"ಆಡಿಸಿದಾತ ಬೇಸರ ಮೂಡಿಸಿದರೂ
ನುಡಿಸುವಾತ ಬೇಸರ ಮೂಡಿಸಲಿಲ್ಲ ..! "
(ಜಿ.ಕೆ.ವೆಂಕಟೇಶ್ ಜನುಮದಿನದ ವಿಶೇಷ ಗಾನಗಣಿಗಾರಿಕೆ)
ದಕ್ಷಿಣ ಭಾರತದ ಅದ್ವೀತೀಯ ಸಿನಿಮಾ ಸಂಗೀತ ಪಿತಾಮಹಾ ಎನ್ನಬಹುದಾದ ಜಿ.ಕೆ.ವೆಂಕಟೇಶ್ ರಿಗಿಂದು ಜನುಮದಿನ.
ಇಳಯರಾಜ,ವೈದ್ಯನಾಥನ್ ಎಂಬ ಸಂಗೀತ ದಿಗ್ಗಜರನ್ನ ಸೃಷ್ಠಿಸಿದ ಗಾನಗಾರುಡಿಗ.
ಒಂದು ಹಾಡಿನ ಕಂಪೋಸ್ ಗೆ ಕುಳಿತರೆ ಹತ್ತಾರು ವಿಧ ವಿಧ ಟ್ಯೂನ್ ಕ್ಷಣದಲ್ಲೇ ಹೊಸೆಯುವ ಮಾಂತ್ರಿಕ ಜಿ.ಕೆ.ವೆಂಕಟೇಶ್.
ಬಹುಶಃ ಅಪಾರ ಸಂಗೀತದ ಫಲುಕು,ಸ್ವರಗಳು ಇವರಲ್ಲೇ ಹುಟ್ಟಿದವೇನೋ ಎಂದರೂ ಅತಿಶಯೋಕ್ತಿಯಲ್ಲದ್ದು.ಅಂತಹ ಮಹಾಗಾನತಪಸ್ವಿಗೆ ಇಂದು ಜನುಮದಿನ.
ಇಂತಹ ದಿಗ್ಗಜನಿಗೆ ಎರಡು ಕಣ್ಣುಗಳಂತೆ,ಎರಡು ಕೈಗಳಂತೆ ಇಳಯರಾಜ ಮತ್ತು ಎಲ್ ವೈದ್ಯನಾಥನ್ ಇದ್ದರು.ಜಿ.ಕೆ.ವೆಂಕಟೇಶ್ ಟ್ಯೂನ್ ಮಾಡಿ ನೀಡಿದರೆ,ಅದಕ್ಕೆ ಎಲ್.ವೈದ್ಯನಾಥನ್ ವಾದ್ಯಸಂಯೋಜನೆ ಸಿದ್ದಗೊಳಿಸುತಿದ್ದರು.ಇಳಯರಾಜರಂತೂ ಹಾಡಿನ ನೊಟೆಶನ್ ಬರೆದು ವಾದ್ಯಗಾರರು ಮತ್ತು ಹಾಡುಗಾರರಿಗೆ ಹೇಳುತಿದ್ದರು.ರೆಕಾರ್ಡಿಂಗ್ ಹೊತ್ತಿಗೆ ಜಿ.ಕೆ.ವೆಂಕಟೇಶ್ ರ ಭಾರವನ್ನ ಹಗುರ ಮಾಡಿಬಿಡುತಿದ್ದರು.ತ್ರಿಮೂರ್ತಿಗಳ ಸಂಗಮದಲಿ ಚಿತ್ರರಂಗೀತ ಅದ್ಬುತವಾಗಿ ಮೇಳೈಸುತಿತ್ತು.
ಒಂದು ವಿಶೇಷತೆ ಏನು ಗೊತ್ತಾ?
ಸ್ವತಃ ಜಿ.ಕೆ.ವೆಂಕಟೇಶ್ ಹದಿನೆಂಟು ವಾದ್ಯಗಳನ್ನ ನುಡಿಸುತಿದ್ದರು.ಏನೋ..ಅರೆ ಬರೆ ಕಲಿತದ್ದಲ್ಲ..ಪರಿಪೂರ್ಣವಾಗಿ ಕಲಿತು ನುಡಿಸುತಿದ್ದ ಜಿ.ಕೆ.ವೆಂಕಟೇಶ್ ದಕ್ಷಿಣ ಭಾರತವಷ್ಟೇ ಅಲ್ಲ...ಭಾರತದಲ್ಲೇ ಶ್ರೇಷ್ಠ ಸಂಗೀತ ನಿರ್ದೇಶಕ ಎನ್ನಬಹುದು.ವೀಣಾ ವಿದ್ವಾಂಸರಾಗಿದ್ದ ಇವರು ಹಿಂದೂಸ್ಥಾನಿ ಸಂಗೀತದಲ್ಲಿ ಪ್ರಾವಿಣ್ಯರಾಗಿದ್ದರು.
ಪ್ರಸಿದ್ದ ಸಂಗೀತ ನಿರ್ದೇಶಕರಾದ ಎಸ್.ವೆಂಕಟರಾಮನ್ ಮತ್ತು ವಿಶ್ವನಾಥನ್- ರಾಮಮೂರ್ತಿ ಬಳಿ ಸಹಾಯಕರಾಗಿದ್ದ ಜಿ.ಕೆ.ವೆಂಕಟೇಶ್ ಸ್ವತಃ ತಮ್ಮ ಸೋದರನ ಬಳಿ ಸಂಗೀತ ಅಭ್ಯಾಸ ಮಾಡಿದ್ದರು.
ಶಾಸ್ತ್ರೀಯ ಹಾಡಿಗೆ ಜಾನಪದವನ್ನ ಸಮ್ಮಿಶ್ರಣ ಮಾಡಿ ಸಂಗೀತ ನೀಡುತಿದ್ದದು ಇವರ ವಿಶೇಷತೆ ಕೂಡಾ.
೧೯೬೨ ರಲ್ಲಿ 'ಕರುಣೆಯೇ ಕುಟುಂಬದ ಕಣ್ಣು" ಎಂಬ ಕನ್ನಡದ ಮೊದಲ ಕಾದಂಬರಿ ಆಧಾರಿತ ಚಿತ್ರ ತಯಾರಿಸಿದ ಹೆಗ್ಗಳಿಕೆ ಇವರದು.ಕರುಣೆಯೇ ಕುಟುಂಬದ ಕಣ್ಣು ಚಿತ್ರದ "ನಿಜವೋ ಸುಳ್ಳೋ ನಿರ್ಧರಿಸಿ "ಹಾಡಿನ ಸಂಗೀತ ಸಂಯೋಜನೆಗೆ ಧಾಖಲೆ ಎನಿಸಿದ್ದ "ಎಂಬತ್ತು" ವಾದ್ಯಗಾರನ್ನು ಬಳಸಿಕೊಳ್ಳಲಾಗಿತ್ತು. ಕನ್ನಡ ಚಿತ್ರರಂಗಕ್ಕೆ ಕವಿಗಳ ರಚನೆಗಳನ್ನು ಪರಿಚಯಿಸಿದ ಕೀರ್ತಿ ಜಿ.ಕೆ.ವೆಂಕಟೇಶ್ ಅವರಿಗೆ ಸಲ್ಲುತ್ತದೆ.
೧೯೬೩ರಲ್ಲಿ ತೆರೆಕಂಡ ಎಸ್.ಕೆ.ಎ.ಚಾರಿ ನಿರ್ದೇಶನದ ಗೌರಿ ಚಿತ್ರಕ್ಕೆ ಕುವೆಂಪು ಅವರ ಯಾವ ಜನ್ಮದ ಮೈತ್ರಿ ಮತ್ತು ಕೆ.ಎಸ್.ನರಸಿಂಹಸ್ವಾಮಿ ಅವರ ಇವಳು ಯಾರು ಬಲ್ಲೆಯೇನು? ಕವಿತೆಗಳನ್ನು ಅಳವಡಿಸಿದರು.
ಇದು ಕವನಗಳನ್ನು ಚಿತ್ರಗೀತೆಗಳಾಗಿ ಅಳವಡಿಸುವ ಹೊಸ ಪರಂಪರೆಗೆ ಕಾರಣವಾಯಿತು.
ಜಿ.ಕೆ.ವೆಂಕಟೇಶ್ ಹಲವಾರು ಹೊಸ ಪ್ರತಿಭೆಗಳನ್ನು ಗುರುತಿಸಿ ಪರಿಚಯಿಸಿದ್ದಾರೆ. ಬಿ.ಕೆ.ಸುಮಿತ್ರ, ಬೆಂಗಳೂರು ಲತಾ, ಸಿ.ಅಶ್ವಥ್, ಸುಲೋಚನಾ ಮುಂತಾದವರನ್ನು ಪರಿಚಯಿಸಿದರು. ದಕ್ಷಿಣ ಭಾರತದ ಇತರ ಖ್ಯಾತ ಸಂಗೀತ ನಿರ್ದೇಶಕರುಗಳಾದ ಇಳಯರಾಜ, ಎಲ್.ವೈದ್ಯನಾಥನ್, ಶಂಕರ್ ಗಣೇಶ್ ಅವರು ಜಿ.ಕೆ.ವೆಂಕಟೇಶ್ ಅವರ ಅನುಯಾಯಿಗಳು.
ರಾಜ್‍ಕುಮಾರ್ ಅವರನ್ನು ಗಾಯಕರಾಗಿ ಪರಿಚಯಿಸಿದವರೂ ಜಿ.ಕೆ.ವೆಂಕಟೇಶ್. ಮಹಿಷಾಸುರ ಮರ್ಧಿನಿ ಚಿತ್ರಕ್ಕಾಗಿ ಯುಗಳಗೀತೆಯನ್ನು ರಾಜ್ ಅವರಿಂದ ಹಾಡಿಸಿದ ವೆಂಕಟೇಶ್ ಮತ್ತೆ ಸಂಪತ್ತಿಗೆ ಸವಾಲ್ ಚಿತ್ರದಲ್ಲಿನ ಯಾರೇ ಕೂಗಾಡಲಿ ಗೀತೆಯನ್ನು ಹಾಡಿಸಿ ಅವರನ್ನು ಪೂರ್ಣಪ್ರಮಾಣದ ಗಾಯಕರನ್ನಾಗಿಸಿದರು.
ಸ್ವತಃ ಗಾಯಕರಾಗಿದ್ದ ಜಿ.ಕೆ.ವೆಂಕಟೇಶ್ ಹಲವಾರು ಹಾಡುಗಳಿಗೂ ದನಿ ನೀಡಿದ್ದಾರೆ.
"ಕಣ್ತೆರೆದು ನೋಡು" ಚಿತ್ರದ "ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ.." ಹಾಡಿಗೆ ಸ್ವತಃ ಸಂಗೀತ ನೀಡಿ,ಗಾಯಕರಾಗಿ ಚಿತ್ರದಲ್ಲೂ ಅವರೇ ಅಭಿನಯಿಸಿದ ವೈಶಿಷ್ಟ್ಯ ತೆ ಇವೆಂಕಟೇಸ
"ಕಸ್ತೂರಿನಿವಾಸ" ಚಿತ್ರದ 'ಆಡಿಸಿದಾತ ಬೇಸರ..',
"ಭೂತಯ್ಯನ ಮಗ ಅಯ್ಯು" ಚಿತ್ರದ "ವಿರಸವೆಂಬ ವಿಷಕೆ,ಮಾರಿಯೇ ಗತಿಯೆಂದು."
"ಅಣ್ಣ ಅತ್ತಿಗೆ" ಚಿತ್ರದ "ನಾಡಿಗರೆ ಕನ್ನಡ ನಾಡಿಗರೆ..' ಎನ್ನುವ ಮೊದಲಾದ ಹಾಡಿಗೂ ದನಿಯಾಗಿದ್ದಾರೆ.
ಕಾಲಾನಂತರದಲ್ಲಿ ಇವರ ಸಂಗೀತ ನಿರ್ದೇಶನಕ್ಕೆ ಎರಡು ಕಣ್ಣುಗಳಂತಿದ್ದ ಇಳಯರಾಜ ಮತ್ತು ಎಲ್ ವೈದ್ಯನಾಥನ್ ಸ್ವತಂತ್ರ ನಿರ್ದೇಶಕರಾದ ಮೇಲೆ ಅಕ್ಷರಶಃ ಇವರಿಗೆ ಬಹುದೊಡ್ಡ ಪೆಟ್ಟು ಬಿತ್ತು.ಚಿತ್ರ ಒಪ್ಪಿದ ಮೇಲೆ ಜಿ.ಕೆ.ವೆಂಕಟೇಶ್ ರಿಗೆ ಎಲ್ಲಾ ಜವಾಬ್ದಾರಿ ಬಿದ್ದು,ನಿರ್ವಹಿಸುವುದು ಕಷ್ಟವಾಯ್ತು.ರೆಕಾರ್ಡಿಂಗ್ ಸಮಯಕ್ಕೆ ಸಾಗದೇ ತಡವಾಗುತಿದ್ದರಿಂದ ಹಲವು ನಿರ್ಮಾಪಕರು ಇವರಿಂದ ದೂರ ಸರಿಯಲಾರಂಭಿಸಿದರು.ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಹಾಡುಗಳನ್ನ ಕೊಟ್ಟ ಶ್ರೇಷ್ಠ ಸಂಗೀತ ನಿರ್ದೇಶಕ ಇಳಿ ವಯಸ್ಸಿನಲ್ಲಿ ಸೂಕ್ತ ಸಹಾಯಕರಿಲ್ಲದೇ ಕಂಗಾಲಾಗಿದ್ದು ಸುಳ್ಳಲ್ಲ.ಇಳಯರಾಜ ಮತ್ತು ಎಲ್.ವೈದ್ಯನಾಥನ್ ರವರನ್ನ ಅತಿ ಹೆಚ್ಚು ನಂಬಿ,ಅವಲಂಬಿಸಿದ್ದುದು ಇದಕ್ಕೆ ಕಾರಣವೆನ್ನಬಹುದೇನೋ..!
"ಭಕ್ತಕುಂಬಾರ" ಚಿತ್ರದ ಮಹರಾಷ್ಟ್ರದ "ಅಬಾಂಗ್" ಮಾದರಿಯ ಹಾಡುಗಳಿಗೆ ಅಲ್ಲಿನ್ನ ವಿಶೇಷ ವಾದ್ಯಗಳಮ್ನ ಬಳಸಿ ಸಂಗೀತ ನೀಡಿದ ಜಿ.ಕೆ.ವೆಂಕಟೇಶ್ ಭಕ್ತ ಕುಂಬಾರದ ಭಕ್ತಿ ಪರಾಕಾಷ್ಠೆ ಯಲ್ಲಿ ಇವರದು ಪ್ರಮುಖ ಪಾತ್ರವಾಗಿತ್ತು ಎಂಬುದರಲ್ಲಿಎರಡು ಮಾತಿಲ್ಲ.
ಮೊನ್ನೆ ತಾನೆ ಜಿ.ಕೆ.ವೆಂಕಟೇಶ್ ರ ಬಗ್ಗೆ ನಾಲ್ಕು ಸಾಲು ಬರೆಯಬೇಕಿತ್ತಲ್ಲ? ಎಂದುಕೊಂಡವನಿಗೆ ಇಂದು ಮುಂಜಾನೆ ಇವರ ಜನುಮದಿನವೆಂದು ತಿಳಿದು ,ತಕ್ಷಣ ಎದ್ದು ಕುಳಿತು ಈ ಲೇಖನ ಬರೆದು ಅವರಿಗೊಂದು ಶುಭಾಶಯ ಹೇಳೋಣವೆನಿಸಿತು.
1989 ರ ಗಂಡೆಂದ್ರೆ ಗಂಡು ಚಿತ್ರದ ತನಕ ಸುಮಾರು 119 ಚಿತ್ರಗಳಿಗೆ ಸಂಗೀತ ನೀಡಿದ ಜಿ.ಕೆ.ವಿಯವರು 1993 ನವಂಬರ್ನಲ್ಲಿ ವಿಧಿವಶರಾದರು.
ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನದ ಕನ್ನಡ ಚಿತ್ರಗಳು ಸಂಪಾದಿಸಿ
# ವರ್ಷ ಚಿತ್ರ
೧ ೧೯೫೬ ಹರಿಭಕ್ತ
೨ ೧೯೫೬ ಓಹಿಲೇಶ್ವರ
೩ ೧೯೫೮ ಅಣ್ಣ ತಂಗಿ
೪ ೧೯೫೯ ಜಗಜ್ಯೋತಿ ಬಸವೇಶ್ವರ
೫ ೧೯೫೯ ಧರ್ಮ ವಿಜಯ
೬ ೧೯೫೯ ಮಹಿಷಾಸುರಮರ್ಧಿನಿ
೭ ೧೯೬೦ ರಣಧೀರ ಕಂಠೀರವ
೮ ೧೯೬೦ ದಶಾವತಾರ
೯ ೧೯೬೧ ಕಣ್ತೆರೆದು ನೋಡು
೧೦ ೧೯೬೧ ಕೈವಾರ ಮಹಾತ್ಮೆ
೧೧ ೧೯೬೨ ಭೂದಾನ
೧೨ ೧೯೬೨ ಕರುಣೆಯೇ ಕುಟುಂಬದ ಕಣ್ಣು
೧೩ ೧೯೬೨ ತಾಯಿಕರುಳು
೧೪ ೧೯೬೩ ಲಾಯರ್ ಮಗಳು
೧೫ ೧೯೬೩ ಕನ್ಯಾರತ್ನ
೧೬ ೧೯೬೩ ಗೌರಿ
೧೭ ೧೯೬೩ ಮಲ್ಲಿ ಮದುವೆ
೧೮ ೧೯೬೩ ಕುಲವಧು
೧೯ ೧೯೬೩ ಕಲಿತರೂ ಹೆಣ್ಣೇ
೨೦ ೧೯೬೩ ಆನಂದಭಾಷ್ಪ
೨೧ ೧೯೬೩ ಬಂಗಾರಿ
೨೨ ೧೯೬೪ ಕಲಾವತಿ
೨೩ ೧೯೬೪ ತುಂಬಿದ ಕೊಡ
೨೪ ೧೯೬೫ ಕವಲೆರಡು ಕುಲ ಒಂದು
೨೫ ೧೯೬೫ ಸರ್ವಜ್ಞಮೂರ್ತಿ
೨೬ ೧೯೬೫ ನನ್ನ ಕರ್ತವ್ಯ
೨೭ ೧೯೬೫ ಸತಿ ಸಾವಿತ್ರಿ
೨೮ ೧೯೬೬ ಕಿಲಾಡಿ ರಂಗ
೨೯ ೧೯೬೬ ಮಧುಮಾಲತಿ
೩೦ ೧೯೬೬ ಸಂಧ್ಯಾರಾಗ
೩೧ ೧೯೬೭ ಪಾರ್ವತಿ ಕಲ್ಯಾಣ
೩೨ ೧೯೬೭ ರಾಜಶೇಖರ
೩೩ ೧೯೬೭ ರಾಜದುರ್ಗದ ರಹಸ್ಯ
೩೪ ೧೯೬೭ ಜಾಣರ ಜಾಣ
೩೫ ೧೯೬೭ ಇಮ್ಮಡಿ ಪುಲಿಕೇಶಿ
೩೬ ೧೯೬೮ ಜೇಡರಬಲೆ
೩೭ ೧೯೬೮ ಮನಸ್ಸಾಕ್ಷಿ
೩೮ ೧೯೬೮ ಗೋವಾದಲ್ಲಿ ಸಿ.ಐ.ಡಿ. ೯೯೯
೩೯ ೧೯೬೯ ಭಾಗೀರಥಿ
೪೦ ೧೯೬೯ ಕಣ್ಣುಮುಚ್ಚಾಲೆ
೪೧ ೧೯೬೯ ಮುಕುಂದ ಚಂದ್ರ
೪೨ ೧೯೬೯ ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. ೯೯೯
೪೩ ೧೯೭೦ ದೇವರ ಮಕ್ಕಳು
೪೪ ೧೯೭೧ ಕಸ್ತೂರಿ ನಿವಾಸ
೪೫ ೧೯೭೧ ಬಾಳ ಬಂಧನ
೪೬ ೧೯೭೧ ನಗುವ ಹೂವು
೪೭ ೧೯೭೧ ತಾಯಿದೇವರು
೪೮ ೧೯೭೧ ಪ್ರತಿಧ್ವನಿ
೪೯ ೧೯೭೧ ತಂದೆ ಮಕ್ಕಳು
೫೦ ೧೯೭೨ ಬಂಗಾರದ ಮನುಷ್ಯ
೫೧ ೧೯೭೩ ದೂರದ ಬೆಟ್ಟ
೫೨ ೧೯೭೪ ಭೂತಯ್ಯನ ಮಗ ಅಯ್ಯು
೫೩ ೧೯೭೪ ಸಂಪತ್ತಿಗೆ ಸವಾಲ್
೫೪ ೧೯೭೪ ಭಕ್ತ ಕುಂಬಾರ
೫೫ ೧೯೭೪ ಅಣ್ಣ ಅತ್ತಿಗೆ
೫೬ ೧೯೭೫ ದಾರಿ ತಪ್ಪಿದ ಮಗ
೫೭ ೧೯೭೫ ಕೂಡಿ ಬಾಳೋಣ
೫೮ ೧೯೭೫ ಮಯೂರ
೫೯ ೧೯೭೫ ನಿರೀಕ್ಷೆ
೬೦ ೧೯೭೫ ತ್ರಿಮೂರ್ತಿ
೬೧ ೧೯೭೬ ರಾಜ ನನ್ನ ರಾಜ
೬೨ ೧೯೭೬ ಬಂಗಾರದ ಗುಡಿ
೬೩ ೧೯೭೬ ಬಾಳು ಜೇನು
೬೪ ೧೯೭೭ ವೇದಾಂತ
೬೫ ೧೯೭೭ ಸೊಸೆ ತಂದ ಸೌಭಾಗ್ಯ
೬೬ ೧೯೭೭ ಶ್ರೀಮಂತನ ಮಗಳು
೬೭ ೧೯೭೭ ಸನಾದಿ ಅಪ್ಪಣ್ಣ
೬೮ ೧೯೭೭ ಕರ್ತವ್ಯದ ಕರೆ
೬೯ ೧೯೭೭ ಒಲವು ಗೆಲವು
೭೦ ೧೯೭೭ ಗಲಾಟೆ ಸಂಸಾರ
೭೧ ೧೯೭೮ ದೇವದಾಸಿ
೭೨ ೧೯೭೮ ವಂಶಜ್ಯೋತಿ
೭೩ ೧೯೭೮ ಆಪರೇಷನ್ ಡೈಮಂಡ್ ರ್ಯಾಕೆಟ್
೭೪ ೧೯೭೮ ಚಿತೆಗೂ ಚಿಂತೆ
೭೫ ೧೯೭೮ ಭಲೇ ಹುಡುಗ
೭೬ ೧೯೭೯ ನಾ ನಿನ್ನ ಬಿಡೆನು
೭೭ ೧೯೭೯ ಅಸಾಧ್ಯ ಅಳಿಯ
೭೮ ೧೯೭೯ ಹುಲಿಯ ಹಾಲಿನ ಮೇವು
೭೯ ೧೯೭೯ ಕಮಲ
೮೦ ೧೯೭೯ ಮುತ್ತು ಒಂದು ಮುತ್ತು
೮೧ ೧೯೭೯ ನೆಂಟರೋ ಗಂಟು ಕಳ್ಳರೋ
೮೨ ೧೯೮೦ ಧೈರ್ಯಲಕ್ಷ್ಮಿ
೮೩ ೧೯೮೦ ಉಷಾ ಸ್ವಯಂವರ
೮೪ ೧೯೮೦ ರುಸ್ತುಮ್ ಜೋಡಿ
೮೫ ೧೯೮೧ ಹಾವಿನ ಹೆಡೆ
೮೬ ೧೯೮೧ ಅಂತ
೮೭ ೧೯೮೧ ಹಣಬಲವೋ ಜನಬಲವೋ
೮೮ ೧೯೮೧ ಭೂಮಿಗೆ ಬಂದ ಭಗವಂತ
೮೯ ೧೯೮೧ ಮಿಂಚಿನ ಬೆಳಕಲ್ಲಿ
೯೦ ೧೯೮೧ ಮರೆಯದ ಹಾಡು
೯೧ ೧೯೮೨ ರುದ್ರಿ
೯೨ ೧೯೮೨ ಶಂಕರ್ ಸುಂದರ್
೯೩ ೧೯೮೨ ಭಕ್ತ ಜ್ಞಾನದೇವ
೯೪ ೧೯೮೨ ಹಾಲುಜೇನು
೯೫ ೧೯೮೨ ಕಾರ್ಮಿಕ ಕಳ್ಳನಲ್ಲ
೯೬ ೧೯೮೨ ಬೂದಿ ಮುಚ್ಚಿದ ಕೆಂಡ
೯೭ ೧೯೮೨ ಸ್ನೇಹದ ಸಂಕೋಲೆ
೯೮ ೧೯೮೩ ಆಶಾ
೯೯ ೧೯೮೩ ಹೊಸ ತೀರ್ಪು
೧೦ ೦ ೧೯೮೩ ಎರಡು ನಕ್ಷತ್ರಗಳು
೧೦ ೧ ೧೯೮೩ ನೋಡಿ ಸ್ವಾಮಿ ನಾವಿರೋದೆ ಹೀಗೆ
೧೦ ೨ ೧೯೮೪ ಪ್ರಚಂಡ ಕುಳ್ಳ
೧೦ ೩ ೧೯೮೪ ಗಜೇಂದ್ರ
೧೦ ೪ ೧೯೮೪ ಗುರುಭಕ್ತಿ
೧೦ ೫ ೧೯೮೪ ಕಲಿಯುಗ
೧೦ ೬ ೧೯೮೪ ಜಿದ್ದು
೧೦ ೭ ೧೯೮೪ ಮಳೆ ಬಂತು ಮಳೆ
೧೦ ೮ ೧೯೮೪ ಮಕ್ಕಳಿರಲವ್ವ ಮನೆತುಂಬ
೧೦೯ ೧೯೮೫ ಪರಮೇಶಿ ಪ್ರೇಮ ಪ್ರಸಂಗ
೧೧೦ ೧೯೮೫ ಗುರು ಜಗದ್ಗುರು
೧೧೧ ೧೯೮೫ ಅದೇ ಕಣ್ಣು
೧೧೨ ೧೯೮೫ ಶಭಾಷ್ ವಿಕ್ರಂ
೧೧೩ ೧೯೮೫ ಸ್ನೇಹ ಸಂಬಂಧ
೧೧ ೪ ೧೯೮೫ ಚದುರಂಗ
೧೧ ೫ ೧೯೮೬ ಹೊಸ ನೀರು
೧೧೬ ೧೯೮೬ ಪ್ರೀತಿ
೧೧೭ ೧೯೮೭ ಪೂರ್ಣಚಂದ್ರ
೧೧೮ ೧೯೮೭ ಹೊಸಬಾಳು
೧೧೯ ೧೯೮೯ ಗಂಡಂದ್ರೆ ಗಂಡು
ಗಾನಾಸುಮಾ ಪಟ್ಟಸೋಮನಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ