ್ನಾಲ್ಕು ಹೇಗೆ ಅಜ್ಞಾತವಾಗುತ್ತಿದೆ?


ಇವೆಲ್ಲವೂ ಅದೃಷ್ಟದ ಲೀಲೆಯಲ್ಲದೆ ಮತ್ತೇನು? ಅಥವಾ ಅದಕ್ಕೂ ಮೀರಿದ ವಿದ್ಯಮಾನಗಳ ಪ್ರಭಾವವೇ? ಒಂದು ಕಾಲದಲ್ಲಿ ತಮಿಳು ಚಲನಚಿತ್ರರಂಗದ ಇಬ್ಬರು ಸೂಪರ್ಸ್ಟಾರ್'ಗಳಿಗೆ ನಿದ್ದೆಗೆಡಿಸಿದ ನಟ ಮೋಹನ್ ಇದ್ದಕ್ಕಿದ್ದಂತೆ ಒಂದೇ ಬಾರಿಗೆ ಅದೃಶ್ಯವಾದದ್ದು ಹೇಗೆ?


ಹೌದು! ನಾನು ಹೇಳುತ್ತಿರುವುದು ಅದೇ ಮೋಹನ್! ಬೆಂಗಳೂರಿನ ವೇದಿಕೆಗಳಲ್ಲಿ ಮೈಕ್ ಹಿಡಿದು ನಟರ ಧ್ವನಿಗಳನ್ನು ಅನುಕರಿಸುತ್ತಾ ಚಪ್ಪಾಳೆ ಗಿಟ್ಟಿಸುತ್ತಿರುವ 'ಮೈಕ್' ಮೋಹನ್! 'ಮಿಮಿಕ್ರಿ' ಮೋಹನ್ ಎಂದೇ ಗೆಳೆಯರ ನಡುವೆ ಪರಿಚಿತರಾಗಿ, ಬಿ.ವಿ. ಕಾರಂತರ ಬೆನಕ ರಂಗತಂಡದಲ್ಲಿ ನಟನಾಗಿ, ('ಸತ್ತವರ ನೆರಳು' ನಾಟಕದ ಮೇಳದಲ್ಲಿ ಒಬ್ಬ ಪಾತ್ರಧಾರಿ ಸುಂದರರಾಜ್ ಜೊತೆ ಹಾಡುತ್ತಿದ್ದದ್ದು ಈಗಲೂ ನೆನಪಿದೆ) ಬಾಲು ಮಹೇಂದ್ರ ಅವರ ಚೊಚ್ಚಲ ಪ್ರಯತ್ನ 'ಕೋಕಿಲ' ಚಿತ್ರದ ನಾಯಕನಟ ಕಮಲಹಾಸನ್ ಜೊತೆ ಉಡಾಫೆಯ ಗೆಳೆಯನ ಪಾತ್ರದಲ್ಲಿ ಮಿಂಚಿ 'ಕೋಕಿಲಾ ಮೋಹನ್' ಎಂದೇ ಪರಿಚಿತರಾದ ಅದೇ ಮೋಹನ್?


ನೋಡಲು ಬಡವರ ಕಮಲ್ ಹಾಸ್ಯನಂತಿದ್ದ (ನಂತರ ಅವರನ್ನು ಸ್ವೀಕರಿಸಲಾಗಿದೆ) ಮೋಹನ್ ಅವರ ಚಿತ್ರಯಾತ್ರೆ ಯಾರ ರೋಚಕ ಕಥೆಯ ಚಿತ್ರಕ್ಕೂ ಕಡಿಮೆಯಿಲ್ಲ. ನೋಡುನೋಡುತ್ತಿರುವಂತೆ ಆಕಾಶವನ್ನು ವ್ಯಾಪಿಸುವ ಧೂಮಕೇತು ಮತ್ತು ಕ್ಷಣಮಾತ್ರ ಉರಿದು ಉದುರುವ ಉಲ್ಕೆಗಳ ಆಕಾಶದ ವಿದ್ಯಮಾನಕ್ಕೆ ಮಾತ್ರ ಅವರ ವೃತ್ತಿ ಬದುಕನ್ನು ಹೋಲುತ್ತದೆ.


ಬಾಲು ಮಹೇಂದ್ರ ಅವರ ಮೊದಲ ಚಿತ್ರ ಕನ್ನಡದ 'ಕೋಕಿಲಾ' (1977) ಚಿತ್ರದ ನಾಯಕ ನಟ ಕಮಲ್ ಹಾಸನ ಗೆಳೆಯನ ಪಾತ್ರದಲ್ಲಿ ಬಿಂದಾಸ್ ಆಗಿ ನಟಿಸಿದ ಮೋಹನ್ ಆ ಚಿತ್ರದ ಮೂಲಕ ನಾಯಕ ನಟನಷ್ಟೇ ಜನಪ್ರಿಯರಾದರು. ಆಗ ತಾನೆ ಯೌವನಕ್ಕೆ ಕಾಲಿಟ್ಟು, ಲೋಕವನ್ನು ಅಚ್ಚರಿಯ ಕಣ್ಣುಗಳಿಂದ ನೋಡುವ ಲವಲವಿಕೆಯ ಉತ್ಸಾಹಿ ತರುಣನ ಚಂಚಲ ಭಾವನೆಗಳನ್ನು ಸಮರ್ಥವಾಗಿ ಅಭಿವ್ಯಕ್ತಗೊಳಿಸುವ ಸಾಮರ್ಥ್ಯವಿರುವ ಮೋಹವನ್ನು ಕನ್ನಡದಲ್ಲಿ ಒಂದೆರಡು ಅವಕಾಶಗಳು ಸಿಕ್ಕಿದರೂ, ಅದೃಷ್ಟದ ಬಾಗಿಲು ತೆರೆದ ತಮಿಳು ಚಿತ್ರರಂಗ. ಅಪರಿಚಿತ, ಗಾಳಿಮಾತು, ಮುನಿಯನ ಮಾದರಿ ಚಿತ್ರಗಳಲ್ಲಿ ಅದೇ ಉತ್ಸಾಹಿ ತರುಣನ ಪಾತ್ರದಲ್ಲಿ ಕಳೆದುಹೋಗುತ್ತಿರುವ ಮೋಹಕ್ಕೆ ಮತ್ತೆ ಬಾಲು ಮಹೇಂದ್ರ ಅವರೇ ತಮ್ಮ 'ಮೂಡುಪನಿ' (1980) ಚಿತ್ರದಲ್ಲಿ ಸಣ್ಣ ಪಾತ್ರವನ್ನು ಹೊಂದಿದ್ದಾರೆ. ಆ ಕಾಲದ ರೆಬೆಲ್ ನಿರ್ದೇಶಕ ಎಂದೇ ಹೆಸರಾದ ಜೆ. ಮಹೇಂದ್ರನ್ ಅವರ 'ನೆಂಜತ್ತೈ ಕಿಳ್ಳಾದೆ' (1980) ಚಿತ್ರ ಮೋಹಕ್ಕೆ ತಾರಾಪಟ್ಟವನ್ನು ಗಳಿಸಿಕೊಟ್ಟಿತು. ಅದು ಸುಹಾಸಿನಿಯವರ ಮೊದಲ ಚಿತ್ರ.ಸಣ್ಣ ಸಂಶಯವೊಂದು ಪ್ರೇಮಿಗಳ ಬದುಕನ್ನು ಮೂರಾಬಟ್ಟೆಯಾಗಿಸುವ, ಸದಾ ತುಂಟತನ, ಲವಲವಿಕೆಯಿಂದ ಪುಟಿಯುವ ಜೀವಿಗಳಲ್ಲಿ ಜೀವನೋತ್ಸಾಹದ ಸೆಲೆ ಬತ್ತಿಹೋಗುವ ದಾರುಣವನ್ನು ಮಹೇಂದ್ರನ್ ಪರಿಣಾಮಕಾರಿಯಾಗಿ ಸೆರೆಹಿಡಿದಿದ್ದರು. ನಿರ್ದೇಶಕ ಮಹೇಂದ್ರನ್, ಕ್ಯಾಮರಾಮೆನ್ ಅಶೋಕ್ ಕುಮಾರ್, ನಾಯಕನಟಿ ಸುಹಾಸಿನಿ ಮತ್ತು ನಾಯಕ ನಟ ಕೋಕಿಲಾ ಮೋಹನ್ ಅವರ ವೃತ್ತಿ ಬದುಕು ಹೊರಳುದಾರಿ ಹಿಡಿಯಲು ಕಾರಣವಾದ ಚಿತ್ರ ಅದು.


'ನೆಂಜತ್ತೈ ಕಿಳ್ಳಾದೆ' ನಂತರ ಮೋಹನ್ ತಮಿಳುನಾಡಿನ ಮನೆ ಮಾತಾದರು. ಹರೆಯದ ಪ್ರೇಕ್ಷಕರ ಎದೆಯಲ್ಲಿ ಹುಚ್ಚೆಬ್ಬಿಸಿದರು. ಅರವತ್ತರ ದಶಕದ ಅಂತ್ಯ ಮತ್ತು ಎಪ್ಪತ್ತರ ದಶಕದ ನಂತರ ಹಿಂದಿಯ ರಾಜೇಶ್ ಖನ್ನಾ ಅವರಿಗೆ ದಕ್ಕಿದ ಯಶಸ್ಸು ಹೆಸರಿನ ಹೆಸರಿನಲ್ಲಿ ಮೋಹನ್ ಅವರ ಪಾಲಿಗೆ ಪುನರಾವರ್ತನೆಯಾಗಿತ್ತು. ನಗುಮೊಗದ ಈ ನಟ ನಿರ್ದೇಶಕರಿಗೆ ಪ್ರಿಯರಾಗಿದ್ದರು. ನಿರ್ಮಾಪಕರಿಗೆ ಗೆಳೆಯನಂತಿದ್ದರು. ಯಶಸ್ಸನ್ನು ತಲೆಗೆರಿಸಿಕೊಳ್ಳದೆ ಎಲ್ಲರೊಡನೆ ಬೆರೆಯುವುದು. ಈ ಯಶಸ್ಸು ಶಾಶ್ವತವಲ್ಲವೆಂದೇ ನಂಬಿ ಬೆಂಗಳೂರಿಗೆ ರಿಟರ್ನ್ ಟಿಕೆಟ್ ಅನ್ನು ಜೊತೆಯಲ್ಲೇ ಇಡಲಾಗಿದೆ ಎಂದು ಚೆನ್ನೈನಲ್ಲಿ ಸದಾ ಹೇಳಲಾಗುತ್ತಿದೆ. ಬಹುಕಾಲ ಪಾಮ್‌ಗ್ರೋವ್ ಹೋಟೆಲಿನ ಸಾಮಾನ್ಯ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದರು. ದೊರೈ ನಿರ್ದೇಶನದ 'ಕಿಲಿಂಜಲ್ಗಳ್' (1981) ಚಿತ್ರವು 'ನೆಂಜತ್ತೈ ಕಿಳ್ಳಾದೆ' ಯಶಸ್ಸನ್ನು ಮುನ್ನಡೆಸಿತು. ಆನಂತರ ಬಂದದ್ದೇ 'ಪಯಣಂಗಳ ಮುಡಿವುದಿಲ್ಲೈ' (1982). ಈಗ ನಟನಾಗಿ ಗುರುತಿಸಿಕೊಂಡಿರುವ ಆರ್.ಸುಂದರರಾಜನ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಬಾಕ್ಸ್ ಆಫೀಸಿನಲ್ಲಿ ಹೊಸ ದಾಖಲೆಯನ್ನು ಬರೆಯಿತು. ಅನೇಕ ಕೇಂದ್ರಗಳಲ್ಲಿ ವರ್ಷಕಾಲದ ರಚನೆ. ಪ್ರತಿಭಾವಂತ ಗಾಯಕ ತನಗೆ ಕ್ಯಾನ್ಸರ್ ಇದೆಯೆಂದು ತಿಳಿದ ತಕ್ಷಣ ಪ್ರೀತಿಸಿದ ಹೆಣ್ಣಿನ ಬಳಿ ನಾಟಕವಾಡಿ ದೂರವಾಗುವ ಒಂದೆಳೆಯ ಕತೆಯ ಈ ಚಿತ್ರದ ನಿಜವಾದ ಹೀರೋ ಇಳಯರಾಜ. ಅವರು ಸಂಯೋಜಿಸಿದ ಮಧುರವಾದ ಹಾಡುಗಳಿಗೆ ತುಂಟತನ, ನೋವು, ನಗೆಯನ್ನು ಬೆರೆಸಿ ಅಭಿನಯಿಸಿದ ಮೋಹನ್ ರಸಿಕರ ಅರಸನಾದರು. ಒಂದು ವರದಿಯನ್ನು ಉಲ್ಲೇಖಿಸಿದರೆ, 'ಪಯಣಂಗಳ್ ಮುಡಿವುದಿಲ್ಲೈ' ಚಿತ್ರವು ಅದಕ್ಕೆ ಹೂಡಿದ ಬಂಡವಾಳಕ್ಕೆ ಹೋಲಿಸಿದರೆ ಬಾಚಿಕೊಂಡ ಲಾಭದ ಪ್ರಮಾಣ 'ಶೋಲೆ' ಚಿತ್ರವನ್ನು ಮೀರಿಸಿತ್ತು. ಅಲ್ಲಿಂದಾಚೆಗೆ ಇಳಯರಾಜ, ಮೋಹನ್ ಜೋಡಿಯಲ್ಲಿ ಸಾಲು ಸಾಲು ಚಿತ್ರಗಳು ಯಶಸ್ಸನ್ನು ಓದ್ದುಕೊಂಡು ಪ್ರವಾಹದೋಪಾದಿಯಲ್ಲಿ ಹರಿದುಬಂದವು. 1983 ರಲ್ಲಿ ಅವರ ಎಂಟು ಚಿತ್ರಗಳು ಬಿಡುಗಡೆಯಾದವು. ಎಲ್ಲಾ ಸಿಲ್ವರ್ ಜುಬಿಲಿ ಹಿನ್ನಲೆಗಳು. 1984 ರಲ್ಲಿ ಯಾರೂ ಊಹಿಸದ ಪ್ರಮಾಣದಲ್ಲಿ ಅಂದರೆ 21 ಚಿತ್ರಗಳು ಬಿಡುಗಡೆಯಾದವು.ಮುಂದಿನ ವರ್ಷ ಹನ್ನೊಂದು ಚಿತ್ರಗಳು, 1986 ರಲ್ಲಿ 9 ಚಿತ್ರಗಳು ಬಿಡುಗಡೆಯಾದ ಭಾಗ್ಯ ಕಂಡರೆ 1987 ರಲ್ಲಿ ಸಂಖ್ಯೆ ಎಂಟು ಚಿತ್ರಗಳಿಗೆ ಇಳಿಯಿತು. 1988 ರಲ್ಲಿ ಅವರ ಚಿತ್ರಗಳ ಸಂಖ್ಯೆ ಐದಕ್ಕೆ ಇಳಿದರೆ 1989 ರಲ್ಲಿ ಮತ್ತೆ ಒಂಬತ್ತು ಚಿತ್ರಗಳ ಮೂಲಕ ಮರುಜನ್ಮ ಪಡೆಯಲು ಯತ್ನಿಸಲಾಗಿದೆ.


ಕೋಕಿಲ ಮೋಹನ್ ಅವರ ಯಶೋಗಾಥೆ ಭಾರತದ ಯಾವ ಸೂಪರ್ಸ್ಟಾರ್ ನಂತರದ ಯಶಸ್ಸಿಗಿಂತಲೂ ಕಡಿಮೆಯಾಗಿದೆ 1980 ರಿಂದ 1989 ರ ವರೆಗೆ ಒಟ್ಟು 77 ಚಿತ್ರಗಳಲ್ಲಿ ನಟಿಸಿದರು. ಅದರಲ್ಲಿ 27 ಚಿತ್ರಗಳು 175 ದಿನಗಳಿಗಿಂತ (ಸಿಲ್ವರ್ ಜುಬಿಲಿ) ಹೆಚ್ಚು ಕಾಲ ಅನೇಕ ಕೇಂದ್ರಗಳಲ್ಲಿ ಪ್ರದರ್ಶನಗೊಂಡವು. ಅವರು ಯಶಸ್ಸಿನ ತುತ್ತತುದಿಯಲ್ಲಿದ್ದಾಗ 1984 ರಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ ಮೂರು ಚಿತ್ರಗಳು- 'ವೆಂಗಾಯಿನ್ ಮೈಂತಾನ್', 'ನೂರಾವುದು ನಾಳ್' ಮತ್ತು 'ನಾನ್ ಪಾಡುಂಪಾಡಲ್' 200 ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನ ಭಾಗ್ಯ ಕಂಡವು. ಅದೇ ಯಶಸ್ಸು ಮರು ವರ್ಷ ಅಂದರೆ 1985 ರಲ್ಲಿ ಒಂದರ ಹಿಂದೆ ಒಂದು ಬಿಡುಗಡೆಯಾದ 'ಉದಯ ಗೀತಂ', 'ತೇದ್ರಾಲೆ ಎನ್ನೈತೋಡು', 'ಕುಂಗುವ ಚಿಮಿಳ್' ಮತ್ತು 'ಇದಯ ಕೋವಿಲ್' ರಜಾದಿನ ಮಹೋತ್ಸವ ಆಚರಿಸಿಕೊಂಡವು. ಭಾರತದ ಸಂದರ್ಭದಲ್ಲಿ ಮತ್ತಾವುದೇ ನಟ ಇಂತಹ ಯಶಸ್ಸು ಕಂಡಿರಲಾರ. ಪ್ರಾಯದ ಹಿಂದಿಯ ಸಿಲ್ವರ್ ಜುಬಿಲಿ ಸ್ಟಾರ್ ಎಂದೇ ಹೆಸರಾದ ರಾಜೇಂದ್ರ ಕುಮಾರ್ ಮಾತ್ರ ಇದಕ್ಕೆ ಅಪವಾದವಿರಬಹುದು.ಆದರೆ 1989 ರ ನಂತರ ಮೋಹನ್ ತಮಿಳು ಚಿತ್ರರಂಗದಿಂದ ಇದ್ದಕ್ಕಿದ್ದಂತೆ ಮರೆಯಾದದ್ದು,


ಕೋಕಿಲಾ ಮೋಹನ್ ಅವರ ಯಶಸ್ಸು, ಅವರು ತಮಿಳು ಚಿತ್ರಗಳಲ್ಲಿ ಆರಂಭಿಸಿದ ಹೊಸ ಬಗೆಯ ನವಿರುಭಾವದ ರೋಮನ್ಸ್ ಮುಂದುವರಿದ ಸಂಬಂಧ ಹೊಂದಿದೆ. ಆವರೆಗಿನ ರೊಮ್ಯಾಂಟಿಕ್ ಚಿತ್ರಗಳಲ್ಲಿ ಹೆಣ್ಣನ್ನು ಗಂಡನ ಆತ್ಮಕುವರ್ತಿಯಂತೆ ಚಿತ್ರಿಸಿದ್ದಾರೆ, ಮೋಹನ್ ವಹಿಸಿದ ಪಾತ್ರಗಳು ಹೆಣ್ಣನ್ನು ಗೌರವಿಸುವ, ಸಹವರ್ತಿಯ ಪಾತ್ರದಂತೆ ಬಿಂಬಿತವಾದವು. ಹೆಣ್ಣಿನ ಭಾವನೆಗಳನ್ನು ಸ್ವೀಕರಿಸುವ, ಸ್ಪಂದಿಸುವ ಮತ್ತು ಹೆಣ್ಣತನವನ್ನು ಗೌರವಿಸುವ, ಪ್ರೀತಿ ಮತ್ತು ತ್ಯಾಗದ ಹಿರಿಮೆಯನ್ನು ಸಾರುವ ಸಹಾನುಭೂತಿ ಪಾತ್ರಗಳನ್ನು ನಿರಾಯಾಸವಾಗಿ ನಿರ್ವಹಿಸಿ ಮೋಹನ್ ಗೆದ್ದರು. ಯಾವ ಚಿತ್ರದ ಮೋಹನ್ ಪಾತ್ರವು ಹೆಣ್ಣನ್ನು ಅಶ್ಲೀಲವಾಗಿ ಸಂಬೋಧಿಸಿಲ್ಲ. ಅಸಭ್ಯವಾಗಿ ಮುಟ್ಟಿರುವ. ಮರ್ಯಾದೆಯ ಗೆರೆಯಲ್ಲಿ, ಮಡಿವಂತಿಕೆಯ ಚೌಕದಲ್ಲಿರುವ ಹೆಣ್ಣನ್ನು ಪ್ರೀತಿಸುವ ಶೈಲಿ ಅವರಿಗಾಗಿಯೇ ಹೇಳಿಮಾಡಿಸಿದಂತಿತ್ತು. ಖಳನಾಯಕನ ಪಾತ್ರವಾದರೂ 'ನೂರಾವುದು ನಾಳ್' ಚಿತ್ರದ ಜನ ಮೆಚ್ಚಿದ್ದು ಅವರ ಈ ಸಾಫ್ಟ್ ರೊಮ್ಯಾಂಟಿಕ್ ಹೀರೋ ಪಾತ್ರವನ್ನೇ!ಅವರ ಈ ನವಿರು ಭಾವ ಹಾಡಿನ ದೃಶ್ಯಗಳಲ್ಲಿ ಭಾವೋತ್ಕರ್ಷವನ್ನು ಸೃಷ್ಟಿಸುತ್ತಿತ್ತು. ಹೆಂಗಳೆಯರು ಅವರ ಚಿತ್ರಗಳಿಗೆ ಮುಗಿ ಬಿದ್ದದ್ದು ಈ ಕಾರಣಕ್ಕಾಗಿಯೇ.


ಮೋಹನ್ ಅವರ ಚಿತ್ರಗಳ ಯಶಸ್ಸಿನಲ್ಲಿ ಇಳಯರಾಜ ಅವರ ಸಂಗೀತದ ಕಾಣಿಕೆ ಕಡಿಮೆಯಾಗಿದೆ. 'ಪಯಣಂಗಳ್ ಮುಡಿವುದಿಲ್ಲೈ' ಚಿತ್ರದ ವಾಲ್ ಪೋಸ್ಟರ್ ಮತ್ತು ಪ್ರದರ್ಶನ ಕಂಡ ಚಿತ್ರಮಂದಿರಗಳಲ್ಲಿ ರಾರಾಜಿಸುವ ನಾಯಕನಟನ ಬಿಂಬಕ್ಕಿಂತ ಇಳಯರಾಜ ಅವರ ಭಾವಚಿತ್ರ ಮತ್ತು ಕರಿಯುವಿಕೆಯನ್ನು ಒಂದೆಡೆ ಲವಲವಿಕೆಯ ಪ್ರಣಯಿ, ದುರಂತದ ನಾಯಕನಾಗಿ ನಟಿಸಿದ ಮೋಹನ್ ಅವರ ಚಿತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮೋಹನ್ ಅವರು ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗ ತಮಿಳುನಾಡಿನ ಯುವನಟಿಯರು, ಯುವ ನಿರ್ದೇಶಕರು, ಪೋಷಕ ನಟರು, ಅವರ ಚಿತ್ರಗಳಲ್ಲಿ ನಟಿಸಲು ಹಾತೊರೆಯುತ್ತಿದೆ. ಸುಹಾಸಿನಿ, ರೇವತಿ, ಪೂರ್ಣಿಮಾ ಜಯರಾಂ, ನಳಿನಿ, ರಾಧಾ, ಅಂಬಿಕಾ, ಇಳವರಸಿ, ಜಯಶ್ರೀ ಮೊದಲಾದವರು ಹಿರಿಯ ನಿರ್ದೇಶಕರಾದ ಸಿ.ವಿ. ಶ್ರೀಧರ್ ಅವರಿಂದ ಹಿಡಿದು ಮಣಿರತ್ನಂ, ಮಣಿವಣ್ಣನ್, ಸುಂದರ್ರಾಜನ್ ಬಳಸುವವರು ಮೋಹಗಾರರವರೊಡನೆ ಸಹಭಾಗಿಯಾಗಲು ಇಚ್ಛಿಸುತ್ತಿದ್ದರು.


ಆದರೆ ಇಂಥ ಬೇಡಿಕೆಯಿದ್ದ ನಟ 1990 ರಲ್ಲಿ ಇದ್ದಕ್ಕಿದ್ದಂತೆ ಅದೃಶ್ಯವಾದರು. ಅದಕ್ಕೆ ಅನೇಕ ಕಾರಣಗಳನ್ನು ತರ್ಕ ಮಾಡಲಾಗುತ್ತದೆ. ಮೋಹನ್ ಅವರ ಕಂಠಕ್ಕೆ ಆರ್. ಸುರೇಂದರ್ ಎಂಬ ಕಲಾವಿದನ ಧ್ವನಿ ಸರಿಯಾಗಿ ಒಪ್ಪಿಕೊಳ್ಳುವುದು. (ಈತ ಈಗಿನ ಯಶಸ್ವಿ ತಾರೆ ವಿಜಯ್ ಅವರ ಸೋದರ ಮಾವ) ಅವರ ನಡುವೆ ಮನಸ್ತಾಪವಾಗಿ ಮೋಹನ್ ತಮ್ಮದೇ ಧ್ವನಿಯನ್ನು ನೀಡಲಾರಂಭಿಸಿದ ನಂತರ ಅವರ ಚಿತ್ರಗಳು ಸೋತವು ಎಂಬುದು ಒಂದು ವಾದ. ಆದರೆ ರಜನಿಕಾಂತ್ ಅವರಷ್ಟೆ ಚೆನ್ನಾಗಿ ಮೋಹನ್ ತಮಿಳು ಮಾತನಾಡುವ ಸಾಮರ್ಥ್ಯವಿದ್ದವರು. ಆದರೆ ಸುಮ್ಮನೆ ಅಪಪ್ರಚಾರಕ್ಕೊಳಗಾದರು. 'ಮೌನರಾಗಂ' ಚಿತ್ರದಲ್ಲಿ ಮಣಿರತ್ನಂ ಅವರು ನಟ ಕಾರ್ತಿಕ ಪದವನ್ನು ಚೆನ್ನಾಗಿ ಬೆಳೆಸಿದ್ದರು. ಆ ಕಾರಣಕ್ಕಾಗಿ ಮಣಿರತ್ನಂ, ತಮ್ಮ 'ಅಂಜಲಿ' ಚಿತ್ರದಲ್ಲಿ ನಟಿಸಲು ಆಹ್ವಾನಿಸಲಾಗಿದೆ ಮೋಹನ್ ನಿರಾಕರಿಸಿದರೆಂಬುದು ಇನ್ನೊಂದು ಆರೋಪ. ಅದರಿಂದಾಗಿ ನಿರ್ದೇಶಕರ ಕೆಂಗಣ್ಣಿಗೆ ಗುರಿಯಾದರೆಂಬುದು ಅವರಿಗೆ ಮಾಯವಾಗಲು ಕಾರಣ. ಆದರೆ ರೊಮ್ಯಾಂಟಿಕ್ ಇಮೇಜಿನಲ್ಲಿ ಭದ್ರವಾಗಿ ಕುಳಿತಿದ್ದ ಮೋಹನ್, ಮೂರು ಮಕ್ಕಳ ತಂದೆಯ ಪಾತ್ರ ವಹಿಸಿದರೆ ವೃತ್ತಿಗೆ ಅಪಾಯ ಎಂದು ಭಾವಿಸಿ ನಟಿಸಿಲ್ಲವೆನ್ನುವುದು ಸಮರ್ಥನೆ.


ಆದರೆ ಈ ಕಾರಣಗಳೇನೇ ಇರಲಿ, ಮೋಹನ್ ಅವರು ಆರಂಭಿಸಿದ ಸಾಫ್ಟ್ ರೊಮ್ಯಾಂಟಿಕ್ ಹೀರೋ ಬಿಂಬವನ್ನು ಮುಂದುವರಿಸುವ ತಾರೆಯರ ದಾಂಡು ಉಗಮಿಸಿದ್ದು, ಅವರ ಬೇಡಿಕೆ ಕುಸಿಯಲು ಒಂದು ಕಾರಣ. ಅವರ ಬಿಂಬವೇ ಅವರಿಗೆ ಎದುರಾಳಿಯಾದ ವಿಚಿತ್ರ ಸನ್ನಿವೇಶಕ್ಕೆ ಗುರಿಯಾದರು. ಹೊಸದಾಗಿ ಆಗಮಿಸಿದ ಕಾರ್ತಿಕ್, ರಾಮರಾಜನ್, ಮುರಳಿ, ಅರವಿಂದಸ್ವಾಮಿ ಮುಂತಾದವರ ಸ್ಪರ್ಧೆಯಲ್ಲಿ ಮೋಹನ್ ಅವರ ಓಟ ಕುಂಠಿತವಾಯಿತು. ಇಳಯರಾಜ ಅವರ ಸಂಗೀತ ಶೈಲಿಗೆ ಎ. ಆರ್. ರೆಹಮಾನ್ ಸವಾಲೊಡ್ಡಿ ಗೆದ್ದದ್ದು ಇನ್ನೊಂದು ಕಾರಣ. ಕಡಿಮೆ ವರ್ಷದ ವರ್ಷಕ್ಕೆ ಸರಾಸರಿ ಎಂಟು ಚಿತ್ರಗಳಲ್ಲಿ ನಟಿಸಲಾಗಿದೆ ಮೋಹನ್ ಅವರ ಸಮಯ ಎಕ್ಸ್ ಪೋಸರ್ ನಿಂದ ಯಶಸ್ಸಿನ ಹಾದಿಯಲ್ಲಿ ಮುಗ್ಗರಿಸಲು ಕಾರಣ ಮತ್ತೊಂದು ತರ್ಕ.


ಆದರೆ ಒಂದಂತೂ ನಿಜ. ಮೋಹನ್ ಅವರು ಯಶಸ್ಸಿನ ಅಲೆಯ ಮೇಲೆ ತೇಲುತ್ತಿರುವಾಗ ತಮಿಳುನಾಡಿನ ಇಬ್ಬರು ಮಹಾನ್ ತಾರೆಗಳಾದ ರಜನಿ ಮತ್ತು ಕಮಲ್ ಸಹ ಕ್ರಿಯಾಶೀಲರಾಗಿದ್ದರು. ಅವರಿಗೆ ತಮ್ಮದೇ ಆದ ಅಭಿಮಾನಿಗಳ ಗುಂಪು, ವೈಯಕ್ತಿಕ ವರ್ಚಸ್ಸಿತ್ತು. ಆದರೆ ಇದಾವುದರ ನೆರವಿಲ್ಲದೆಯೇ ಹತ್ತು ವರ್ಷಗಳಿಗಿಂತಲೂ ಕಡಿಮೆ ಕಡಿಮೆ 80 ಚಿತ್ರಗಳಲ್ಲಿ ನಟಿಸಿ, ಆ ಸೂಪರ್ಸ್ಟಾರ್ಗಳ್ಯಾರೂ ನೀಡದಷ್ಟು ಪ್ರಮಾಣದ ಹಿಡಿತಗಳನ್ನು ನೀಡಿದ ಕನ್ನಡದ ಕೋಕಿಲ ಮೋಹನ್ ಸಾಧನೆ ಪವಾಡವೇಂದೇ ಹೇಳಬೇಕು.


ತೊಂಬತ್ತರ ದಶಕದ ನಂತರ ಐದಾರು ಸೋತ ಚಿತ್ರಗಳಲ್ಲಿ ನಟಿಸಿದ ಮೋಹನ್ ಅವರು ಮತ್ತೆ ಎದ್ದು ಬರಲು ಹಲವು ಬಾರಿ ವಿಫಲ ಯತ್ನ ಮಾಡುತ್ತಿದ್ದಾರೆ. ಯಶೋಲಕ್ಷ್ಮಿ ಶಾಶ್ವತವಾಗಿ ಅವರಿಂದ ದೂರಾದಳು. ವಿಚಿತ್ರಕ್ಕಾಗಿ ಯಶಸ್ಸಿನ ಕಿರೀಟ ಹೊತ್ತು ಮೆರೆದ ಮೋಹನ್ ಅವರ ಬಗ್ಗೆ ಚಿತ್ರರಸಿಕರು, ಸುದ್ದಿ ಮಾಧ್ಯಮಗಳು ಅವರ ಅಸ್ತಿತ್ವದಲ್ಲಿರುವುದನ್ನು ಮರೆತುಹೋದದ್ದು! ತಮ್ಮ ಸೋಲಿಗೆ ಸಾಮಾನ್ಯವಾಗಿ ಯಾರನ್ನೂ ಹೊಣೆ ಮಾಡದೆ, ಬಂದದ್ದನ್ನು ಸಹಜವಾಗಿ ಸ್ವೀಕರಿಸಿ ಬದುಕುತ್ತಿರುವ ನಟ ಕೋಕಿಲ ಮೋಹನ್ ಎಂಬ ಹೆಸರಿನ ದಶಕದ ಸುಮಧುರ ಹಾಡುಗಳು, ನವಿರು ಭಾವದ ಪ್ರೀತಿಯ ಸೆಳೆತವನ್ನು ಪ್ರೇಕ್ಷಕರ ಎಡೆಗೆ ದಾಟಿಸಿದ ಮಾಯಕಾರ!


  ಗಾನಾಸುಮಾ ಪಟ್ಟಸೋಮನಹಳ್ಳಿ

ಗಾನಗಣಿಗಾರಿಕೆ

ಗಾನಗಣಿಗಾರಿಕೆ- 2

 ನುಡಿಯದಿರಲೇನು

ಬಯಲಾಗಿಹುದು .. ಎಲ್ಲಾ

ಕಣ್ಣಂಚಿನ ಕೊನೆಯ ಭಾವದಲ್ಲಿ ..... !!!


(ನಟ ಶ್ರೀನಿವಾಸಮೂರ್ತಿ ಯವರ ಸಂದರ್ಶನ ದ ಜೊತೆ #ಗಾನಗಣಿಗಾರಿಕೆ)


ಅಂದು 2000 ನೇ ಇಸವಿ ನವಂಬರ್ ನಂತರದ ತಾರೀಖು .... ಶುಕ್ರವಾರ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಕನ್ನಡ ಚಿತ್ರರಂಗದ, ಇಂದಿಗೂ ಮಾಧುರ್ಯದ ಅಲೆಯಲ್ಲಿ ತೇಲುವಂತೆ ಮಾಡಿದ ಸಂಗೀತ ಮಾಂತ್ರಿಕನ ಜೀವ ಸಾವು- ಬದುಕಿನ ಹೋರಾಟದಲ್ಲಿ ತೊಯ್ದಾಡುತಿತ್ತು ...! ಪ್ರಖ್ಯಾತ ಸಂಗೀತ ನಿರ್ದೇಶಕ ಸೋದರ ಜೋಡಿಯಲ್ಲಿ ಒಬ್ಬರಾದ ರಾಜನ್ ಸೋದರ ನಾಗೇಂದ್ರ ರು ಬಹುಕಾಲದ ಅನಾರೋಗ್ಯದ ಸಾವಿನ ಕ್ಷಣಗಳ ಎಣಿಸುತಿದ್ದರು. ..ನು..ಡಿ.ಯ..ದಿರ..ಲೇ ... ನು..ಬ.ಯ.ಲಾಗಿ.ಹುದೆ..ಲ್ಲಾ..ಕ..ಣ್ಣಂ..ಚಿನ .. ಕೊ..ನೆ.ಯ ಭಾ .. ವ..ದ..ಲ್ಲಿ .., ಎಂದಾಗ 

ತಕ್ಷಣ ಆ ನಟರು .. "ಅದೇಲ್ಲಾ ಈಗ ಯಾಕೆ? ಮಲಗಿ" ಎಂದು ಸಂತೈಸಿದರು.ಅಷ್ಟು ವರುಷವಾದರೂ ಸಾವಿನ ನುಸುಗಲ್ಲಿ ಯೂ ನೆನಪಿಗೆ ಬಂದ ಹಾಡು ಮತ್ತೆ ನಟನನ್ನ ಗುರುತಿಸಿ ನೆನಪು ಮಾಡುತ್ತಿದೆ ಅಂದರೆ ಆ ಹಾಡು ನಿಜಕ್ಕೂ ಧನ್ಯ ... ದುರಂತ ಬೇಕು ..




ಅದರ ಮರುದಿನ ಮುಂಜಾನೆ ಶನಿವಾರ 7 ಗಂಟೆಗೆ ನಾಗೇಂದ್ರರು ಕೊನೆಯುಸಿರೆಳೆದರು ...! 


ಇಷ್ಟು ಹೇಳುತ್ತಾ ಆ ನಟರು ದೂರವಾಣಿಯಲ್ಲಿ ಗದ್ಗದಿತರಾದರು.ಹಾಡೊಂದರ ಹಿನ್ನೆಲೆಯ ಕೆದಕುತ್ತಾ ಹೋದ ನನಗೆ ಈ ಹಾಡಿನ ಹಿಂದೆ ಇಂತಹ ದಯನೀಯ ಕಥೆಯಿರುತ್ತಾ? ಅಂತಾ ಅನ್ನಿಸಿತು.

ಆ ನಟ ಬೇವರು ಅಲ್ಲಾ ಕನ್ನಡಚಿತ್ರರಂಗದ ಪ್ರಸಿದ್ದ ನಟ ಶ್ರೀನಿವಾಸಮೂರ್ತಿ. ಆ ಹಾಡು "ಮರಳಿಗೂಡಿಗೆ" ಚಿತ್ರದ ಖ್ಯಾತ ಕನ್ನಡದ ಕವಿ ನಿಸಾರ್ ಅಹಮದ್ ರಚಿತ ಭಾವಗೀತೆಯಾಗಿತ್ತು.


         ವಿಧಿಯ ವೈಚಿತ್ರವೆಂದರೆ ಇದೇನಾ ..? 

ಮೈಸೂರಿನ ಅಪೋಲೊ ಆಸ್ಪತ್ರೆಯ ಹಾಸಿಗೆ ಮೇಲೆ ಅಣ್ಣನ ದೇಹ ಉಸಿರು ನಿಲ್ಲಿಸಲು ಕ್ಷಣಗಳ ಎಣಿಕೆಯಲ್ಲಿ ಕಾಯುತಿತ್ತು..ಕಂಡೊಡನೆ ದುರುಗುಟ್ಟಿ ..ನೋಡುತಿದ್ದ ಅಣ್ಣನ ಕಣ್ಣುಗಳು ತೆರೆಯಲಾಗದೆ ಮುಚ್ಚಲಾಗಿದೆ ..!

ಬಡಬಡಿಸುತಿದ್ದ ದೇಹ ಬಡಕಲಾಗಿ ಬೆತ್ತಲಾಗಿ ಮಲಗಿತ್ತು ..! ನಾಲ್ಕೈದು ವರುಷದ ಹಿಂದೆ ನನ್ನಣ್ಣನ ಜೊತೆ ಅಪ್ಪನ ಜೀವ ಬಿಟ್ಟ ದೇಹವನ್ನ ಇಬ್ಬರೂ ಸೇರಿ ಆಸ್ಪತ್ರೆಯಲ್ಲಿ ಮೂಕವಾಗಿ ರೋಧಿಸುತ್ತಾ ನೋಡಿದ್ದೆವು.ಇಂದೂ ಅದೇ ಅಣ್ಣನ ನಿಸ್ತೇಜ ದೇಹ ಅಪ್ಪನ ದೇಹವನ್ನು ನೆನಪು ಮಾಡುತಿತ್ತು ..! ಅದರ ಎರಡು ದಿನದ ಹಿಂದಷ್ಟೇ ನಟ ಶ್ರೀನಿವಾಸಮೂರ್ತಿ ಯವರಿಂದ ಸಂಗೀತ ನಿರ್ದೇಶಕ ನಾಗೇಂದ್ರರ ಬಗ್ಗೆ ಲೇಖನ ಬರೆದಿದ್ದು, ಅಲ್ಲೂ ನಾಗೇಂದ್ರರ ಕೊನೆಯ ದಿನದಲ್ಲಿ ಆಸ್ಪತ್ರೆಯಲ್ಲಿ ಈ ತೆರವುಗೊಳಿಸಿದ ಕ್ಷಣಗಳನ್ನ ಕಂಡಿದ್ದ ಅನುಭವ ಹಂಚಿಕೊಂಡಿದ್ದರು.ನನ್ನ ಬದುಕಿನಲ್ಲೂ ಸೇರಿದ್ದ ಸನ್ನಿವೇಶ ಸೃಷ್ಟಿ ಮಾಡಿದ್ದು ದುರಂತ ಮತ್ತು ಕಾಕತಾಳೀಯವೇನೋ ..!

   ನನ್ನ ಒಳಗಿನ ಹಳೆಯ ಹಾಡುಗಳ ಕಣಜದ ಬಿತ್ತನೆ ಮಾಡಿ, ಇಡೀ ಮನೆ ಮನಕೆ ಗಾನದ ಗುಂಗು ಹಿಡಿಸಿದೆ, ನನ್ನ ಗಾನಗಾರಿಕೆ, ಗಾನಗಣಿಗಾರಿಕೆಗೆ ಸ್ಪೂರ್ತಿ ಯಾಗಿದೆ ನನ್ನಣ್ಣ ಈ ಲೇಖನ ಹೊತ್ತವಳಿಗೆ ಗಾನಬುತ್ತಿಯ ಬಿಟ್ಟು ಹೊರಟೇ ಹೋಗಿದ್ದು ಗಾನಸುಮನಿಗೆ ನುಂಗಲಾರದ ತುತ್ತಾಗಿಹೋಯ್ತು ..!

ನನ್ನೆಲ್ಲ ಹಾಡು, ಕವನ, ಲೇಖನಗಳಿಗೆ ಸ್ಪೂರ್ತಿ ಯಾಗಿದೆ

ನನ್ನಣ್ಣನಿಗೆ ಈ ಲೇಖನ ಸಮರ್ಪಣೆ.

~~~~~~~~~~~~~~~~~~~~~~~~~~~~~~~~~~


1984 ರ ಸಮಯ ಕೆಆರ್, ಶಾಂತಾರಾಮ್ ಎಂಬ ಹೊಸ ನಿರ್ದೇಶಕ ಪ್ರಖ್ಯಾತ ಕಾದಂಬರಿಗಾರ್ತಿ ಆರ್ಯಾಂಭಪಟ್ಟಾಬಿ ಯವರ ಅದೇ ಹೆಸರಿನ ಕಾದಂಬರಿಯೊಂದನ್ನ "ಮರಳಿಗೂಡಿಗೆ" ತಮ್ಮ ಮೊದಲ ನಿರ್ದೇಶನದಲ್ಲಿ ತೆರುವ ತರುವ ಸಿದ್ದತೆಯಲ್ಲಿದ್ದರು.

ತಮಿಳಿನ ಖ್ಯಾತ ನಿರ್ದೇಸಕ ಕೆಬಾಲಚಂದರ್ ರವರ "ತಪ್ಪಿದತಾಳ" ಚಿತ್ರದ ಮೂಲಕ ನಟರಾಗಿ ಪರಿಚಯಗೊಂಡರು.ಎಂ.ಎಸ್. "ಕರ್ಣನಸಂಪತ್ತು" ಚಿತ್ರಗಳು ತೆರೆಗೆ ಬಂದವು.ಇವರು ಇತ್ತೀಚೆಗೆ 2016 ಮೇ 31 ರಂದು ಅನಾರೋಗ್ಯದಿಂದ ನಿಧನರಾದರು.


ಹೀಗೆ "ಮರಳಿಗೂಡಿಗೆ" ಚಿತ್ರದ ಒಂದು ಸನ್ನಿವೇಶಕ್ಕೆ ಖ್ಯಾತ ಕವಿ ನಿಸಾರ್ ಅಹಮದ್ ರ ಭಾವಗೀತೆಯ ಹಾಳೆ ಹಿಡಿದು ಚಿತ್ರದ ನಾಯಕರಾದ ಶ್ರೀನಿವಾಸಮೂರ್ತಿ ವರ ಬಳಿ ಶಾಂತರಾಮ್ ರು ತೋರಿಸಿದರು. ಹಾಡಿನ ಸ್ವರ ಪ್ರಸ್ತಾವನೆಯನ್ನು ಮೆಚ್ಚಿ ಅದನ್ನ ಒಂದು ಅತ್ಯದ್ಭುತ ಹಾಡಾಗಿ ಸ್ಮರಣೀಯವಾಗಿಸುವುದು ಈ ಹಾಡು ಈಗ ನನ್ನ "ಗಾನಗಣಿಗಾರಿಕೆ" ಅಂಕಣಕ್ಕೆ ವಸ್ತುವಾಯಿತು ..!


ಹೀಗೆ ಹಾಡಿನ ಹುಟ್ಟಿನ ಕಥೆಯನ್ನ ಹೇಳುತ್ತಾ ಹೋದ ಶ್ರೀನಿವಾಸಮೂರ್ತಿ ಯವರು ಆ ಹಾಡಿಗೆ ಸಂಗೀತ ನೀಡುದ ನಾಗೇಂದ್ರರು ತಮ್ಮ ಸಾವುನ ಕೊನೆಯ ಘಳಿಗೆಯಲ್ಲೂ ಇವರನ್ನ ಕಂಡಾಗ ತೊದಲು ದನಿಯಲ್ಲಿ ಗುನುಗಿದ್ದು ಕಂಡು ಕಣ್ಣಂಚಲಿ ನೀರು ಬಂದಿದ್ದನ್ನು ತಡೆಯಲಾಗಲಿಲ್ಲ.


ಮರಳಿಗೂಡಿಗೆ-ನೀ ನುಡಿಯದಿರಲೇನೂ ...

ಚಿತ್ರ: ಮರಳಿಗೂಡಿಗೆ (1984)

ಸಾಹಿತ್ಯ: ಕೆ.ಎಸ್.ನಿಸ್ಸಾರ್ ಅಹಮದ್

ಸಂಗೀತ: ರಾಜನ್-ನಾಗೇಂದ್ರ

ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ


ನೀ ನುಡಿಯದಿರಲೇನೂ ಬಯಲಾಗಿಹುದು ಎಲ್ಲಾ

ಕಣ್ಣಂಚಿನ ಕೊನೆಯ ಭಾವದಲ್ಲೀ

ಬಗೆನೋವ ಭಾರಕ್ಕೇ ಬಳಲಿರುವ ಮೊಗವಿಹುದೂ

ಕಾರ್ಮೋಡದಾಗಸದಾ ರೀತಿಯಲ್ಲೀ ....


ಬಾಡಿರುವ ಮೊಗದಲ್ಲಿ ಕಳೆಯಿರದ ಕಣ್ಣಲ್ಲೀ

ನಿನ್ನ ಸಿರಿವಂತಿಕೆಯಾ ಕಾಣುವಾಸೇ

ಸೊಗವಿರದ ತುಟಿಯಲ್ಲಿ ತೂಗಿರುವ ನಗೆಯಲ್ಲಿ

ಸವಿಗನಸಿನಿರುಳುಗಳ ಹುಡುಕುವಾಸೇ ...


ಅರೆಗಳಿಗೆ ಸುಖಸ್ವಪ್ನಾ ಬರಲಾರದೆಮ್ಮೊಡನೇ

ವಾಸ್ತವತೆ ಗಹಗಹಿಸೀ ಸೆಳೆಯಲಿಹುದೂ

ಮರೆತೆಲ್ಲ ಕೊನೆಗೊಮ್ಮೇ ಮನಬಿಚ್ಚಿ ನಕ್ಕುಬಿಡೂ

ಬೇರೆ ದಾರಿಯ ನಾವು ಹಿಡಿಯಬಹುದೂ ....


ಆರ್ಯಂಭ ಪಟ್ಟಾಭಿ ಯವರ ಈ ಕಾದಂಬರಿ ಅನಾಥ ಹಠಮಾರಿ ಹೆಣ್ಣೊಬ್ಬಳು ಮಕ್ಕಳ ಭಾಗ್ಯವಿಲ್ಲದ ಶ್ರೀಮಂತನೊಬ್ಬನಿಗೆ ಬಯಸಿ ಎರಡನೆ ಹೆಂಡತಿಯಾಗಿ, ಅವಳ ಹಠ, ಜಂಭದಿಂದ ಕುಷ್ಟರೋಗಕ್ಕೆ ತುತ್ತಾಗಿ ಸಬ್ಯಾ ಹೆಣ್ಣಾಗಿ ಪರಿವರ್ತನೆಯಾಗುತ್ತಿದೆ.

ಮತ್ಸರಪೂರಿತ ಹೆಣ್ಣು ಆಸ್ಪತ್ರೆಯಲ್ಲಿ ಕುಷ್ಟರೋಗದ ಸಂದರ್ಭದಲ್ಲಿ ಬರುವ ಈ ಗೀತೆ ನಟನ ಮೂಲಕ ಅವಳೊಳಗಿನ ತುಮುಲಗಳನ್ನ ಗಟ್ಟಿಯಾಗಿ ಹಾಡುಗಳ ಸಾಲಿನಲ್ಲಿ ಕಟ್ಟಿಕೊಟ್ಟಿದೆ.

ಮತ್ತೆ ಒಂದು ಅನನ್ಯ ಗೀತೆಯನ್ನ ನಿಸಾರ್ ಅಹಮದ್ ರು ಚಿತ್ರಕ್ಕಾಗೆ ಹೇಳಿ ಬರೆಸಿದಂತೆ ಅದರ ಸಾಹಿತ್ಯ ಹೊಂದುವಂತಿತ್ತು ..! ಈ ಚಿತ್ರದ ಭೂಮಿಕೆಯಲ್ಲಿ ಕಲ್ಯಣ್ ಕುಮಾರ್ ನಾಯಕ ನಟರಾದರೂ ವೈದ್ಯ ಪಾತ್ರದಲ್ಲಿ ಬರುವ ಶ್ರೀನಿವಾಸಮೂರ್ತಿ ಈ ಹಾಡಿನಲ್ಲಿ ಮೈ ಮರೆತು ನಟಿಸುತ್ತಿದ್ದಾರೆ.ಇವರ ಬಗ್ಗೆ ಹೇಳಲು ಬೇಕಾದ ಒಂದು ವಿಷಯವಿದೆ. .ಹಾಗಾಗಿ ನಿಸಾರ್ ಕವಿತೆ ನೋಡಿದ ಕೂಡಲೆ ಅದೊಂದು ರಾಗಸಂಯೋಜಸಿ ಆ ಕ್ಷಣದಲ್ಲೇ ಹಾಡಲು ಸಾಧ್ಯವಾಯಿತು.


ಈ ಹಾಡಿನಲ್ಲಿ ಬರುವ ಸಾಲುಗಳಂತೂ ಭಾವವನ್ನೇ ತುಂಬಿ ಸುರಿಸುವಂತಹ ಸಾಲುಗಳು. ..ಕಳೆ ಇರದ ಕಣ್ಣಲ್ಲಿ..ನಿನ್ನ ಸಿರಿವಂತಿಕೆಯ ಕಾಣುವಸೆ .. "ಎಂಬ ಸಾಲುಗಳು ಒಮ್ಮೆ ಕೇಳುಗರ ಹೃದಯವನ್ನ ಕ್ಷಣಕಾಲ ಸ್ಥಬ್ದಗೊಳಿಸುವವು ಎಸ್ ಪಿ ಬಾಲಸುಬ್ರಹ್ಮಣ್ಯಂ ರ ದನಿಯಲ್ಲಿ ಈ ಹಾಡನ್ನು ಕೇಳುತ್ತಾ ಕನ್ನಡಕಧಾರಿ ಶ್ರೀನಿವಾಸಮೂರ್ತಿ ಯವರ ಅಭಿನಯದಲ್ಲಿ ನೋಡುವುದೇ ಗಾನಾನಂದ.!


ಬಾಲ್ಯದಲ್ಲಿ ಆಕಾಶವಾಣಿ ಯಲ್ಲಿ ನಾನು ಕೇಳಿದ ಹಾಡನ್ನು ಚಲನಚಿತ್ರದಲ್ಲಿ ಇರುವುದನ್ನು ಗಮನಿಸಿ ಹಾಡಿಗಾಗಿ ಆಕಾಶವಾಣಿ ಗೆ ಅಲೆದು, ಕೊನೆಗೆ ನಾ ಬರೆವ ಅಂಕಣಕೆ ಆ ಹಾಡಿನ ನಟನ ಸಂದರ್ಶನ ಮಾಡುವ ಭಾಗ್ಯ ನಿಜಕ್ಕೂ ನನ್ನ ಪಾಲಿಗೆ ಬಂದದ್ದು ಗಾನಗಾರಿಕೆಯ ಹೆಮ್ಮೆ ಅಂದರೂ ತಪ್ಪಲ್ಲ.

ನನಗೆ ಹಾಡಿನ ಹಿಂದಿನ ಮಾಹಿತಿ ನೀಡಿದ ನಟ ಶ್ರೀನಿವಾಸಮೂರ್ತಿ ರವರಿಗೆ ವಂದನೆಗಳು.

ಕವಿಯೊಬ್ಬ ಬರೆದ ಗೀತೆಗೆ ನಟನೊಬ್ಬ ರಾಗ ಜೋಡಿಸಿ, ಸಂಗೀತ ನಿರ್ದೇಶಕ ತನ್ನ ಸಾವಿನ ಅಂಚಿನಲ್ಲಿ ನೆನಪು ಮಾಡಿದ ಹಾಡು ಹುಟ್ಟಿದ ಕಥೆ ನಿಮಗಾಗಿ ಈ ನಿಮ್ಮ ಸೋದರನ ಲೇಖನದಿಂದ.


ಗಾನಾಸುಮಾ ಪಟ್ಟಸೋಮನಹಳ್ಳಿ

ಗಾನಗಣಿಗಾರಿಕೆ

 #ಮೊನ್ನೆ_ಹಂಸಲೇಖರು_ನೀಡಿದ #ಗಾನಕರುಹು_ಬೆನ್ನತ್ತಿ_ಹೊರಟ #ಗಾನಶಿಕಾರಿ_ಗಾನಗಣಿಗಾರಿಕೆ #ಯಲ್ಲಿ_ಸೆರೆಯಾಯ್ತು...!!!   ಮೊನ್ನೆ ಎಸ್.ಪಿ‌.ಬಾಲಸುಬ್ರಮಣ್ಯಂ ನಿಧನರಾದಾಗ ಕನ...