ಭಾನುವಾರ, ಸೆಪ್ಟೆಂಬರ್ 12, 2021

ಶಿವರಂಜನಿ ಹಾಡಿನ ಗಾನಗಣಿಗಾರಿಕೆ

ಶಿವರಂಜನಿ ಹಾಡೊಂದು..ಕಾಡುವ_ಹಾಡಾಗಿ

ಗಾನಗಣಿಗಾರಿಕೆ ಯಾದಾಗ .. !!





"ತಾಯಿಯ ಆಸೆ"

ಇದು 1988 ರಲ್ಲಿ ಬಿಡುಗಡೆಯಾದ ಕೌಟುಂಬಿಕ ಚಿತ್ರ. , ಕಲಿಯುಗ..ಹೀಗೆ "ತ" ಕಾರದ ಟೈಟಲ್ ಗಳನ್ನೆ ಬಂಡವಾಳವಾಗಿಸಿ ಗೆದ್ದವರು ಅಬ್ಬಯ್ಯ ನಾಯ್ಡು.


ಎ.ಎಲ್.ಅಬ್ಬಾಯಿ ಕನ್ನಡ ಚಿತ್ರರಂಗದ ಒಬ್ಬ ವಿಶಿಷ್ಠ ನಿರ್ಮಾಪಕರಾಗಿರುವಂಥವರು. ಒಬ್ಬ ಗಾರೆ ಕೆಲಸಗಾರನಾಗಿ ವೃತ್ತಿ ಮಾಡುತ್ತಿದ್ದಂತಹ ವ್ಯಕ್ತಿ ಕನ್ನಡ ಚಿತ್ರರಂಗದ ಯಶಸ್ವಿ ನಿರ್ಮಾಪಕರಾಗಿ ಬೆಳೆದಿದ್ದು, ಅನ್ನ ನೀಡಿ ಬೆಳೆಸಿದ ತಮ್ಮ ವೃತ್ತಿಯ ಉಪಕರಣವಾದ ಗಾರೆ ಕರಣೆಯನ್ನ ತಮ್ಮ ಚಿತ್ರಾನ್ನವಾಗಿ ಮಾಡಿಕೊಂಡು ಮಧು ಆರ್ಟ್ ಫಿಲಂಸ್ ಲಾಂಛನದಿ ಚಿತ್ರರಂಗದಲ್ಲಿ ದಾಖಲಿಸಿದ ಅನೇಕ ಸದಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ಮಿಸಿ, ನಂತರ ಅವರ ಚಿಕ್ಕಕಲ್ಲಸಂದ್ರದಲ್ಲಿ ಅಬ್ಬಯ್ಯನಾದ್ದಿದೆ ಮೂಲ ಆಂಧ್ರಪ್ರದೇಶದವರಾದರೂ ಅನ್ನ ಕೊಟ್ಟ ಕರ್ನಾಟಕದ, ಕನ್ನಡದ ಮೇಲಿನ ಇವರ ಪ್ರೇಮ ಇವರ ಚಿತ್ರಗಳಲ್ಲಿ ಎದ್ದು ಕಾಣುತಿತ್ತು. ಇವರು ಬೆಳೆದು ಬಂದಂತಹ ಬಡತನ, ಅವರ ಬವಣೆ, ಕಾರ್ಮಿಕನಾಗಿ ಕಂಡುಕೊಂಡ ನೋವು ಇವರ ಚಿತ್ರಗಳ ಜೀವಾಳವಾಗಿ ಹೆಣ್ಮಕ್ಕಳನ್ನು ಚುಂಬಕದಂತೆ ಸೆಳೆಯುತ್ತಿದ್ದವು. ಎ.ಎಲ್.ಅಬ್ಬಾಯಿ ನಾಯ್ಡು "ಮಧು ಆರ್ಟ್ಸ್ ಫಿಲಂ" ಸಂಸ್ಥೆ ಯನ್ನು ಸ್ತಾಪಿಸಿದ ನಾಯ್ಡುರವರು "ಹೂವು ಮುಳ್ಳು" ಎಂಬ ಡಕಾಯಿತರ ಚಿತ್ರವನ್ನು ನಿರ್ಮಿಸಿ ಚಿತ್ರರಂಗಕ್ಕೆ ಬಂದರು.


ಇವರ ಗರಡಿಯಲ್ಲಿ ಭವ್ಯ, ವಿನೋದ್ ಆಳ್ವ, ಚರಣ್ ರಾಜ್, ಪ್ರಮಿಳಾಜೋಷಾಯ್..ಹೀಗೆ ಹಲವಾರು ನಟರು ಅವಕಾಶಗಳನ್ನ ಪಡೆದರು.ತವರು ಮನೆ, ನಮ್ಮ ಊರದೇವತೆ .ಹೀಗೆ ಅಲ್ಲಿನ ತಾರಾಗಣದ ಯಶಸ್ವಿ ಯನ್ನ "ತಾಯಿಯ ಆಸೆ ಚಿತ್ರದಲ್ಲೂ ಮುಂದುವರೆಯಿತು." ತವರು ಮನೆ "ಯನ್ನು ತಾರಾಗಣವನ್ನೆ ಬಳಸಿ ತಯಾರಾದ ಚಿತ್ರ".


 ನನಗಾಗ ಹನ್ನೆರಡರ ಬಾಲ್ಯ.ಅಪ್ಪ, ಅವ್ವ, ಅಕ್ಕ ಎಲ್ಲರೂ ಎತ್ತಿನಗಾಡಿ ಯ ಮೂಲಕ ಚಿತ್ರನೊಡಲೋಗುತಿದ್ದ ನೆನಪು ಇನ್ನು ಹಸಿಯಾಗಿದೆ.ಎತ್ತಿನ ಗಾಡಿಯ ಬಳಕೆ ಆಗ ಸಿನಿಮಾ, ಮತ್ತು ದೇವಸ್ಥಾನಕೆ ಖಾಯಂ ವಾಹನವಾಗಿರುತಿತ್ತು.ನೆರೆ ಹೊರೆಯವರು ಕೂಡ ಎತ್ತಿನ ಗಾಡಿಯ ಮೂಲಕ ಚಿತ್ರನೋಡಲೋಗುತಿದ್ದ ಪರಿ ಕನಸಿನಲ್ಲಿರುವುದು ದುರಂತ.’!

ಮತ್ತೆ ವಾತಾವರಣವಾಗಲಿ, ಮತ್ತೆ ಚಿತ್ರಗಳಾಗಲಿ, ಆ ರೀತಿಯ ನೆರೆಹೊರೆಯ ಸಂಬಂದಗಳಾಗಲಿ ಈಗ ಉಳಿದಿಲ್ಲದಿರುವಲ್ಲಿ ವಿಪರ್ಯಾಸ ..!


 ಈ "ತಾಯಿಯ ಆಸೆ" ಚಿತ್ರ ನೋಡಿ ಬಂದ ನನ್ನವ್ವ, ಅಪ್ಪ, ಅಕ್ಕ ಎಲ್ಲರೂ ಗಂಡು ಮಕ್ಕಳನ್ನ ಬೈಯುತ್ತಾ .. "ಎಷ್ಟು ಮಾಡಿದರೂ ಅಷ್ಟೇ .. ಹುಟ್ಸಿದ ಮಕ್ಕಳು ನಮಗೆ ಆಧಾರವಾಗಲ್ಲ..ಅಪ್ಪ ಅಮ್ಮಂದಿರಿಗೆ ದ್ರೋಹ ಮಾಡಿ ಕಣ್ಣೀರಲಿ ಕೈ ತೊಳಿಸ್ತಾರೆ, ಹೆಂಡ್ತಿರು ಪಕ್ಕಕೆ ಬಂದ ಮೇಲೆ ನಾವ್ಯಾರು ಇವರಿಗೆ ಬೇಕಾಗಿತ್ತು.ಎಲ್ಲಾ ಬೆಳಿಯೋ ತನಕ ..ಹೆಣ್ಣು ಮಕ್ಕಳಿಗೆ ವಾಸಿ.ಸತ್ತಾಗ ಹಿಡಿ ಕಣ್ಣೀರಾದ್ರು ಹಾಕ್ತಾರೆ..ಎಷ್ಟು ಸಾಕಿದ್ರೇನು? ಎಷ್ಟು ಬೆಳೆಸಿದ್ರೆನು?


 ಈ ಚಿತ್ರದ ಹಾಡುಗಳು ಆಗ ಬಹಳ ಜನಪ್ರಿಯವಾಗಿದ್ದವು.ಆಕಾಶವಾಣಿಯಲ್ಲಿ ಹಾಡು ಬಂದಾಗಲೆಲ್ಲಾ ಓಡಿ ಹೋಗಿ ವಾಲ್ಯೂಮ್ ಹೆಚ್ಚಿಸಿ, ಕೇಳುತಿದ್ದ ತುಂಬು ಸಂಸಾರದ ನೆನಪು, ಅಣ್ಣಂದಿರೆಲ್ಲಾ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಹಾಡುಗಳ ಗುನುಗುತಿದ್ದ ನೆನಪು ಈ ಹಸಿಯಾಗಿಯೇ ಇದೆ.


ಈಗ ಚಿತ್ರದ ಕುರಿತ ವಿಷಯಕ್ಕೆ ಬರೋಣ.

"ತಾಯಿಯಾಸೆ" ಚಿತ್ರ ರಾಜೇಶ್, ಪ್ರಮಿಳಾ ಜೋಶಾಯ್, ಭವ್ಯ, ವಿನೋದ್ ಆಳ್ವ ಅಭಿನಯ ಚಿತ್ರ "ಹಾಡಿನ ರೀತಿಯಲ್ಲೇ ಈ ಹಾಡು ಕೂಡ ಇಬ್ಬರ ಯುಗಳ ಗೀತೆಯಾಗಿ, ಮಾಧುರ್ಯದ ಖನಿಯಾಗಿ ಉಳಿದಿದೆ. ಹಾಡು ಎಲ್ಲರಿಗೂ ನೆನಪಿನಲಿ ಇಲ್ಲದಿದ್ದರೈ ಕೇಳಿದಾಗ ಹಳೆಯ ನೆನಪುಗಳನ್ನ ಹುಡುಕುವಂತೆ ಮಾಡುವ ನೆನಪಿನ ಹಾಡು ಇದು.ನನಗಂತೂ ಈ ಹಾಡಿನ ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ಸದಾ ಬಿಡದೇ ಕಾಡುತ್ತಿದೆ.ಹಳೆಯ ಹಾಡುಗಳೇ ಹಾಗೆ ಚಿತ್ರ ನೆನಪಾದಾಗ ಹಾಡು ನೆನಪಾಗುತ್ತೆ..ಹಾಡು ನೆನಪಾದಾಗ ಚಿತ್ರ ನೆನಪಾಗುತ್ತೆ ..ಅದರ ಹಿಂದಿನ ಸವಿ ಸವಿ ನೆನಪೂ ಸಹ ಬೆಂಬಿಡದೇ ಕಾಡುವುದು ವಿಶೇಷ ..! 


ಒಂದು ವಿಶೇಷ ಅರ್ಥ ಈ ಚಿತ್ರದ ನಾಯಕ ವಿನೋದ್ ಆಳ್ವಾ ಆಗ ಅತೀ ಉದ್ದದ ನಟರಾಗಿದ್ದರುಇವರಿಗೆ ನಾಯಕಿಯರನ್ನೂ ಸಹ ಅವರ ಸರಿಸಮನಾಗಿ ಆಯ್ಕೆ ಮಾಡಬೇಕಿತ್ತು.


  ಕೇವಲ ಮಧುರ ಹಾಡೊಂದು ಕೇಳಿಸೋಣ ಎಂದು ಹೊರಟವನಿಗೆ ಹಳೆಯ ನೆನಪು, ಅಬ್ಬಯ್ಯ ನಾಯ್ಡುರವರ ನೆನಪುಗಳನ್ನ ಬರೆಯಬೇಕಾಗಿ ಬಂದದ್ದು ಈ ಲೇಖನ ಧೀರ್ಘವಾಗಲು ಕಾರಣವಾಯಿತು. 


  ಇಂತಹ ಅಪರೂಪದ ಹಾಡೊಂದರ ನೆನಪನ್ನು ತಮ್ಮ ಜೊತೆ ಹಂಚಿಕೊಳ್ಳಬೇಕೆಂಬ ಬಹುದಿನದ ಆಸೆಯನ್ನ "ಗಾನಗಣಿಗಾರಿಕೆ" ಯ ಮೂಲಕ ಈಡೇರಿಸಿಕೊಳ್ಳುತ್ತಿರುವೆ.

ನೋಡಿ, ಕೇಳಿ ನಾಲ್ಕು ಮಾತು ಸಾಧ್ಯವಾದರೆ ಹೇಳಿ.ಹಾಗೆ ನಿಮ್ಮ ಹಳೆಯ ನೆನಪುಗಳನ್ನ ಸಹ ಸಂಗ್ರಹಿಸಿ.

  ಇಂತಿ

ಗಾನಾಸುಮಾ ಪಟ್ಟಸೋಮನಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಗಾನಗಣಿಗಾರಿಕೆ

 #ಮೊನ್ನೆ_ಹಂಸಲೇಖರು_ನೀಡಿದ #ಗಾನಕರುಹು_ಬೆನ್ನತ್ತಿ_ಹೊರಟ #ಗಾನಶಿಕಾರಿ_ಗಾನಗಣಿಗಾರಿಕೆ #ಯಲ್ಲಿ_ಸೆರೆಯಾಯ್ತು...!!!   ಮೊನ್ನೆ ಎಸ್.ಪಿ‌.ಬಾಲಸುಬ್ರಮಣ್ಯಂ ನಿಧನರಾದಾಗ ಕನ...