ಬುಧವಾರ, ಸೆಪ್ಟೆಂಬರ್ 29, 2021

ದೇವ ನಿನ್ನ ರಾಜ್ಯದ ನ್ಯಾಯವಿದೇನಾ?

 ವಿಶೇಷ ಗಾನಗಣಿಗಾರಿಕೆ






ಗುಡಿ ಮಂದಿರಗಳ ಪ್ರವೇಶ ಬಹಿಷ್ಕಾರದ ಹೊತ್ತಲ್ಲಿ ವಿಶೇಷಗಾನಗಣಿಗಾರಿಕೆ


 "ಚಿತ್ರ ಸಾಹಿತ್ಯದ ಮೂಲಕ ದೇವರನ್ನೇ ಪ್ರಶ್ನೆ ಮಾಡಿದ ಕೆಲ ಸಿನಿಸಾಹಿತ್ಯಗಳ  ಗಾನವಿಶ್ಲೇಷಣೆ"


"ಮನ್ಸಾರ್ನ್ ಮಾಡಿ ಅವರಿಷ್ಟ್‌ದಂಗೆ ಆಡಾಕ್ ಬುಟ್‌ಬಿಟ್ಟೆ

ನಿನ್ನೇ ಅವ್ರು ಕಲ್ನಾಗ್ ಕಡದು ಗುಡಿಯಾಗ್ ಕೂಡ್ಬುಟ್ರು

ನಿನ್ನ ಹೆಸರನ್ ಹೇಳ್ಕಂಡ್ ಎಷ್ಟೋ ಪಾಪ ಮಾಡ್ತಾರೆ

ಹಣ್ಣು ಕಾಯಿ ಲಂಚ ಕೊಟ್ಟು ಕ್ಷಮ್ಸು ಅಂತಾರೆ, ದ್ಯಾವ್ರೇ..."


"ದೇವ ನಿನ್ನ ರಾಜ್ಯದ ನ್ಯಾಯವಿದೇನಾ?


"ನೀನಾ ಭಗವಂತ..? ಜಗಕುಪಕರಿಸಿ,ನನಗಪಕರಿಸೋ ಜಗದೋದ್ದಾರಕ ನೀನೇನಾ?"...



 1975 ರ ಹೊತ್ತಲ್ಲಿ ಸೃಜನಶೀಲ ನಿರ್ದೇಶಕರಾದ ಗೀತಪ್ರಿಯರವರು "ಬೆಳುವಲದ ಮಡಿಲಲ್ಲಿ" ಎಂಬ ಚಿತ್ರ ತೆರೆಗೆ ತಂದಿದ್ದರು.ರಾಜೇಶ್,ಕಲ್ಪನ ಅಭಿನಯದ ಈ ಚಿತ್ರ ಸಂಪೂರ್ಣ ಗ್ರಾಮ್ಯಕಥೆಯಾಗಿತ್ತು.ಕಥೆ,ಹಾಡು,ಸಂಭಾಷಣೆ,ಅಭಿನಯ ಎಲ್ಲವೂ ಸುಂದರವಾಗಿ ಮೇಳೈಸಿತ್ತು.

  ಈ ಚಿತ್ರದ ಹಾಡೊಂದು ಬಾಲ್ಯದಿಂದಲೂ ನನ್ನ ಕಾಡುವ ಹಾಡಾಗಿತ್ತು.ಆ ಹಾಡಿನ ಸಾಹಿತ್ಯ. ಅದಕ್ಕೆ ತಕ್ಕ ರಾಜನ್ ನಾಗೇಂದ್ರ ಸಂಗೀತ ಅದಕ್ಕೆ ಹೊಂದುವ ಹಾಗೆ ಅದ್ಬುತವಾಗಿ ಹಾಡಿದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕಂಠಸಿರಿ ಈ ಹಾಡಿಗೊಂದು ಖದರ್ ನೀಡಿತ್ತು.



ಬೆಳುವಲದ ಮಡಿಲಲ್ಲಿ (1975)


ಸಾಹಿತ್ಯ: ಗೀತಪ್ರಿಯ  ಸಂಗೀತ: ರಾಜನ್-ನಾಗೇಂದ್ರ   ಹಾಡಿದವರು: ಎಸ್.ಪಿ.ಬಿ.



ಎಲ್ಲಾರ್ನ್ ಕಾಯೋ ದ್ಯಾವ್ರೇ ನೀನು, ಎಲ್ಲಿ ಕುಂತಿದ್ದೀ

ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು ಏನು ಮಾಡ್ತಿದ್ದೀ... ನೀ ಏನು ಮಾಡ್ತಿದ್ದೀ

ಎಲ್ಲಾರ್ನ್ ಕಾಯೋ ದ್ಯಾವ್ರೇ ನೀನು ಎಲ್ಲಿ ಕುಂತಿದ್ದೀ

ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು ಏನು ಮಾಡ್ತಿದ್ದೀ...

ಎಲ್ಲಾರ್ನ್ ಕಾಯೋ ದ್ಯಾವ್ರೇ....


ಮನ್ಸಾರ್ನ್ ಮಾಡಿ ಅವರಿಷ್ಟ್‌ದಂಗೆ ಆಡಾಕ್ ಬುಟ್‌ಬಿಟ್ಟೆ

ನಿನ್ನೇ ಅವ್ರು ಕಲ್ನಾಗ್ ಕಡದು ಗುಡಿಯಾಗ್ ಕೂಡ್ಬುಟ್ರು

ಮನ್ಸಾರ್ನ್ ಮಾಡಿ ಅವರಿಷ್ಟ್‌ದಂಗೆ ಆಡಾಕ್ ಬುಟ್‌ಬಿಟ್ಟೆ

ನಿನ್ನೇ ಅವ್ರು ಕಲ್ನಾಗ್ ಕಡದು ಗುಡಿಯಾಗ್ ಕೂಡ್ಬುಟ್ರು

ನಿನ್ನ ಹೆಸರನ್ ಹೇಳ್ಕಂಡ್ ಎಷ್ಟೋ ಪಾಪ ಮಾಡ್ತಾರೆ

ನಿನ್ನ ಹೆಸರನ್ ಹೇಳ್ಕಂಡ್ ಎಷ್ಟೋ ಪಾಪ ಮಾಡ್ತಾರೆ

ಹಣ್ಣು ಕಾಯಿ ಲಂಚ ಕೊಟ್ಟು ಕ್ಷಮ್ಸು ಅಂತಾರೆ, ದ್ಯಾವ್ರೇ...

ಎಲ್ಲಾರ್ನ್ ಕಾಯೋ ದ್ಯಾವ್ರೇ ನೀನು ಎಲ್ಲಿ ಕುಂತಿದ್ದೀ

ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು ಏನು ಮಾಡ್ತಿದ್ದೀ...

ಎಲ್ಲಾರ್ನ್ ಕಾಯೋ ದ್ಯಾವ್ರೇ....


ತೆಂಗೀನ್ ಮರ ಸಾಕಿದ್ರೆ ಎಳನೀರ್ ಕೊಡ್ತದೆ

ಪ್ರೀತ್ಸಿದ್ ಬೆಳ್ಸಿದ್ ಮಕ್ಕಳಿಂದ ಕಣ್ಣೀರ್ ಸಿಗ್ತದೆ

ಬರೀ ಕಣ್ಣೀರ್ ಸಿಗ್ತದೆ ಅಹ್...

ತೆಂಗೀನ್ ಮರ ಸಾಕಿದ್ರೆ ಎಳನೀರ್ ಕೊಡ್ತದೆ

ಪ್ರೀತ್ಸಿದ್ ಬೆಳ್ಸಿದ್ ಮಕ್ಕಳಿಂದ ಕಣ್ಣೀರ್ ಸಿಗ್ತದೆ

ಅಪ್ಪ ಅಮ್ಮ ಬದ್ಕಿರೋ ತನಕ ಕೀಳಾಗ್ ಕಾಣ್ತಾರೆ

ಸತ್ತೋದ್ ಮ್ಯಾಗೆ ಶ್ರಾದ್ಧಾ ಮಾಡಿ ಭಕ್ತಿ ತೋರ್ತಾರೆ

ಅವರ್ನೆಲ್ಲ ಕಾಗೆ ಮಾಡಿ ಕೂಳ್ ಹಾಕ್ತಾರೆ, ಅಹ್ಹಹ್ಹಹ್ಹಾ...  ದ್ಯಾವ್ರೇ

ಎಲ್ಲಾರ್ನ್ ಕಾಯೋ ದ್ಯಾವ್ರೇ ನೀನು, ಎಲ್ಲಿ ಕುಂತಿದ್ದೀ...

ಎಲ್ಲಾರ್ನ್ ಕಾಯೋ ದ್ಯಾವ್ರೇ


ಬೇಸಾಯ್ದ್ ಬದುಕು ಬ್ಯಾಡ್ದೇ ಹೋದ್ರು ಭೂಮೀಲ್ ಪಾಲ್ಬೇಕು

ಬೆವರು ಮಾತ್ರ ಸುರೀಬಾರ್ದು ಭಾಗ್ಯ ಮಾತ್ರ ಬೇಕು

ಬೇಸಾಯ್ದ್ ಬದುಕು ಬ್ಯಾಡ್ದೇ ಹೋದ್ರು ಭೂಮೀಲ್  ಪಾಲ್ಬೇಕು

ಬೆವರು ಮಾತ್ರ ಸುರೀಬಾರ್ದು ಭಾಗ್ಯ ಮಾತ್ರ ಬೇಕು

ಉತ್ತು ಬಿತ್ತು ಬೆಳೆಯೋನ್ಗಲ್ವೆ ಸೇರ್ಬೇಕಾದ್ದು ಭೂಮಿ

ದುಡಿಯೋನಲ್ವೆ ಒಡೆಯ ಇನ್ನು ನೀನೇ ಹೇಳು ಸ್ವಾಮಿ, ದ್ಯಾವ್ರೇ

ಎಲ್ಲಾರ್ನ್ ಕಾಯೋ ದ್ಯಾವ್ರೇ ನೀನು, ಎಲ್ಲಿ ಕುಂತಿದ್ದೀ

ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು ಏನು ಮಾಡ್ತಿದ್ದೀ....

ಎಲ್ಲಾರ್ನ್ ಕಾಯೋ ದ್ಯಾವ್ರೇ


ಯಾಕೋ..ಇತ್ತೀಚೆಗೆ ದಲಿತರು ದೇವಾಲಯ ಪ್ರವೇಶ ನಿಷಿದ್ದದ ಅಡಿಯಲ್ಲಿ ದಂಡ ವಿಧಿಸುವ,ಅಸ್ಪೃಶ್ಯತೆ ಆಚರಿಸುವ ಸುದ್ದಿಗಳು ಹೆಚ್ಚಾಗುತ್ತಲೇ ಇರೋದನ್ನ ನೋಡಿ..ಈ ಹಾಡನ್ನ ಹಂಚಿಕೊಳ್ಳೋ ಆಸೆಯಾಯ್ತು.ಇಂದಿ ಜಾತಿಮನಸಿನ ಮನುಷ್ಯರಿಗೆ ಹೇಳಿ ಬರೆಸಿದಂತಿರುವ ಈ ಹಾಡನ್ನ, ಜಾತಿ ಭೇಧ ಮಾಡುವ ಮುಠ್ಠಾಳರಿಗೆ  ಪದೆ ಪದೇ ಕೇಳಿಸಬೇಕು ಅನ್ನಿಸ್ತು..!


  ಅಬ್ಬಾ..! ಅದೆಂತಹ ಸಾತ್ವಿಕ ಸಿಟ್ಟಿನ ಮೂಲಕ ದೈವವನ್ನ ವಿಡಂಬನೆ ಮಾಡುತ್ತ,ಪ್ರೀತಿಯ ರೋಷದಿಂದ ಟೀಕಿಸುವ ಸಾಹಿತಿ ಗೀತಪ್ರಿಯರ ಈ ಹಾಡು ಸದಾ ಮರೆಯಲಾಗದ ಹಾಡು.


  ಈ ಭೂಮಿ ಮೇಲೆ ಕಣ್ಣಿಗೆ ಕಾಣಿಸದೇ ಸದಾ ಎಲ್ಲಾ ತರದ ಜನರಿಂದ ಟೀಕಿಸಿಕೊಳ್ಳುತ್ತಿರುವ,ಹೊಗಳಿಸಿಕೊಳ್ಳುತ್ತಿರುವ ಏಕೈಕ ಶಕ್ತಿ ಎಂದರೆ ಅದು "ದೇವರು!"

ಪ್ರೇಮ ವಿಫಲವಾದ ಪ್ರೇಮಿಗಳು,ಬದುಕಿನಲಿ ನೊಂದವರು,ಬಡವಾದ ರೈತ..ಹೀಗೆ ಎಲ್ಲರಿಂದಲೂ ಎಲ್ಲದಕೂ ಕಾರ್ಯ ಕಾರಣಕರ್ತ ಎಂದು ಉಬ್ಬಿಸುತ್ತಲೇ ನಿಂದಿಸಿಕೊಳ್ಳುವವ "ದೇವರು"

ತಮಗೆ ಸಂತೋಷವಾದರೆ ಅದಕ್ಕೆ ದೇವರೇ ಕಾರಣ,ತಮಗೆ ದುಃಖವಾದರೆ,ನೋವಾದರೆ..ಹೀಗೆ ಎಲ್ಲದಕ್ಕೂ ಕಾತಣ ಎಂದು ನಂಬುವ ಆಸ್ತಿಕ ಮತ್ತು ನಾಸ್ತಿಕರಿಗೆ ಸುಲಭವಾಗಿ ಸಿಗುವ ಶಕ್ತಿ ಈ "ದೇವರು" ಎಂಬ ಪ್ರತಿಮವೇ.


  ಹುಟ್ಸಿದ್ದ ದೇವರು ಹುಲ್ನಾದ್ರೂ ಮೆಯ್ಸಲ್ವ? ಈ ಭೂಮಿ ಮೇಲಿನ ಒಂದೊಂದು ಅಣುವಿನ ಚಲನೆಗೂ ಈ ದೇವರೇ ಕಾರಣವೆಂದು ನಂಬಿದ ಮೇಲೆ ಎಲ್ಲದಕ್ಕೂ ಅವನ ಮೇಲೆ ದಾಳಿ ಮಾಡಿ ಟೀಕಿಸುತ್ತಾ,ಹೊಗಳುತ್ತಾ ಸಮಾಧಾನಪಟ್ಟುಕೊಳ್ಳುವ ಜಾಯಮಾನ ಈ ನರಪ್ರಾಣಿಯದು..!


    ಇಷ್ಟಾದರೂ ಭಕ್ತರ ಮೊರೆಗಾಗಲಿ,ನಿಂದಕರ ಟೀಕೆಗಾಗಲಿ ಎದ್ದು ಬಂದು ಉತ್ತರ ನೀಡಿದ ಪ್ರತ್ಯಕ್ಷ ಉದಾಹರಣೆ ಇಲ್ಲದಿದ್ದರೂ,ಕಥೆ,ಪುರಾಣ ನಂಬಿಕೆಗಳಲ್ಲಿ ಮಾತ್ರ ದೇವರ ಅಸ್ತಿತ್ವ ಇದೆ ಎಂದು ನಂಬುವ ಅಪಾರಭಕ್ತಿ ಆಸ್ತಿಕನದಾದರೆ,ದೇವರೆಂಬುದು ಇಲ್ಲವೇ ಇಲ್ಲ ಇದೊಂದು ದುರ್ಬಲರ ಹದ್ದುಬಸ್ತಿ ನಲ್ಲಿಡಲು ಕೆಲವರು ಮಾಡಿದ ಹುನ್ನಾರ ಎಂಬುದು ನಾಸ್ತಿಕನ ಉವಾಚ.


        ಹೀಗೆ ನಾಸ್ತಿಕ ಆಸ್ತಿಕರ ನಡುವೆ ದಿನನಿತ್ಯ ನಡೆಯುವ ಸಂಘರ್ಷಕ್ಕೆ ಏನೊಂದು ಪರಿಹಾರನ್ನು ನೀಡದ ದೇವರು ಮಾತ್ರ ತೆರೆಯ ಮರೆಯಲ್ಲೇ "ದೊರೆ"  ಯಂತೆ ವಿರಾಜಮಾನ..!

"ದೇವರೇ ನೀನು ನಿಜವಪ್ಪ" ಎಂದು ಆಸ್ತಕಿ ಹೇಳಿದರೆ,ನಾಸ್ತಿಕನ ವಾದ.."ಸುಳ್ಳೇ ಸುಳ್ಳು ಈ ಭೂಮಿ ಮೇಲೆ ಎಲ್ಲಾ ಸುಳ್ಳು.." ಎನ್ನುತ್ತಾ ವಾದ- ವಿವಾದದಲಿ ಸಮಾಜದಲ್ಲಿ ಮುಳುಗಿದ್ದರೆ..

ಇದರ ನಡುವೆ ದೇವರಿಗೊಂದು ಗುಡಿ ಕಟ್ಟಿ  ಅದನ್ನ ಗುತ್ತಿಗೆ ಪಡೆದವರಂತೆ ಅಸ್ಪೃಶ್ಯತೆ ಆಚರಿಸುತ್ತಾ,"ದೇವರ ದೃಷ್ಠಿಯಲ್ಲಿ ಎಲ್ಲರೂ ಸಮಾನರು" ಎಂಬ ಮಾತಿಗೆ ವಿರುದ್ದವಾಗಿ  ದೇವರಿಗೆ ತಿರುಮಂತ್ರ ಹಾಕುತ್ತಾ,ದೇವರ ಹೆಸರಿನಲ್ಲಿ ಸುಲಿಗೆ ಮಾಡುತ್ತಾ,ಅತ್ಯಾಚಾರ,ಅನಾಚಾರದಲ್ಲಿ ತೊಡಗಿರುವ ಮಂದಿಯ ಕ್ಷೋಭೆ ಇತ್ತೀಚೆಗೆ ಅವ್ಯಾಹತವಾಗಿದೆ.


  ಇಂತಹ ಜಾತಿಯುಕ್ತ ಭಾರತದ ಈ ಸಮಾಜದ ಅಸಮಾನತೆ ಕಂಡು "ಬೆಳುವಲದ ಮಡಿಲಲ್ಲಿ" ಚಿತ್ರದ ಹಾಡೊಂದು ಕಾಡಿಸಿ ನೆನಪಾಯ್ತು.ಆ ಹಾಡಿನ ನಾಲ್ಕು ಸಾಲು ಬರೆದು ಪೋಸ್ಟ್ ಮಾಡುವ ಎಂದುಕೊಂಡು ಕುಳಿತ ನನಗೆ ಒಂದರ ಹಿಂದೊಂದರಂತೆ ಇಂತಹ ಹಾಡುಗಳು ನೆನಪಾಗುತ್ತಾ ಹೋದವು.ಹಾಗಾದರೆ ಈ ಕುರಿತು ಒಂದು ಸುಧೀರ್ಘ "ಗಾನಗಣಿಗಾರಿಕೆ" ಯಾಕೆ ಬರೆಯಬಾರದೆಂದವನಿಗೆ ಸಾಕ್ಷಿ ಈ ಲೇಖನಮಾಲೆ.


       45 ವರ್ಷದ ಹಿಂದೆಯೇ ಗೀತಪ್ರಿಯರು ಈ ಸಮಾಜದ ಓರೆ,ಕೋರೆಗಳನ್ನ ಕಂಡು,ಅಸಮಾನತೆ,ಅಸ್ಪೃಶ್ಯತೆ ಕಂಡು ,ತನ್ನ ಸಿನಿಮಾ ಮತ್ತು ಹಾಡಿನ ಮೂಲಕ ವಿರೋಧದ ದನಿ ಎತ್ತಿರುವುದು ನಿಜಕ್ಕೂ ಗ್ರೇಟ್ ಎನಿಸುತ್ತದೆ.

ಹೌದು..ತಾನೊಬ್ಬ ಸಮಾಜದ ಅನಾರೋಗ್ಯಕೆ ಹೇಗೆ ತಾನೆ ಚಿಕಿತ್ಸೆ ನೀಡಲು ಸಾಧ್ಯ? ಎಂದು ಕೂರದೇ,ತನ್ನ ಚಿತ್ರ,ಸಾಹಿತ್ಯದ ಮೂಲಕ ಸಮಾಜದ ಅವ್ಯವಸ್ತೆಯನ್ನ ಖಂಡಿಸುವ ಮನಸ್ಥಿತಿಗೆ ಭೇಷ್ ಎನ್ನಲೇಬೇಕು.


    ಅದರಲ್ಲೂ ದೇವರ ಹೆಸರಿನಲ್ಲಿ ನಡೆಯುತ್ತಿರುವ ಅನ್ಯಾಯ,ಅಧರ್ಮ,ಅನಾಚಾರಕ್ಕೆಲ್ಲಾ ಗುಡಿಯೊಳಗಿನ ದೇವರನ್ನೇ ಕಾರಣವಾಗಿಸುವ ದುಷ್ಠರ ಮನೋವ್ಯಾಧಿ ಕಂಡು ಆ ಕಾಣದ ದೇವರನ್ನೇ ಪ್ರಶ್ನೆ ಮಾಡುವಂತೆ ಬರೆದ ಈ ಹಾಡು,ಪ್ರತಿಯೊಬ್ಬ ನೊಂದವರ ಮನಸಿನ ಕನ್ನಡಿಯಂತಿದೆ.ಪ್ರತಿಯೊಬ್ಬರಿಗೂ ನೇರವಾಗಿ  ಹೇಳಲಾಗದೇ ತನ್ನ ಪರಿಣಾಮಕಾರಿ ಸಿನಿಮಾ ಮಾಧ್ಯಮದ ಮೂಲಕ ಹೇಳುವ ಇವರ ನೊಂದ ಮತ್ತು ರೋಷದ,ಸಿಟ್ಟಿನ ದನಿ ಬಹುವಾಗಿ ಇಷ್ಟವಾಗುತ್ತದೆ.


  ಇಲ್ಲಿ ಗೀತಪ್ರಿಯರ ಸಾಹಿತ್ಯದ ಬಗ್ಗೆ ಹೇಳಲೇಬೇಕಾದ ಮತ್ತೊಂದು ವಿಷಯ ಎಂದರೆ: 1956 ರಲ್ಲಿ ವೈ.ವಿ.ರಾವ್ ನಿರ್ದೇಶನದಲ್ಲಿ ತೆರೆಗೆ ಬಂದ "ಭಾಗ್ಯಚಕ್ರ" ಎಂಬುವ ಸಿನಿಮಾದಲ್ಲೂ ಕೂಡಾ "ಎಲ್ಲಾರ್ ಕಾಯೋ.." ಹಾಡು ಬರೆಯುವ ಇಪ್ಪತ್ತು ವರ್ಷದ ಹಿಂದಯೇ ಈ ವ್ಯವಸ್ಥೆಯ ವಿರುದ್ದ ದೇವರನ್ನ ಪ್ರಶ್ನೆ ಮಾಡಿ ಹಾಡೊಂದನ್ನ ಬರೆದಿದ್ದರು.ವಿಜಯಭಾಸ್ಕರ್ ಸಂಗೀತದಲ್ಲಿ ಘಂಟಸಾಲ ರ ದನಿಯಲ್ಲಿ "ದೇವ ನಿನ್ನ ಲೋಕದ ನ್ಯಾಯವಿದೇನಾ? ನ್ಯಾಯವಿದೇನಾ? ಎಂಬ ಹಾಡು ಕೂಡಾ ಅಂದಿನ‌ಕಾಲದಲ್ಲೇ ಬಹಳ ಜನಪ್ರಿಯ ಹಾಡಾಗಿತ್ತು.ಈ ಭುಮಿ ಮೇಲಿನ ಬಡತನ,ಸಿರಿತನ,ಅನ್ಯಾಯ,ಅಕ್ರಮ ಗಳನ್ನ ಕಣ್ಣಾರೆ ಕಂಡು ಬರೆದ ಈ ಹಾಡಿಗೆ ಅಂದು ವಿಧಾನಸೌಧ ನಿರ್ಮಣ ಮಾಡುತಿದ್ದ ಕೂಲಿಕಾರ್ಮಿಕರ ಬವಣೆ ಕಾರಣವಾಗಿತ್ತು..!


 " ದೇವ ನಿನ್ನ ರಾಜ್ಯದ ನ್ಯಾಯವಿದೇನಾ?

ನ್ಯಾಯವಿದೇನಾ?

ಲೋಕಕೆಲ್ಲ ಒಬ್ಬ ಸೂರ್ಯ, ಒಬ್ಬನೆಯೆ ಚಂದಿರ

ಎಲ್ಲರಿಗೂ ಒಂದೇ ಭೂಮಿ

ಇರುವುದೊಂದೆ ಅಂಬರ

ಆದರೇಕೆ ಜಗದಲಿ

ಭೇದ ಭಾವನ..ಭೇಧ ಭಾವನ..!?


 ಬಡವರ ಈ ಗೋಳನೋಡಿ

ಗುಡಿಗಳಲಿ ಅವಿತೆಯಾ?

ಕಲ್ಲು ಮಾಡಿ ಹೃದಯವ ಕಲ್ಲಾಗಿ

ಕುಳಿತೆಯಾ?

ಮರೆತೆಯೇನು ಬಡವರ 

ಶೋಕ ಜೀವನ ಶೋಕಜೀವನ?


ತುಂಬಿಹುದು ಸುತ್ತಲೂ ಪಾಪಿಗಳ

ಪಂಗಡ/ಪಾಪಿಗಳ ಪಂಗಡ

ವಂಚನೆಯು ಮುತ್ತಿರಲು

ಸ್ವಾರ್ಥತೆಯ ಸಂಗಡ

ಆ ಲೋಕದಲ್ಲಿ ಎತ್ತಲೂ

ಕತ್ತಲೆಯೇನಾ?/ಕತ್ತಲೆಯೇನಾ?


  ನಿಜಕ್ಕೂ ಈ ಸಾಲುಗಳಲ್ಲಿ ಗೀತಪ್ರಿಯಾರ ಆರ್ದ್ರತೆಯ ಭಾವ,ಸಮಾಜದ ಹಿತ ಚಿಂತನೆಯ ಕಳಕಳಿ ಎದ್ದು ಕಾಣುತ್ತದೆ.


ಭಾರತೀಯ ಸಂಸ್ಕøತಿ, ಪರಂಪರೆ, ಶ್ರಮಜೀವಿಗಳು, ಮಣ್ಣಿನ ಮಕ್ಕಳ ಬಗೆಗೆ ಅಪಾರ ಕಾಳಜಿ. ಸೈನಿಕ ಕುಟುಂಬದಿಂದ ಬಂದ ಕಾರಣ, 'ಜೈ ಜವಾನ್ ಜೈ ಕಿಸಾನ್' ಕಲ್ಪನೆಗೆ ಒತ್ತು ಕೊಡುವುದು ಇವರ ಚಿತ್ರಗಳಲ್ಲಿನ ವಿಶೇಷ. 'ಗೀತಪ್ರಿಯ' ಚಿತ್ರಗಳಲ್ಲಿನ ನಾಯಕ. ಉನ್ನತ ಭಾರತೀಯ ಮೌಲ್ಯಗಳ ಪ್ರತಿವಾದಕ, ಹಿಂಸೆಯಿಂದ ದೂರ, ನ್ಯಾಯಪರ, ನಾಯಕಿಯೂ ಅಷ್ಟೇ, ಆದರ್ಶ ನಾರಿ. ಉತ್ತಮ ಮೌಲ್ಯಗಳನ್ನು ತಮ್ಮ ನಿರ್ದೇಶನದ ಚಿತ್ರಗಳಲ್ಲಿ ಕಾಪಾಡಿಕೊಂಡು ಬಂದಿದ್ದಾರೆ.  ತಮ್ಮ ಸಂಭಾಷಣೆ ಹಾಗೂ ಹಾಡುಗಳಲ್ಲಿ ಆಡುಭಾಷೆಯಲ್ಲಿನ ಸೊಗಸನ್ನು ತುಂಬಿದವರು. ``ಭಗವಂತ ಕೈಕೊಟ್ಟ-ಯಾಕೆ,? ದುಡಿಯೋಕಂತಾ....... ಅದನ್ಯಾಕೆ ಎತ್ತುವೆ ಹೊಡಿಯೋಕಂತಾ......... ಎಂಬಂಥ ಲಲಿತಶೈಲಿ ಅವರದು.  ಈ ಬಗೆಯ ಸಾಹಿತ್ಯದಿಂದಾಗಿ ಪ್ರೇಕ್ಷಕ ಸಮುದಾಯಕ್ಕೆ ತೀರ ಹತ್ತಿರವಾದರು. ಗೀತಪ್ರಿಯ ಅವರ ಸಾಹಿತ್ಯ, ವಿಜಯಭಾಸ್ಕರ್ ಅವರ ಸಂಗೀತ ಹಾಲು-ಜೇನಿನಂತೆ ಬೆರೆಯುತ್ತಿದ್ದುದು ವಿಶೇಷ. 300ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ.


   " ಭಗವಂತ ಕೈ ಕೊಟ್ಟ..' ಎನ್ನುವ ಹಾಡು ರೇಡಿಯೋದಲ್ಲಿ ಬಂದಾಗ,ಮತ್ತು ಕೆಲವೊಮ್ಮೆ ನಾವು ಯಾರ ಮೇಲಾದರೂ ಕೈ ಮಾಡಿದಾಗ,ಒದೆಯುವಾಗ ನಮ್ಮಪ್ಪ ಈ ಹಾಡಿನ ಮೂಲಕ ನಮಗೆ ಉಗಿದು ಬುದ್ದಿ ಹೇಳುತಿದ್ದದು ನೆನಪಾಗುತ್ತಿದೆ.


     ಹೀಗೆ ಮುಂದೆ ಸ್ವತಃ ಚಿತ್ರ ನಿರ್ದೇಶನಕ್ಕೆ ಇಳಿದಾಗಲೂ,ಇವರ ಸಮಾಜದ ಅವ್ಯವಸ್ಥೆಯ ವಿರುದ್ದದ ಸಿಟ್ಟು,ಸೆಡವು,ಕೋಪ ಕಡಿಮೆಯಾಗಿರಲಿಲ್ಲ, ಎಂಬುದಕ್ಕೆ 'ಬೆಳುವಲದ ಮಡಿಲಲ್ಲಿ' ಚಿತ್ರದ " ಎಲ್ಲಾರ್ ಕಾಯೋ.." ಹಾಡೇ ಸಾಕ್ಷಿ.ಬೇಕಾದರೇ ಈ ಎರಡು ಹಾಡನ್ನ ಕೇಳುತ್ತಾ ಹೋಗಿ ನಿಮಗೆ "ಗೀತಪ್ರಿಯ" ರ ಸಾಮಾಜಿಕ ಕಳಕಳಿ ಇಷ್ಟವಾಗದೇ ಇರದು.

ತಮ್ಮ ಮೊದಲ ಚಿತ್ರ ಮಣ್ಣಿನ ಮಗದಲ್ಲೂ ನಾಯಕಿಯ ಮೂಲಕ ಈ ಸಮಾಜದ ವ್ಯವಸ್ಥೆಯನ್ನ ಪ್ರಶ್ನಿಸುವ ಹಾಡೊಂದು ರಚಿಸಿದ್ದರು.

"ಇದೇನಾ ಸಭ್ಯತೆ ?ಇದೇನಾ ಸಂಸ್ಕೃತಿ?

ಎಂದು ನೊಂದು ಕೇಳುತಿಹಳು

ನಮ್ಮ ತಾಯಿ ಭಾರತಿ."


 ಈ ಹಾಡು ಪ್ರತಿಯೊಬ್ಬ ಭಾರತೀಯನನ್ನ ಪ್ರಶ್ನೆ ಮಾಡುವಂತಿದ್ದ ಈ ಸಾಹಿತ್ಯದಲ್ಲಿ ಜನಪರ,ಸಮಾಜಮುಖಿ ಚಿಂತನೆ ಗೀತಪ್ರಿಯರಿಗಿತ್ತು ಎಂಬುದನ್ನ ಕಾಣಬಹುದು.


   ಇಲ್ಲಿ ಮತ್ತೊಂದು ನೆನಪಾಗುವುದೆಂದರೆ;1973 ರಲ್ಲಿ "ತ್ರಿವೇಣಿ" ಎಂಬ ಚಿತ್ರದಲ್ಲಿ ಇಂದಿನ ನಾದಬ್ರಹ್ಮ ಹಂಸಲೇಖ ಬರೆದ ಮೊದಲ ಹಾಡು ಕೂಡಾ ದೇವರನ್ನೇ ಪ್ರಶ್ನಿಸಿ ಬರೆದ ಹಾಡಾಗಿತ್ತು ಎಂಬುದು.


ಆರ್ಕೆಸ್ಟ್ರಾ ,ನಾಟಕಗಳಲ್ಲಿ ತನ್ನ ಬದುಕು ಕಟ್ಟಿಕೊಳ್ಳಲು ಹೆಣಗಾಡುತಿದ್ದ ಗಂಗರಾಜು ಅಲಿಯಾಸ್ ಹಂಸಲೇಖ ತನ್ನ ಬಡತನಕ್ಕೆ ಆ ದೇವರೇ ಕಾರಣ ಎಂದು ಟೀಕಿಸಿ ಮೊದಲ ಗೀತಡಯಲ್ಲೇ ತನ್ನೆಲ್ಲಾ ನೋವನ್ನ ಹೊರಹಾಕಿದ್ದರು."ನೀನಾ ಭಗವಂತ" ಎಂದು ಬರೆದ ಈ ಹಾಡು ಸ್ವತಃ ಹಂಸಲೇಖ ಸೋದರ ಬಾಲಕೃಷ್ಣ ಹಾಡಿದ್ದರು.ನಂತರ ಹಿರಿಯ ಹಿತೈಷಿಯೊಬ್ಬರ ಸಲಹೆಯಂತೆ ಮೊದಲಿಗೆ ಟೀಕಿಸುವ ಹಾಡನ್ನ ಬಿಟ್ಟು ,ಬೇರೆಯ ಹಾಡುಗಳಲ್ಲಿ ತೊಡಗಿಸಿಕೊಂಡ ಹಂಸಲೇಖರು ಇಂದು ಚಿತ್ರರಂಗದ ವಿಶ್ವವಿದ್ಯಾಲಯವೇ ಆಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.


 "ಜಗಕುಪಕರಿಸಿ,ನನಗಪಕರಿಸೋ

ಲೋಕೋದ್ದಾರಕ ನೀ‌ನೇನಾ?

ಗೋರ್ಕಲ್ಲಿಗೆ ಗುಡಿ ಮಂದಿರ ನೂರು

ಮಾಡುವ ನರನಿಗೆ ನೆಲೆಯಿಲ್ಲ

ಹೂ ಸೌಗಂಧವ,ಲೇಪಿಸಿ,ಹಾಡಿ

ಕರೆದರೂ ಕರುಣಿಸೆ ಕೃಪೆಯಿಲ್ಲ..

ನೀನಾ...ಭಗವಂತ?


ನಶ್ವರ ಭೋಗದ ಆಸೆ ಕಡಲಲಿ

ತೇಲಿಸಿ ಮುಳುಗಿಸಲೆಕಯ್ಯ?

ಅಂತರ ತಿಳಿಯದೇ ಪಾಲಿಸುವವಗೆ

ದೈವೊತ್ತಮ ಬಿರುದೇಕಯ್ಯ?....."


   ಹೀಗೆ ಉತ್ಕೃಷ್ಠ ಪದಗಳಲಿ ತಮ್ಮ ಜೀವನದ ನೋವುಗಳಿಗೆಲ್ಲಾ ದೇವರೆ ಕಾರಣ ಎಂದು ಪದಗಲ ಮುಲಕ ಪ್ರಶ್ನೆ ಮಾಡಿದ ಹಂಸಲೇಖರ ಈ ಧ್ವನಿ ಎಲ್ಲಾ ನೊಂದವರ ಮುಖವಾಣಿಯ ಹಾಡು ಎಂದರೂ ತಪ್ಪಲ್ಲ.


   ಹೀಗೆ ದೇವರನ್ನ ಪ್ರಶ್ನೆ ಮಾಡುವ ಹಾಡುಗಳಿಗೆ ಉತ್ತರವೇನೋ ಎಂಬಂತೆ 1972 ರಲ್ಲಿ ತೆರೆಗೆ ಬಂದ "ಭಲೆ ಹುಚ್ಚ" ಚಿತ್ರದ ಹಾಡು ಸೃಷ್ಠಿಯಾಗಿತ್ತು.ಈ ಹಾಡು ರಚಿತವಾಗಿದ್ದು ವಿಜಯನಾರಸಿಂಹರಿಂದ.ಅದೂ ಒಬ್ಬ "ಹುಚ್ಚ" ನ ಪಾತ್ರಧಾರಿಯ ಮೂಲಕ ದೇವರ ಕುರಿತ ಮೇಲಿನ ಪ್ರಶ್ನೆಗಳಿಗೆಲ್ಲಾ ಚಮತ್ಕಾರಿಕ ಉತ್ತರ ನೀಡಿದ ಪರಿ ನಿಜಕ್ಕೂ ಗಮನಸೆಳೆಯುತ್ತದೆ.

ಅಣ್ಣಾವ್ರ ಅಭಿನಯದಲ್ಲಿ ದೇವರ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನೆಲ್ಲಾ ಅನಾವರಣ ಮಾಡುವ ಪರಿ ನಿಜಕ್ಕೂ ಬಹಳ ಇಷ್ಟವಾಗುತ್ತದೆ.



ಭಲೇ ಹುಚ್ಚ (1972) - ಕಲ್ಲಾದೆ ಏಕೆಂದು ಬಲ್ಲೆ  ಶಿವನೆ ಕಲ್ಲಾದೆ ಏಕೆಂದು ಬಲ್ಲೆ

ಸಾಹಿತ್ಯ: ವಿಜಯನಾರಸಿಂಹ   ಸಂಗೀತ: ರಾಜನ್-ನಾಗೇಂದ್ರ  ಹಾಡಿದವರು: ಪಿ.ಬಿ.ಶ್ರೀನಿವಾಸ್


ಕಲ್ಲಾದೆ ಏಕೆಂದು ಬಲ್ಲೆ  ಶಿವನೆ ಕಲ್ಲಾದೆ ಏಕೆಂದು ಬಲ್ಲೆ

ಆ ಗುಟ್ಟನ್ನು ಹೇಳಲೇನು ಇಲ್ಲೆ

ಕಲ್ಲಾದೆ ಏಕೆಂದು ಬಲ್ಲೆ

ಆ ಗುಟ್ಟನ್ನು ಹೇಳಲೇನು ಇಲ್ಲೆ


ಅತಿಯಾಸೆ ತುಂಬಿರುವ ಜನಗಳ ರೀತಿ

ಲಂಚ ತೋರಿಸುತ ಬೇಡುತಿಹ ಭಕುತರ ನೀತಿ

ಈ ಪಾಪಿಗಳ ಕೈಗೆ ಸಿಕ್ಕಿ ನರಳುವ ಭೀತಿ, ಅಲ್ವೇ

ಕಲ್ಲಾದೆ ಏಕೆಂದು ಬಲ್ಲೆ  ನೀ ಕಲ್ಲಾದೆ ಏಕೆಂದು ಬಲ್ಲೆ

ಆ ಗುಟ್ಟನ್ನು ಹೇಳಲೇನು ಇಲ್ಲೆ


ಮನಸೆಲ್ಲೋ ಕಣ್ಣೆಲ್ಲೋ ಪೂಜೆ ಎನುವರು

ನಿನಗೆ ನೈವೇದ್ಯ ಎಂದೆಲ್ಲ ತಾವೆ ತಿನುವರು

ಮನಸೆಲ್ಲೋ ಕಣ್ಣೆಲ್ಲೋ ಪೂಜೆ ಎನುವರು

ನಿನಗೆ ನೈವೇದ್ಯ ಎಂದೆಲ್ಲ ತಾವೆ ತಿನುವರು

ನೀ ಬಂದು ರುಚಿ ನೋಡು ಒಮ್ಮೆಯಾದರೂ

ಆಗ ಗುಡಿಯಿಂದ ನಿನ್ನನ್ನೇ ಅಟ್ಟಿ ಬಿಡುವರು

ಕಲ್ಲಾದೆ ಏಕೆಂದು ಬಲ್ಲೆ  ಶಿವನೆ ಕಲ್ಲಾದೆ ಏಕೆಂದು ಬಲ್ಲೆ

ಆ ಗುಟ್ಟನ್ನು ಹೇಳಲೇನು ಇಲ್ಲೆ


ನೂರಾರು ಕಥೆ ಬರೆದು ಹೇಳುವರಲ್ಲ

ನಿನಗೆ ತಮ್ಮಂತೆ ಸತಿಸುತರ ಕಟ್ಟಿಹರಲ್ಲ

ನೂರಾರು ಕಥೆ ಬರೆದು ಹೇಳುವರಲ್ಲ

ನಿನಗೆ ತಮ್ಮಂತೆ ಸತಿಸುತರ ಕಟ್ಟಿಹರಲ್ಲ

ನಿನ್ನ ಹೆಸರಲ್ಲಿ ಸುಲಿಗೆಯನು ಮಾಡುವರಲ್ಲ

ನಿನ ಕಂಡು ಅಯ್ಯೊ ಪಾಪ ಎನುತಿದೆಯಲ್ಲ

ಕಲ್ಲಾದೆ ಏಕೆಂದು ಬಲ್ಲೆ ಶಿವನೆ ಕಲ್ಲಾದೆ ಏಕೆಂದು ಬಲ್ಲೆ

ಆ ಗುಟ್ಟನ್ನು ಹೇಳಲೇನು ಇಲ್ಲೆ

ಅತಿಯಾಸೆ ತುಂಬಿರುವ ಜನಗಳ ರೀತಿ


ಲಂಚ ತೋರಿಸುತ ಬೇಡುತಿಹ ಭಕುತರ ನೀತಿ

ಈ ಪಾಪಿಗಳ ಕೈಗೆ ಸಿಕ್ಕಿ ನರಳುವ ಭೀತಿ

ಕಲ್ಲಾದೆ ಏಕೆಂದು ಬಲ್ಲೆ ಆ ಗುಟ್ಟನ್ನು ಹೇಳಲೇನು ಇಲ್ಲೆ

---------------------------------------------------------


 ನಾಲ್ಕು ಸಾಲು ಬರೆಯಲು ಕುಳಿತವಗೆ ಈ ಧೀರ್ಘ ಗಾನಗಣಿಗಾರಿಕೆ ಮಾಡುವಂತಾಯ್ತು.


  ಗಾನಾಸುಮಾ ಪಟ್ಟಸೋಮನಹಳ್ಳಿ

ಸೋಮವಾರ, ಸೆಪ್ಟೆಂಬರ್ 27, 2021

ವಿಶೇಷ ಗಾನಗಣಿಗಾರಿಕೆ




ಮೊನ್ನೆ ಹಂಸಲೇಖರು ಆಂತರಿಕ

ಗಾನಕರುಹು ಬೆನ್ನತ್ತಿ ಹೊರಟ

ಗಾನಶಿಕಾರಿ ಗಾನಗಣಿಗಾರಿಕೆಯಲ್ಲಿ

ಸೆರೆಯಾಯ್ತು ... !!!


  ಮೊನ್ನೆ ಎಸ್.ಪಿ.ಬಾಲಸುಬ್ರಮಣ್ಯಂ ನಿಧನರಾದಾಗ ಕನ್ನಡ ನಾಡಿನ ದೇಸಿದೊರೆ ನಾದಬ್ರಹ್ಮ ಹಂಸಲೇಖ ರವರು ಪತ್ರಿಕಾಗೋಷ್ಠಿಯಲ್ಲಿ ಗದ್ಗದಿತರಾಗಿ ಮಾತನಾಡುತ್ತಾ..ಮಧ್ಯೆ ಒಂದು ಹಾಡಿನ ಬಗ್ಗೆ ಮಾತನಾಡಿದ್ದನ್ನ ಯಾರೂ ಅಷ್ಟಾಗಿ ಗಮನಿಸಲಿಲ್ಲ ಅನ್ಸುತ್ತೆ.


     ಅಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ರಿಗೆ "ಗಾನಯೋಗಿ ಪಂಚಾಕ್ಷರಿ ಗವಾಯಿ" ಚಿತ್ರದ ಹಾಡು ರಾಷ್ಟ್ರೀಯ ಪ್ರಶಸ್ತಿ ಆಯ್ಕೆ ಮಾಡುವ ಹೊತ್ತಿನಲ್ಲಿ "ಬಾಂಬೆ" ಸಿನಿಮಾದ ಹಾಡು ತುಂಬಾ ಪೈಪೋಟಿ ನೀಡಿ, ಪ್ರಶಸ್ತಿ ಯ ಮುಂಚೂಣಿಯಲ್ಲಿದ್ದಾಗ ತೀರ್ಪುಗಾರರಲ್ಲಿ ಒಬ್ಬರಾಗಿದ್ದ ಪಿ.ಬಿ.ಶ್ರೀನಿವಾಸ್, ಹಂಸಲೇಖರ ಪ್ರತಿಭೆ ಬಗ್ಗೆ ಬಹಳ ಅರಿವು ಉಂಟಾಗುತ್ತಿದೆ

ಪಿ.ಬಿ. ಹಂಸಲೇಖರ ಒಂದು ಹಾಡಿಗೆ ರಾಷ್ಟಪ್ರಶಸ್ತಿ ಕೇವಲ ಆ ಹಾಡಿನ ಇಂಗ್ಲೀಷ್ ಅನುವಾದವಿಲ್ಲದೆ, ಸಮಿತಿ ಸದಸ್ಯರಿಗೆ ಅರ್ಥ ಮಾಡಲಾಗದ ವಂಚಿತವಾಗಿತ್ತಲ್ಲ.ಆ ಪ್ರತಿಭೆಯೇ ಹಂಸಲೇಖ "ಎಂದು ಹೇಳಲಾಗಿದೆ.


  ಆದರೆ ಆ ಹಾಡು ಯಾವುದು? ಅದು ಯಾವ ಚಿತ್ರದ ಹಾಡು? ಪ್ರಶಸ್ತಿ ವಂಚಿತ ಆ ಹಾಡಿನ ಎದುರು ಪ್ರಶಸ್ತಿ ಬಾಚಿಕೊಂಡ ಸಾಹಿತಿ ಯಾರು? ಎಂದು #ಗಾನಗಣಿಗಾರಿಕೆ ಒಂದೇ ಸಮನೆ ತಲೆಯೊಳಗೆ ಹುಳ ಬಿಟ್ಟು ಕೂತವನಿಗೆ ಕೊನೆಗೆ ಆ ಪ್ರಶಸ್ತಿ ವಂಚಿತ ಹಾಡು ಸಿಕ್ಕೇಬಿಟ್ಟಿತ್ತು ..!


1996 ರಲ್ಲಿ "ಮ" ಕಾರ ಪ್ರಿಯ ಉದ್ಯಮಿ ನಿರ್ಮಾಪಕ ಸಂದೇಶ್ ನಾಗರಾಜು ಅವರ ಪ್ರೀತಿಯ ಗೆಳೆಯ ನಟ ಅಂಬರೀಶ್ ಅಭಿನಯದಲ್ಲಿ ಎಸ್. ಕೊಡುವ ವಿಶಿಷ್ಟ ಪ್ರಶ್ನೋತ್ತರ ಹಾಡೇ ಆ ಪ್ರಶಸ್ತಿ ವಂಚಿತ ಹಾಡು.


  "ಅಮ್ಮ ಅಮ್ಮ ಹೇಳಮ್ಮ ... ಎಂದು ಆರಂಭವಾಗುವ ಈ ಹಾಡು ಅಂಧ ಮಗುವು ಕೇಳುವ ನೋಡಲಾಗದ ಆ ಮಗುವಿನ ಅನುಭವಕೆ ಬರುವಂತೆ ಬಹಳ ವಿಶಿಷ್ಟವಾದ ಭಾಷೆಯಲ್ಲಿ ಬಣ್ಣ, ದೇವರು, ಗಾಳಿ..ಹೀಗೆ ಹಲವು ವಿಷಯಗಳ ಭಾಗಗಳನ್ನು ಅರ್ಥೈಸುವ ವಿಶಿಷ್ಟ ಸಾಹಿತ್ಯವನ್ನು ಹಂಸಲೇಖ ರಚಿಸಿದ, ಆ ಹಾಡಿನ ಅರ್ಥವನ್ನು ಆಂಗ್ಲಭಾಷೆಯಲ್ಲಿ ತರ್ಜುಮೆ ಮಾಡಿ ರಾಷ್ಟಪ್ರಶಸ್ತಿಯನ್ನು ಆರಿಸಿಕೊಳ್ಳುವುದು ಇನ್ನೊಂದು ಹಾಡಿಗೆ ಪ್ರಶಸ್ತಿ ದೊರೆಯುವಂತಾಯ್ತು.


-------------------------------

ಚಿತ್ರ- ಮೌನರಾಗ (1996)

ಸಾಹಿತ್ಯ- ಸಂಗೀತ- ಹಂಸಲೇಖ

ಗಾಯನ- ಮನು, ಚಿತ್ರಾ, ಮೋನಿಕಾದತ್


ಅಮ್ಮ ಅಮ್ಮ ಹೇಳಮ್ಮ?

ಬಣ್ಣ ಅಂದರೆ ಏನಮ್ಮ?

ಭಾವಗಳಿಂದಲೇ ಬಾಳಮ್ಮ

ಬಣ್ಣ ಬಣ್ಣ ಅದರ ಮುಖವಮ್ಮ


ಅಪ್ಪ ಅಪ್ಪ ಹೇಳಪ್ಪ?

ಬೆಳಕು ಅಂದರೆ ಎನಪ್ಪ?

ಬೆಂಕಿ ಬೆಳಕೇ ಜಗವಮ್ಮ

ನೋವೇ ಬೆಂಕಿ ನಲಿವೇ ಬೆಳಕಿನಮ್ಮ


ಕತ್ತಲೆ ಎಂದರೆ ಏನಮ್ಮ?

ಬೆಳಕೇ ಇಲ್ಲದ ಜಗವಮ್ಮ

ಲೋಕ ಎಂದರೆ ಏನಪ್ಪ?

ಅಪ್ಪ ಅಮ್ಮ ಮಗುವಿನಮ್ಮ

ಗಾಳಿಯು ಯಾಕೆ ಸುಡದಮ್ಮ?

ಒಂದೆಡೆ ಯಾಕೆ ನಿಲದಮ್ನ?

ಗಾಳಿಗೆ ರೂಪ ಇಲ್ಲಮ್ಮ

ದೇವರ ಮಾಯೆ ಅದು ಅಮ್ಮ

ದೇವರು ಯಾರಮ್ಮ?

ಅವನಿಗೂ ಕುರುಡಮ್ಮ?

ಕುರುಡನು ನಿಜವಮ್ಮ ...

ನೋಡಲು ಸಿಗನಮ್ಮ ..


ಅಪ್ಪ ಅಪ್ಪ ಹೇಳಪ್ಪ?

ವಿದ್ಯೆ ಅಂದರೆ ಏನಪ್ಪ?

ಕಳುವೇ ಆಗದ ಸಿರಿಯಮ್ಮ

ದುಡ್ಡೇ ದೊಡ್ಡಪ್ಪ ವಿದ್ಯೆ ಅದರಪ್ಪ


ಹೂಗಳು ಯಾಕೆ ನಗದಮ್ಮ?

ನಕ್ಕರೂ ಸದ್ದು ಇರದಮ್ಮ

ಕಣ್ಣಲಿ ನೀರು ಯಾಕಪ್ಪ?

ಚಿಂತೆಯ ಹೊತ್ತು ತರಲಮ್ಮ

ಕೋಗಿಲೆಯಾಗೆ ಕಾಗೆಗಳ

ಕಂಠವು ಯಾಕೆ ಇಂಪಿಲ್ಲ

ಸೃಷ್ಟಿ ಯು ಮಾಡೋ ಅಡುಗೆಯಲಿ

ತಪ್ಪೇ ಹುಡುಕುವ ಹಾಗಿಲ್ಲ ..

ಕುರುಡು ನಾನ್ಯಾಕಮ್ಮ?

ಯಾರದೀ ತಪ್ಪಮ್ಮ?

ತಪ್ಪಿನ ಅರಿವನ್ನು ಅರಿಯದ ತಪ್ಪಮ್ಮ

ಅಮ್ಮ ಅಮ್ಮ ಹಾಡಮ್ಮ?

ಹಾಡಿಗೆ ಸೋಲೋದ್ಯಾಕಮ್ಮ?

ಹಾಡಿಗೆ ಸೋಲೆ ಇಲ್ಲಮ್ಮ

ಮಾತು ಅಮ್ಮ ಹಾಡು ಅವರಮ್ಮ.

-------------------------------


    ಹಾಗಾದರೆ..ಈ ಹಾಡಿನ ವಿರುದ್ದ ಪ್ರಶಸ್ತಿ ಬಾಚಿಕೊಂಡ ಹಾಡು, ಸಾಹಿತಿ ಯಾರು? ಎಂದು ಹುಡುಕುತ್ತಾ ಹೋದಂತೆ ಹಿಂದಿಯ ಪ್ರಸಿದ್ದ ಸಾಹಿತಿ ಜಾವೇದ್ ಅಕ್ತರ್ "ಸಾಜ್" ಚಿತ್ರಕ್ಕೆ ರಚಿಸಿದ ಗೀತೆಗೆ ರಾಷ್ಟ್ರಪ್ರಶಸ್ತಿ ದೊರಕುವಂತಾಗುತ್ತದೆ.ಅಂದೇ ಹಂಸಲೇಖ ರ ಹಾಡಿನ ಸಾಹಿತ್ಯವನ್ನು ಇಂಗ್ಲೀಷ್ ಗೆ ಅನುವಾದಿಸಲಾಗಿದೆ


  ಈಗ ಹಂಸಲೇಖರ ಹಾಡಿನ ಸಾಹಿತ್ಯದ ಬಗ್ಗೆ ತಿಳಿಯೋಣ ...


     "ಮೌನರಾಗ" ದಲ್ಲಿ ಅಂಧ ಹುಡುಗಿಗೆ ಪ್ರಕೃತಿಯನ್ನ ಅರಿವು ಮೂಡಿಸುವ ಈ ಗೀತೆ ರಚನೆಯು ಒಂದು ವರ್ಷದ ಮುಂಚೆ, ಹಂಸಲೇಖ ಶಿಷ್ಯರಾದ ವಿ.ಮನೋಹರ ಕೂಡ ಈ ಅಂಧಳ ಮನದೊಳಗಿನ ಪ್ರಶ್ನೆಗಳಿಗೆ ಅವಳ ದೇಹದ ಅಂಗಗಳ ಹೋಲಿಕೆ ಮಾಡಿ ಸೂರ್ಯ, ಚಂದ್ರ, ಬಣ್ಣ, ಬೆಳಕು, ಮೋಡ..ಹೀಗೆ ಪ್ರಕೃತಿಯನ್ನ ಅರ್ಥ ಮಾಡಿಸುವ ಗೀತೆಯನ್ನ "ಅನುರಾಗ ಸಂಗಮ "ಚಿತ್ರಕ್ಕಾಗಿ ಬಳಸಿದ್ದರು.ಎಸ್.ಪಿ.ಬಿ ಮತ್ತು ಸುಧಾರಾಣಿ ದನಿಯಲ್ಲಿ ಮನೋಹರವಾಗಿ ಮೂಡಿಬಂದಿತ್ತು.

ಕುಮಾರ್ ಗೋವಿಂದ್ ಮತ್ತು ಸುಧಾರಣಿ ಬಹಳ ನವಿರಾಗಿ ಅಭಿನಯಿಸಿದ ಹಾಡು, ಸಾಹಿತ್ಯ, ಸಂಗೀತ ಎಲ್ಲವೂ ಮನಕ್ಕೆ ಮುದ ನೀಡುವಂತಾಗಿತ್ತು.

ಹಂಸಲೇಖರು ಅಲೌಖಿಕತೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ, ಮನೋಹರ್ ಲೌಖಿಕದ ಅನುಭವವನ್ನು ಬಳಸುತ್ತಾರೆ.

ಆ ಸಾಹಿತ್ಯವನ್ನು ಒಮ್ಮೆ ಗಮನಿಸಿ ..


------------------------------

ಅನುರಾಗ ಸಂಗಮ (೧೯೯೫) - ತಾವರೆ ಓ ತಾವರೆ ... ತಾವರೆ ಓ ತಾವರೆ ...

ಸಂಗೀತ ಮತ್ತು ಸಾಹಿತ್ಯ: ವಿ.ಮನೋಹರ ಗಾಯನ: ಎಸ್ಪಿ.ಬಿ. ಸುಧಾರಾಣಿ


ಕೋರಸ್: ಆಆಆ ... ಆ .. ಆ ... ಆ

ಗಂಡು: ತಾವರೆ ಓ ತಾವರೆ ... ತಾವರೆ ಓ ತಾವರೆ ...

            ಭೂದೇವಿಯಾ ಮೈಮ್ಯಾಲಂಗನ ಚಿತ್ತಾರವ ಲಾವಣಿ ಹಾಡಲಿ ತೋರಿಸುವೇ ...

             ತಾವರೆ ಓ ತಾವರೆ ... (ಆಆಆ ..) ತಾವರೆ ಓ ತಾವರೆ ... (ಆಆಆ ..)

ಕೋರಸ್: ಆಆಆ ... ಆ .. ಆ ... ಆ ಆಆಆ ... ಆ .. ಆ ... ಆ ... ಆ ... ಆ ... ಆ ... ಆ ... ಆ ... ಆ ...  


ಗಂಡು: ಮುಂಜಾನೆ ಮುಸ್ಸಂಜೆ ಭುವಿಗೆ ಸೂರ್ಯನಾರತಿ

ಹೆಣ್ಣು: ಅಂದ್ರೆ ಸೂರ್ಯ ಹೆಂಗಿರಾಂತನೇ ...

ಗಂಡು: ಮುದ್ದಾದ ಈ ಕೆನ್ನೇ ಕೆಂಪು ಸೂರ್ಯನಾಕೃತಿ ...

ಹೆಣ್ಣು: ಬಣ್ಣ ಅಂದರೇ ಹೆಂಗಿರುತ್ತೇ ...

ಗಂಡು: ಮುತ್ತೊಂದು ಮೈಸೋಕಿ ಮಧುರ ಮಧುರ ಕಂಪನ

            ಮನದಲ್ಲಿ ನೂರಾರು ಭಾವವೇನೇ ಬಣ್ಣ

            ನಿನ್ನ ಹುಬ್ಬನಂತೆಯೇ ಚೆಲುವ ಮಳೆಬಿಲ್ಲದೂ

            ಇಂಥ ನುಣುಪಾದ ರೆಕ್ಕೆನೇ ಹಾರೋ ಚಿಟ್ಟೆಯೂ

            ತಾವರೆ ಓ ತಾವರೆ ... ತಾವರೆ ಓ ತಾವರೆ ...

            ಭೂದೇವಿಯಾ ಮೈಮ್ಯಾಲಂಗನ ಚಿತ್ತಾರವ ಲಾವಣಿ ಹಾಡಲಿ ತೋರಿಸುವೇ ...

            ತಾವರೆ ಓ ತಾವರೆ ... ತಾವರೆ ಓ ತಾವರೆ ...


ಗಂಡು: ಇರುಳೆಲ್ಲಾ ಈ ಗಲ್ಲದಂತೇ ಹೊಳೆವ ಚಂದಿರ ಹೂಂ ... ಹೂಂ ... ಹೂಂ ...

ಹೆಣ್ಣು: ಈ ಇರುಳು ಹಗಲು ಹೆಂಗಿರುತ್ತೇ .....

          ನಿದಿರೇನೇ ಇರುಳಮ್ಮ ಹಗಲು ಅಂದರೆಚ್ಚರಾ ..

ಗಂಡು: ಮೋಡಗಳು ತಾರೆಗಳೂ ಅಂದರೇನೂ ....

            ಈ ಮುಂಗುರುಳ ಮಾಲೆ ತೇಲೋ ಮುಗಿಲ ಸಾಲ್ಗಳು

            ಈ ಕಣ್ಣ ಪ್ರತಿರೂಪ ಸಾವಿರ ತಾರೆ

            ಸೃಷ್ಠಿ ಚೆಲುವೆಲ್ಲವಾ ಜಾಣೆ ನಿನ್ನಲ್ಲಿಯೇ ತುಂಬಿ ತಂದಂಥ ಆ ಬ್ರಹ್ಮ ತುಂಬಾ ರಸಿಕನೂ

            ತಾವರೆ ಓ ತಾವರೆ ... ತಾವರೆ ಓ ತಾವರೆ ...

ಕೋರಸ್: ಆಆಆ ... ಆ .. ಆ ... ಆ ಆಆಆ ... ಆ .. ಆ ... ಆ ... ಆ ... ಆ ... ಆ  

---------------------------------


-------


ಹಂಸಲೇಖ, ವಿ.ಮನೋಹರ್ ಈ "ಕುರುಡು ಗೀತೆ" ರಚನೆ ಮಾಡುವ ಸಮಯದಲ್ಲಿ ಇಪ್ಪತ್ತು ವರುಷದ ಹಿಂದೆ

ಅಂದರೆ 1976 ರಲ್ಲಿ "ಚಿರಂಜೀವಿ" ಚಿತ್ರದಲ್ಲಿ ಆರ್.ಎನ್.ಜಯಗೋಪಾಲ್ ಈ ತೆರನಾದ ಅಂಧರ ಭಾವನೆಗಳಿಗೆ ಉತ್ತರಿಸುವ ಪ್ರಶ್ನೋತ್ತರ ಗೀತೆಯನ್ನ ರಚನೆ ಮಾಡಿದ್ದರು. ಬರೆದ ಸಾಹಿತ್ಯಕ್ಕೆ ಸೊಗಸಾದ ರಾಗ ಸಂಯೋಜನೆ ಮಾಡಿದವರು ವಿಜಯಭಾಸ್ಕರ್.


--------------------------------

ಚಿತ್ರ- ಚಿರಂಜೀವಿ (18-05-1976)

ಗಾಯಕರು- ಎಸ್ ಪಿ.ಬಿ, ವಾಣಿಜಯರಾಮ್

ಸಂಗೀತ- ವಿಜಯಭಾಸ್ಕರ್

ಸಾಹಿತ್ಯ- ಆರ್.ಎನ್.ಜಯಗೋಪಾಲ್


ನಿನ್ನ ಕಂಗಳ ಜ್ಯೋತಿಯಾಗುವೆ ನಾನು

ನನ್ನ ಕಣ್ಣಲಿ ಜಗವ ಕಾಣುವೆ

ನೀನು

ಒಲವು ಕಂಡ ಹೃದಯದಲ್ಲಿ

ಉದಾಹರಣೆಗೆ ಇರುಳಿಲ್ಲ

ಚೆಲುವು ಧರೆಯೆಲ್ಲ ..


                            || ಪ ||


ನೀರಲಿ ತೇಲುವ ಎಲೆಗಳ

ನಡುವೆ

ಅರಳಿದ ಹೂವಿದು ಏನು?

ರವಿಯನು ಕಂಡು ಅರಳುತ

ನಗುವ ತಾವರೆ ಹೂವಿದು ಅವನು

ಈ ಹೂವು ಹೇಗಿದೆ?

ನಿನ್ನೀಮೊಗದ ಹಾಗಿದೆ ..


                    || ಪ ||


ಗಾಳಿಯು ಬೀಸಲು ತಲೆಯದು ತೂಗಿ

ಆಡುವ 

ಇದರ ಹೆಸರೇನು?

ಆಸರೆಗಾಗಿಯೇ ಮರವನು ಬಳಸಿ

ನಿಂತಿಹ ಬಳ್ಳಿಯು ಅವನು

ಈ ಬಳ್ಳಿ ಹೇಗಿದೆ?

ನಿನ್ನೀ ನಡುವಿನ ಹಾಗಿದೆ ..


                                  || ಪ ||


ದೂರದಿ ಕೇಳುವ ಗಂಟೆಯು

ಮೊಳಗುವ

ಮಂದಿರದಲ್ಲಿಹುದೇನು?

ಭಕುತರಿಗಾಗಿ ಗುಡಿಯಲಿ ನೆಲಸಿಹ

ದೇವರ ಮೂರುತಿ ಅವನು

ಮೂರುತಿ ಹೇಗಿದೆ?

ನಿನ್ನೀ ಮನಸಿನ ಹಾಗಿದೆ ...


                                     || ಪ ||

--------------------------------


 ಇಲ್ಲಿ ಆರ್.ಎನ್.ಜಯಗೋಪಾಲ್ ಬರೀ ಸಾಹಿತಿಯಾಗಿ ಈ ಹಾಡು ರಚಿಸಿದರೆ, ವಿ.ಮನೋಹರ ಮತ್ತು ಹಂಸಲೇಖ ತಮ್ಮದೇ ಸಾಹಿತ್ಯಕ್ಕೆ ತಮ್ಮದೇ ಸಂಗೀತದಿಂದ ಅಂಧತೆಯ ಹಾಡಿಗೆ ಅಲಂಕರಿಸಿದ್ದಾರೆ.ಇಲ್ಲಿ ಒಬ್ಬರ ಅನುಭವದ ಸಾಹಿತ್ಯಗಳು ಒಂದೇ ತೆರನಾದ ಅರ್ಥದ ಜೊತೆಗೆ ತಮ್ಮದೇ ವಿಶಿಷ್ಟತೆಯ ಹಾಡುಗಳಿವು ಎಂದರೆ ತಪ್ಪಲ್ಲ.ಮೂವರು ಸಾಹಿತಿಗಳ ಸಾಹಿತ್ಯ ಮತ್ತು ಹಾಡುಗಳು ಇಲ್ಲಿವೆ.

ತಮ್ಮ ಅನುಭವವನ್ನು ಒಬ್ಬ ವ್ಯಕ್ತಿಯು ಕಟ್ಟಿಕೊಡುವ ಶೈಲಿ ನಿಜಕ್ಕೂ ವಿಭಿನ್ನವಾಗಿದೆ ಎಂದಷ್ಟೇ ಹೇಳಬಹುದು.


  ಮೊನ್ನೆ ಹಂಸಲೇಖ ಎಸ್.ಪಿ.ಬಿ ಬಗ್ಗೆ ಮಾತನಾಡುತ್ತಾ ಮಾತಿನ ಮಧ್ಯೆ ಹೇಳಿದ, ರಾಷ್ಟ್ರಪ್ರಶಸ್ತಿ ವಂಚಿತ ಒಂದು ಹಾಡಿನ ವಿಚಾರದ ಬೆನ್ನತ್ತಿ ಹೊರಟ ಗಣಶಿಕಾರಿಗೆ ಬಹುದೊಡ್ಡ ಗಾನಗಹನವೇ ಸೆರೆಯಾಯ್ತು. ಹುಡುಕುತ್ತಾ..ಹುಡುಕುತ್ತಾ ಗಾನಗಣಿಗಾರಿಕೆ ಗೆ ಹೊರಟ ಗಾನ ಮನಸಿಗೆ ಇಷ್ಟೆಲ್ಲಾ ಕಲೆ ಹಾಕುವ ಶ್ರಮವಹಿಸಬೇಕಾಯ್ತು.


  ಗಾನಾಸುಮಾ ಪಟ್ಟಸೋಮನಹಳ್ಳಿ

ಮಂಗಳವಾರ, ಸೆಪ್ಟೆಂಬರ್ 21, 2021

ವಿಶೇಷಗಾನಗಣಿಗಾರಿಕೆ





 

"ತಾನು ಹಾಡಲಾಗದ

ಹಾಡಿಗೆ ಮತ್ತೊಬ್ಬ ಮಹಾನ್ ಗಾಯಕನೇ

ಸೂಕ್ತ ಎಂದು ದೊಡ್ಡತನ ಮೆರೆದ

ಪಿ.ಬಿ.ಶ್ರೀನಿವಾಸ್ .. !!! "


 "ಪಿ.ಬಿ.ಎಸ್. ಜನುಮದಿನಕೆ ವಿಶೇಷಗಾನಗಣಿಗಾರಿಕೆ"



"ಒಬ್ಬ ಶ್ರೇಷ್ಠ ಗಾಯಕ ತಾನು ಹಾಡಲಾಗದ ಹಾಡನ್ನ ಮತ್ತೊಬ್ಬ ಗಾಯಕನಿಗೆ ಸೂಚಿಸಿದ ಮಹಾಸನ್ನಿವೇಶ ಸೃಷ್ಠಿಯಾದ ಕ್ಷಣವದು ..!"


ಚಿತ್ರವೊಂದರ ಹಾಡಿನ ಧ್ವನಿ ಮುದ್ರಣಕ್ಕೆ ಸ್ಟುಡಿಯೋ ಸಜ್ಜಾಗಿತ್ತು..ಅದು ಮೊದಲೇ ಪುಟ್ಟಣ್ಣ ಕಣಗಾಲರ ಚಿತ್ರ.ಉಪೇಂದ್ರಕುಮಾರ್ ಕುಮಾರ್ ಸುಶ್ರಾವ್ಯ ಸ್ವರ ಪ್ರಸ್ತಾರಕ್ಕೆ ವಿಜಯನಾರಸಿಂಹ ಅದ್ಬುತ ಸಾಹಿತ್ಯವನ್ನ ಹೊಸದಾಗಿತ್ತು.

...


   ಇದಕ್ಕೂ ಮುಂಚೆ ಆ ಚಿತ್ರದ ಒಂದಷ್ಟು ಮಾಹಿತಿ ತಿಳಿಯೋಣ.


ಅದು 1989 ರ ಸಮಯ ... ಪುಟ್ಟಣ್ಣ ಕಣಗಾಲ್ ರು "ಜಡಭರತ" ರವರ ಕಥೆಯಾಧಾರಿತ "ಧರ್ಮಸೆರೆ" ಹೆಸರಿನ ಚಿತ್ರವನ್ನ ತೆರೆಗೆ ತರಲು ಮನಸು ಮಾಡಿದ್ದರು.ಶ್ರೀನಾಥ್, ಆರತಿ, ಸತ್ಯಪ್ರಿಯ ಅಭಿನಯದ ಈ ಚಿತ್ರಕ್ಕೆ ಉಪೇಂದ್ರಕುಮಾರ್ ಸಂಗೀತ ನಿರ್ದೇಶಕರಾಗಿ

ಆಯ್ಕೆಯಾಗಿದ್ದರು.ಇಡಿ ಚಿತ್ರದ ಹಾಡುಗಳನ್ನ ವಿಜಯನಾರಸಿಂಹ ರಚಿಸಲಾಗಿದೆ.

ಈ ಚಿತ್ರಕ್ಕಾಗಿ ಆರತಿಯವರೇ ನಿರ್ಮಾಣ ಮಾಡಿದ್ದು ಇನ್ನೊಂದು ವಿಶೇಷ.


  ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಧರ್ಮಸೆರೆ" ಚಿತ್ರವೊಂದಕ್ಕೆ ಸಂಗೀತ ನೀಡಿದ ಸಂಗೀತ ನಿರ್ದೇಶಕ ಉಪೇಂದ್ರಕುಮಾರ್ ಏಕೈಕ ಚಿತ್ರವಾಗಿಹೋಯ್ತು.


 "ಧರ್ಮಸೆರೆ" ಚಿತ್ರ ನಾಯಕಿ ಪ್ರಧಾನಪಾತ್ರವಾದರೂ ಶ್ರೀನಾಥ್ ಗೂ ಅಭಿನಯಕ್ಕೆ ಅವಕಾಶ ಇತ್ತು. ಈ ಚಿತ್ರದ ಅದ್ಬುತ, ವಿಶೇಷ ಕಥೆ ಗ್ರಹಿಸಿಯೇ ಆರತಿ, ಚಿತ್ರ ನಿರ್ಮಿಸಿ, ನಾಯಕಿಯಾಗಿರಲು ಸಾಧ್ಯವಾಯಿತು

 ದೊಡ್ಡ ಮಗಳು ಮೂಕಿ (ಆರತಿ), ಎರಡನೆಯಕೆ ವಾಚಾಳಿ. ಹೆಣ್ಣು ನೋಡಬಂದ ಹುಡುಗ (ಶ್ರೀನಾಥ್) ತಂಗಿಯನ್ನು ಮದುವೆಯಾಗುವುದನ್ನು ಹೇಳುವಾಗ ಹೂಗುಟ್ಟುವ ತಂದೆ, ತಾಳಿ ಕಟ್ಟುವ ಸಮಯದಲ್ಲಿ ಅಕ್ಕನ ಮದುವೆಯಾಗದೆ ತಂಗಿಗೆ ಮದುವೆ ಮಾಡಲಾಗದು, ಮೂಕಿ ಅಕ್ಕನಿಗೂ ತಾಳಿ ಕಟ್ಟಿ, ನನ್ನ ಧರ್ಮಸೇರೆಯನ್ನು ನಿವಾರಿಸಿ ಎಂದು ಭಾವಿ ಅಳಿಯನ್ನು ಹಿಡಿದಿದ್ದಾನೆ. ಕಟ್ಟುತ್ತದೆ.ತಂದೆಯ ಧರ್ಮಸೆರೆಯೇನೋ ಕಳೆಯಿತು, ಮುಂದಿನ ಬಾಳುವೆ ಹೇಗೆ ಎಂದು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ.


  ಈ ...

  ಕೇವಲ ಮೂರೇ ಮೂರು ಹಾಡುಗಳಿದ್ದ ಈ ಚಿತ್ರಕ್ಕೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಪಿ.ಬಿ.ಎಸ್ ಅದೆಷ್ಟೇ ಶ್ರಮವಹಿಸಿ ಹಾಡಿದರೂ ಹಾಡು ಓಕೆಯಾಗುತ್ತಲೇ ಇದೆ. ಪುಟ್ಟಣ್ಣರಿಗೂ ಮತ್ತೆ ಹಿರಿಯ ಗಾಯಕರನ್ನ ಬೇಡ ಎನ್ನಲೂ ಆಗುತಿಲ್ಲ ... ಕೋರ್ಸ್ ಈ ಹಾಡು ಆರಂಭದಿಂದಲೇ ಎತ್ತರದ ಪಿಚ್ ನಲ್ಲಿ ಬೇಕು ಎಂದು ಪುಟ್ಟಣ್ಣರು ಉಪೇಂದ್ರಕುಮಾರ್ ಗೆ ಹೇಳಿ ರಾಗಸಂಯೋಜನೆ ಮಾಡಲಾಯಿತು. ಹಾಡು ಅವರ ನಿರೀಕ್ಷೆಯ ಮಟ್ಟಕ್ಕೆ ಮೂಡುತ್ತಲೂ ಇದೆ. ನೀಡಬಲ್ಲರು "ಎಂದುಬಿಟ್ಟರು.

ಅಷ್ಟು ರಿಹರ್ಸಲ್ ಮಾಡಿದರೂ ಕೊನೆಗೂ ಆ ಹಾಡಿನ ರೇಂಜ್ ಪಿ.ಬಿ.ಎಸ್.ರಿಗೆ ಮುಟ್ಟದೇ ಹೋಯ್ತು.

ಆ ಹಾಡು ಯಾವುದೆಂದರೆ ಶ್ರೀನಾಥ್ ಮಗುವಿನನ್ನ ಎತ್ತಿ ಹಾಡುವ ಸನ್ನಿವೇಶದ ಹಾಡು. "ಕಂದ ... ಓ ನನ್ನ ಕಂದ ..." ಎಂದು ಈ ಹಾಡು ಕೊನೆಗೂ ಸಾವಿರಾರು ಅಸಾಧಾರಣ ಗೀತೆಗಳನ್ನ ನೀರು ಕುಡಿದಂತೆ ಹಾಡಿದ, ಪಿ.ಬಿ.ಎಸ್ ರಿಗೆ ದಕ್ಕದೆ ಹೋದದ್ದು ವಿಪರ್ಯಾಸ ..!


  ಸರಿ ... ಈ ಹಾಡನ್ನ ಹಾಡಲು ಇನ್ನೊಂದು ದಿನ ಎಸ್.ಪಿ.ಬಿ.ಯವರು ಸ್ಟುಡಿಯೋ ಗೆ ಆಗಮಿಸಿದರು.ಅವರಂತೂ ಈ ಹಾಡು ಪಿ.ಬಿ.ಎಸ್. ಹಾಡಬೇಕಿತ್ತು ಸಂಕೋಚದಲ್ಲೇ ನಿರಾಕರಿಸಿಬಿಟ್ಟರು.ಕೊನೆಗೆ ಪಿ.ಬಿ.ಎಸ್ ರನ್ನ ಸೇರಿಸಿದರು, ಅವರ ಮೂಲಕ ಎಸ್.ಪಿ.ಬಿ ಯವರಿಗೆ ಕರೆ ಮಾಡಿ ಹೇಳಿದ್ದಾಗಲೇ ಎಸ್.


  ಆದಾಗ್ಯೂ .. ಈ ಹಾಡನ್ನು ಕೇಳಿದ ಮೇಲೆ ಪಿ.ಬಿ.ಎಸ್ ರ ಅಭಿಪ್ರಾಯ ಸರಿಪಡಿಸುತ್ತದೆ.ಏಕೆಂದರೆ ... ಈ ಹಾಡಿಗೆ ಬೇಕಾದ ತಾರಕ ಸ್ವರ ಮೂಡುಸುವಲ್ಲಿ ಮಾಧುರ್ಯ ಗಾಯಕ ಪಿ.ಬಿ.ಎಸ್ ರ ದನಿ ಹೊಂದಿಕೆಯಾಗುತ್ತಿರುವುದರ ಅಂಶ ತಿಳಿಯುತ್ತದೆ.


   ಕೊನೆಗೆ ಎಸ್.ಪಿ.ಬಿಯವರು ಅದ್ಬುತವಾಗಿ ಹಾಡಿ ಇಂದಿಗೂ ಆ ಹಾಡು ಎಲ್ಲರ ನೆಚ್ಚಿನ ಗೀತೆಯಾಗಿ ಉಳಿದಿದೆ.


_____________________________________

ಹಾಡು: ಕಂದ ಓ ನನ್ನ ಕಂದ ಗಾಯಕರು: ಎಸ್ ಪಿ ಬಾಲು ಸರ್

ಗೀತ ರಚನೆ: ವಿಜಯ ನಾರಸಿಂಹ

ಸಂಗೀತ: ದಿ॥ ಉಪೇಂದ್ರಕುಮಾರ್ $$$$$$$$$$$$$$$$


ಮುನ್ನುಡಿ $$$$$$$$$$$$$$$$



ಕಂದಾಆ .......


ಓ ನನ್ನ ಕಂದ .......... ಕಂದ ....... ಆನಂದ ಕಂದ, ಕೃಷ್ಣ ಮುಕುಂದ,

ಬಾ ಬಾ ಓಡಿ ಬಾ ... ಕೃಷ್ಣ ಮುಕುಂದ ......

ತೋರೋ ನಿನ್ನ ಚಂದದ ವದನಾರವಿಂದ


ಕಂದಾ ಆ ..................... ಓ


ನನ್ನ ಕಂದ, ಕೃಷ್ಣ ಮುಕುಂದ


$$ $$$$$$$$$$$$$$ ಹಿನ್ನೆಲೆ ಸಂಗೀತ $$$$$$$$$$

ಜಾಲತಾಣದಳವಡಿಕೆ: ಮುರಳೀಧರ ನಾಯ್ಕ $$$$$$$$$$$$$$

ಹಿನ್ನೆಲೆ ಸಂಗೀತ $$$$$$$$$$$$$$$$


ಎಷ್ಟು ಸುತ್ತಿ ಬೆಟ್ಟ


ಹತ್ತಿ ತೊಟ್ಟಿಲ ತಂದಿರುವೆ

ಪುಟಾಣಿ ಕಂದ ಹೂವಿನಂಥ

ಹಾಸಿಗೆ ಹಾಸುವೆ ....... .... $$$$$$$$$$$$$$$$

ಅಲ್ಪ ಸಂಗೀತ $$$$$$$$$$$$$$$$$$


ಎಷ್ಟು ಸುತ್ತಿ ಬೆಟ್ಟ


ಹತ್ತಿ ತೊಟ್ಟಿಲ ತಂದಿರುವೆ

ಪುಟಾಣಿ ಕಂದ ಹೂವಿನಂಥ

ಹಾಸಿಗೆ ಹಾಸುವೆ .........

ಅಕ್ಕರೆ ತುಂಬಿದ ಸಕ್ಕರೆ

ಹಾಲಿನ ಬಟ್ಟಲ ನಾ ಕೊಡುವೆ

ಅಕ್ಕರೆ ತುಂಬಿದ ಸಕ್ಕರೆ

ಹಾಲಿನ ಬಟ್ಟಲ ನಾ ಕೊಡುವೆ

ನನ್ನ ಎದೆಯ ತಂತಿ ಮೀಟಿ ಲಾಲಿ ಹಾಡುವೆ

ಲಾಲಿ ಲಾಲಿ ಜೋ ಜೋ ... ಕಂದ

ಲಾಲಿ ಲಾಲಿ ಜೋ ಜೋ ...

ಜೋ ಜೋ .. .ಜೋ ಜೋ ... ಜೋ ಜೋ ...

ಲಾಲಿ .... ಲಾಲಿ .... ಲಾಲಿ ....

$$$$$$$$$$$$$$$$


ಕಂದಾ ಆ ................. ....

ಓ ನನ್ನ ಕಂದ, ಕಂದ ............ $$$$$$$$$$$$$$$$$


ಹಿನ್ನೆಲೆ ಸಂಗೀತ $$$$$$$$$$$$$$$$

ಜಾಲತಾಣದಳವಡಿಕೆ: ಮುರಳೀಧರ ನಾಯ್ಕ $$$$$$$$$$$$$$

ಹಿನ್ನೆಲೆ ಸಂಗೀತ $$ $$$$$$$$$$$$$$$


ಚಂದ ಮಾಮ ಕೊಟ್ಟ ಗಿಲ್ಕಿ ಮುದ್ದಿಸಿ ಕೊಡುವೆ


ಇಂದ್ರಲೋಕದಾನೆ ತಂದು ಕೂರಿಸಿ ನಲಿವೆ ...

$$$$$$$$$$$$$$$ குறுகிய ಸಂಗೀತ $$$$$$$$$$$$


ಚಂದ ಮಾಮ ಕೊಟ್ಟ ಗಿಲ್ಕಿ ಮುದ್ದಿಸಿ ಕೊಡುವೆ


ಇಂದ್ರಲೋಕದಾನೆ ತಂದು ಕೂರಿಸಿ ನಲಿವೆ ...

ಬೆಳ್ಳಿ ಬೆಟ್ಟದ ಶಿವನ ಕೇಳಿ ನಂದಿಯ ತರುವೆ

ಬೆಳ್ಳಿ ಬೆಟ್ಟದ ಶಿವನ

ಕೇಳಿ ನಂದಿಯ ತರುವೆ ಅವರ ಸಂಗ ಸೇರಿ ನೀನು ಆಡೆಲೋ ಮಗುವೆ..ಏಏ ...



ಕಂದಾಆ ....... ಓ ನನ್ನ ಕಂದ ..........

_____________________________________


  ಮೊನ್ನೆ ರೇಡಿಯೋ ಸಂದರ್ಶನ ವೊಂದರಲ್ಲಿ ಪುಟ್ಟಣ್ಣರ ಸಹಾಯಕ ನಿರ್ದೇಶಕರಾಗಿರುವ ಪಂಚಮವೇದ ಖ್ಯಾತಿಯ ಪಿ.ಎಚ್.ವಿಶ್ವನಾಥ್ ಈ ಕುರಿತು ಒಂದೆರಡು ಸಾಲಿನಲ್ಲಿ ಹೇಳಿದ ಮಾಹಿತಿ ಇಂದಿನ ಪಿ.ವ

ಬಿಎಸ್ ಜನುಮದಿನಕೆ "ವಿಶೇಷಗಾನಗಣಿಗಾರಿಕೆ" ಯಾಗಿ ಸೃಷ್ಠಿಯಾಯ್ತು.


  ಅದೇನೇ ... ಇರಲಿ ಒಬ್ಬ ಅಸಾಮಾನ್ಯ ಗಾಯಕ ಒಂದು ಹಾಡಿಗೆ ತನ್ನ ದನಿಯಿಂದ ನ್ಯಾಯ ಒದಗಿಸಲಾಗದಾಗ, ಮತ್ತೊಬ್ಬ ಗಾಯಕನೇ ಈ ಹಾಡು ಹಾಡಲು ಸೂಕ್ತ ಎಂದು ನಿರ್ಧರಿಸಿ, ಒಪ್ಪಿಗೆ ಸೂಚಿಸಿ, ಆ ಗಾಯಕ ಅವರ ಅಭಿಮಾನಿಗಳಿಗೆ ಹಾಡಲು ಹಿಂಜರಿದಾಗ, ನೀವೇ ಈ ಹಾಡು ಹಾಡಲು ಸೂಕ್ತ ಎಂದು ಹೇಳುವ "ದೊಡ್ಡತನ" ಮೆರೆಯುವ ನಿದರ್ಶನವಿದೆಯಲ್ಲಾ ಅದು ನಿಜಕ್ಕೂ 'ಅಮೃತಘಳಿಗೆ 'ಎನ್ನಬಹುದು.


  ಪಿ.ಬಿ.ಎಸ್. ಜನು.ದಿನದ ಈ ಸಂಧರ್ಭದಲ್ಲಿ ಪಿ ಬಿ ಎಸ್ ಎಸ್ ನೆನಪು ಮಾಡಿಕೊಳ್ಳುತ್ತಾ, ಅವರ ದೊಡ್ಡತನವನ್ನು ಪ್ರಶಂಸಿಸುತ್ತಾ ಅವರ ದೊಡ್ಡತನಕೆ ನಮ್ಮದೊಂದು ಶುಭ ಹಾರೈಕೆ ತಿಳಿಸೋಣ.


   ಗಾನಾಸುಮಾ ಪಟ್ಟಸೋಮನಹಳ್ಳಿ

ಗಾನಗಣಿಗಾರಿಕೆ

 #ಮೊನ್ನೆ_ಹಂಸಲೇಖರು_ನೀಡಿದ #ಗಾನಕರುಹು_ಬೆನ್ನತ್ತಿ_ಹೊರಟ #ಗಾನಶಿಕಾರಿ_ಗಾನಗಣಿಗಾರಿಕೆ #ಯಲ್ಲಿ_ಸೆರೆಯಾಯ್ತು...!!!   ಮೊನ್ನೆ ಎಸ್.ಪಿ‌.ಬಾಲಸುಬ್ರಮಣ್ಯಂ ನಿಧನರಾದಾಗ ಕನ...