"ಮಧುಮಾಸದ ಮಧು ತುಂಬಿದ
ಮಧುರ ಹಾಡುಗಳ ಮೆಲುಕು "
ವಿಶೇಷಗಾನಗಣಿಗಾರಿಕೆ
1977 ರಲ್ಲಿ ತೆಲುಗಿನಲ್ಲಿ ಸತ್ಯಂ ಸಂಗೀತ ನಿರ್ದೇಶನದಲ್ಲಿ "ಅಂದಮೇ ಆನಂದಂ" ಚಿತ್ರ ತೆರೆಗೆ ಬಂದಿತ್ತು.ನಟ ರಂಗನಾಥ್, ದೀಪ, ಮತ್ತು ಜಯಪ್ರದ ನಟನೆಯಿತ್ತು.
ಈ ಚಿತ್ರದ ಹಾಡುಗಳು ಬಹಳ ಮಧುವಾಗಿದ್ದವು.
ಎಸ್.ಪಿ.ಬಿಯವರ ಗಾಯನದಲ್ಲಿ ಈ ಚಿತ್ರದ ಹಾಡೊಂದು ಬಹಳ ಮಧುರವಾದ ಟ್ಯೂನ್ ಆಗಿತ್ತು.
ರಂಗನಾಥ್ ಅಭಿನಯದಲ್ಲಿ ಎಸ್.ಪಿ.ಬಿ.ಗಾಯನದ "ಮಧುಮಾಸ ವೇಳೆಯಲ್ಲಿ .." ಎಂಬ ಹಾಡು ತೆಲುಗಿನ ಜನಪ್ರಿಯ ಎವರ್ ಗ್ರೀನ್ ಮಧುರಗೀತೆಗಳಲ್ಲಿ ಇದೂ ಒಂದಾಗಿತ್ತು.ಎಸ್.ಪಿ.ಬಿಯವರ ಗಾಯನದಲ್ಲಿ ಈ ಮಧುರಗೀತೆ ವಿಶೇಷವಾಗಿ ಮೂಡಿಬಂದಿದೆ.
ಆದರೆ..ಈ ಹಾಡಿಗೂ ಕನ್ನಡಕ್ಕೂ ನಂಟು ಇದೆ.
1979 ರಲ್ಲಿ ಶ್ರೀನಾಥ್ ಮಂಜುಳ ಅಭಿನಯದಲ್ಲಿ "ಸವತಿಯ ನೆರಳು" ಚಿತ್ರವೊಂದು ಮೂಡಿಬಂದಿತ್ತು.ಈ ಚಿತ್ರಕ್ಕೂ ಸತ್ಯಂ ರ ಸಂಗೀತ ನಿರ್ದೇಶನವಿತ್ತು.ಈ ಚಿತ್ರದ ಒಂದು ಸುಮಧುರ ಗೀತೆ ನೆನಪಾಗುತ್ತಿದೆ.
"ನಗೆ ಹೂವು ನೀನು .." ಎಂಬ ಗೀತೆ ಎಸ್.ಪಿ.ಬಿ ಮತ್ತು ಎಸ್.ಜಾನಕಿ ಗಾಯನದಲ್ಲಿ ಇಂದಿಗೂ ಮಧುರಾತಿಮಧುರಗೀತೆಗಳಲ್ಲಿ. ಪಿ'ಬಿ ಹಾಡಿದ ಆ ಹಾಡನ್ನ ಕನ್ನಡದಲ್ಲಿ ಎಸ್.ಜಾನಕಿ ಹಾಡುವುದು ವಿಶೇಷ.
ಸತ್ಯಂ ರಾಂತೂ ಇಂತಹ ಅದೆಷ್ಟೋ ಮಧುರ ಜನಪ್ರಿಯ ಟ್ಯೂನ್ ಗಳನ್ನ ಕನ್ನಡ ಮತ್ತು ತೆಲುಗಿನಲ್ಲಿ ಬಳಕೆ ಮಾಡುವುದು ವಿಶೇಷ ಎಂಬ ಜಿಜ್ಞಾಸೆ ಇದ್ದರೂ ಅದನ್ನೆಲ್ಲಾ ಬದಿಗಿಟ್ಟು ಕೇಳಿದಾಗ ಮಧುರ ಹಾಡಿನ ನಿನಾದದ ಸವಿಯಬಹುದು.
ಮೇಲ್ ವರ್ಷನ್ ಗೀತೆಯನ್ನ ಫೀಮೇಲ್ ಧ್ವನಿಯಲ್ಲಿ ಹಾಡಿದಾಗ, ಅದೂ ಮಹಾನ್ ಗಾಯಕ ಹಾಡಿದ ಹಾಡನ್ನ ಮತ್ತೊಬ್ಬ ಮಹಾನ್ ಗಾಯಕಿ ಹಾಡುವಾಗ ಕೋರ್ಸ್ ಹಾಡಿನ ಬಗ್ಗೆ ಕೇಳುಗರಲ್ಲಿ ಸಹಜವಾಗಿಯೇ ಕುತೂಹಲ ಮೂಡಿಸುತ್ತಿದೆ.
ಹೀಗೆ ಮೂಲದಲ್ಲಿ ಹಾಡಿದ್ದ ಎಸ್ ಪಿ ಬಿಯವರ ಹಾಡನ್ನ ಎಸ್.ಜಾನಕಮ್ಮನವರು ತಮ್ಮದೇ ಧಾಟಿಯಲ್ಲಿ ಭಿನ್ನವಾಗಿ ಧ್ವನಿ ತುಂಬಿ ಹಾಡಿದ್ದಾರೆ.ಮುಲ ಹಾಡಿನಲ್ಲಿ ಎಸ್. .ಕೇಳಲು ಇತರ ಹಾಡುಗಳು ಒಂದೇ ರೀತಿಯಿದ್ದರೂ ಮಹಾನ್ ಗಾಯಕರು ಪ್ರತ್ಯೇಕವಾಗಿ ಅವರ ಶೈಲಿಯಲ್ಲಿ ಹಾಡಿಗೆ ತಮ್ಮದೇ ಆದ ನ್ಯಾಯ ಒದಗಿಸಲಾಗಿದೆ.
ಈ ಎರಡು ಹಾಡುಗಳು ಕೆಲವು ವರ್ಷದಿಂದ ನನ್ನೊಳಗೆ ಸದಾ ಗುನುಗುವ, ಕಾಡುವ ಹಾಡಾಗಿ ಕಾಡುತ್ತಲೇ ಇತ್ತು..ಯಾಕೋ ಇಂದು ಈ ಹಾಡುಗಳನ್ನ ತಮ್ಮ ಮುಂದೆ ಹಂಚಿಕೊಳ್ಳುವ ಆಸೆಯಾಯ್ತು.
"ಗಾನಗಣಿಗಾರಿಕೆ" ಎಂಬ ನನ್ನ ಪ್ರೀತಿಯ ಅಂಕದಲ್ಲಿ ಇಂತಹ ಮಧುರ ಗೀತೆಗಳಿಗೆ ಎಂದೆಂದೂ ವಿಶೇಷ ಸ್ಥಾನವಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ