ಶುಕ್ರವಾರ, ಸೆಪ್ಟೆಂಬರ್ 3, 2021

ಜಿ.ವಿ.ಅಯ್ಯರ್ ವಿಶೇಷ

ಗಾನಗಣಿಗಾರಿಕೆ



 "ನೀ..ಯಾರೋ..ಏನೋ..ಸಖ

ಎನಗಾಸರೆ ... "

(ಜಿ.ವಿ.ಅಯ್ಯರ್ ಜನುಮದಿನಕೆ ಗಾನಗಣಿಗಾರಿಕೆ ಯ ಶುಭಾಶಯ)


ಜಿ.ವಿ.ಅಯ್ಯರ್ ಎಂದಾಗ ನನಗೆ ತಟ್ಟನೆ ನೆನಪಾಗೋದು "ನೀ..ಯಾರೋ..ಸದಾ ಎನಗಾಸರೆ ..." ಎಂಬ ಹಾಡು.


  ಇಂದು ಅವರ ಜನುಮದಿನ.ಈ ಹೊತ್ತಲಿ ಅವರ ಅಪಾರ ಹಾಡುಗಳ ನಡುವೆ ಅವರ ಸಾಹಿತ್ಯ ರಚಿಸಲಾಗಿದೆ "ಹಸಿರು ತೋರಣ" ಚಿತ್ರದ ಹಾಡು.

ಉಪೇಂದ್ರಕುಮಾರ್ ಸಂಗೀತದಲ್ಲಿರುವ ಈ ಗೀತೆಗೆ ಎಸ್.ಜಾನಕಿ ಗಾಯನವಿದ್ದರೆ, ನಟಿ ಭಾರತಿಯವರ ಅಭಿನಯವಿದೆ.


"ನೀ..ಯಾರೋ..ಏನೋ ಸದಾ ಎನಗಾಸರೆ

ಕರುಣಾಳು ನೀನಾದೆಯಾ ಕಣ್ಣಾಮರೆ ... "

ಎಂಬ ಪಲ್ಲವಿಯಲ್ಲೇ ಅದೆಂತಹುದೋ ಹಣ್ಣಿನ ಮನದಾಳದ ವೇದನೆಯಿದೆ, ಸೆಳೆತವಿದೆ.


 ಮುಂದುವರಿದ ಚರಣದಲ್ಲಿ ..

"ಇದೇನು ಸ್ನೇಹ ಧರ್ಮ?

ಇದೇ ನಂಬಿಕೆ ಏನು?

ನೀ..ದೂರವಾಗಿ ಹೋಗೇ ...

ಮಾಡಿದ ತಪ್ಪೇನು?

ಇರು ನೀನು ಎಲ್ಲಾದರೂ ಸುಖವಾಗಿರು ..!


  ಸ್ನೇಹ ದ್ರೋಹಕ್ಕೆ ಇಲ್ಲಿ ಹೆಣ್ಣೊಬ್ಬಳ ಅಂತರಂಗದ ನೋವಿನಲ್ಲೇ ದೂರವಿರುವ ಸ್ನೇಹಿಗನ ಪ್ರಶ್ನೆ ಮಾಡುತ್ತಲೇ..ಅವನ ಹಿತವನ್ನು ಬಯಸುವ ಆಶಯವಿದೆಯಲ್ಲಾ? ಅಲ್ಲೇ ಹೆಣ್ಣಿನ ಅನುರಕ್ತತೆ, ತ್ಯಾಗ, ಪ್ರೀತಿಯಿದೆ.ಇವೆಲ್ಲವನ್ನ ನಾಲ್ಕಾರು ಸಾಲುಗಳಲ್ಲಿ ಹಿಡಿದಿಡುವ ಪರಿ ಇದೆಯಲ್ಲಾ? ಅದೇ ಜಿ.ವಿ.ಅಯ್ಯರ್ ರವರ ಲೇಖನಿಯ ಅಂತಃಶಕ್ತಿ ಎನ್ನಬಹುದು.


  ಚಿತ್ರದ ಏಳೆಂಟು ಹಾಡುಗಳ ಹೊರತಾಗಿಯೂ ಆ ಚಿತ್ರದ ಯಾವುದೋ ಒಂದೊಂದು ಹಾಡು ಅತಿ ಹೆಚ್ಚಾಗಿ ಕಾಡುತ್ತಿದೆ

ಆ ಗೀತೆಗಳಲ್ಲಿ ನನ್ನ ಸದಾ ಕಾಡುವ ಸೆಳೆತವಿರುತ್ತದೆ.


  ಮತ್ತೆ..ಅಯ್ಯರ್ ಹಾಡಿಗೆ ಬರುವುದಾದರೆ ..

ಎರಡನೇ ಚರಣದಲ್ಲಿ ಬರುವ ಸಾಲುಗಳ ಗಮನಿಸೋಣ ..

ಸ್ನೇಹಿತರಿಂದ ದೂರವಾಗಿದ್ದರೂ, ಅವನು ಎಲ್ಲೇ ಇದ್ದರೂ ಸುಖವಾಗಿರಲಿ ಎಂದು ಆಶಯ ಇದ್ದರೂ..ಆಕೆಯೊಳಗೆ ಸದಾ..ಆತನನ್ನ ನೋಡುವ ಆಸೆ ಅದಮ್ಯವಾಗಿ ತುಂಬುತ್ತದೆ.ಆತನ ಸಾಂಗತ್ಯ, ಅವನೊಂದಿಗಿನ ಬದುಕೇ ಇಲ್ಲದ ಮೇಲೆ ಬದುಕೇ ಬರಡು ಎನ್ನಿಸುವ ಭಾವಕ್ಕೆ ಜಿ.ವಿ.ಅಯ್ಯರ್ ರವರ ಎರಡು ಸಾಲುಗಳು ಈ ಕೆಳಗಿನವು.


  "ಸದಾ ನಿನ್ನ ನೋಡುವಾಸೆ

ಇದೇ..ಏತಕೋ ಕಾಣೆ

ಬಾ..ಒಂದು ಬಾರಿ ನೋಡು

ಎಂದುದೇ ತಪ್ಪೇನು?

ಇರು ನೀನು ಎಲ್ಲಾದರೂ ಸುಖವಾಗಿರು ..!


  ಈ ಅರ್ಥಪೂರ್ಣ ಸಾಲುಗಳಿಗೆ ಅಷ್ಟೇ ಸುಮಧುರವಾದ ಸ್ವರ ಸಂಯೋಜನೆ ಹೊಸದ ಉಪೇಂದ್ರಕುಮಾರ್ ರವರ ಹಿನ್ನೆಲೆ ಸಂಗೀತ ಮೆರುಗು ನೀಡಿದರೆ, ಜಾನಕಮ್ಮನ ಗಾಯನವಂತೂ ಕರುಳು ಕಿವುಚುವಂತಿದೆ ..!

ಕಪ್ಪು ಬಿಳುಪಿನ ಈ ಚಿತ್ರದಲ್ಲಿ ಭಾರತಿಯವರ ನಟನೆಯು ಪ್ರೇಕ್ಷಕರನ್ನ ತನ್ನತ್ತ ಸೆಳೆದು ಮಂತ್ರಮುಗ್ದರಾಗಿಸಿಬಿಡುತ್ತದೆ.


  ಈ ಹಾಡನ್ನ ಕೇಳುತ್ತಾ "ಬಂಗಾರದ ಹೂವು" ಚಿತ್ರದ "ನೀ ನಡೆವ ಹಾದಿಯಲ್ಲಿ ನಗೆಹೂವು ಬಾಡದಿರಲಿ .." ಹಾಡಿನ ಭಾವ ನೆನಪಾಗುತ್ತದೆ.


  ಇಲ್ಲಿ ಒಂದು ವಿಷಯ ಹೇಳಲೇಬೇಕು.ಈ ಚಿತ್ರದ ಧ್ವನಿಮುದ್ರಣದ ತಾಂತ್ರಿಕತೆಯಲ್ಲಿ ಸ್ಪಷ್ಟತೆ ಇಲ್ಲದೇ ಆ ಗುಣಮಟ್ಟದ ದೋಷದಂತೆ ಉಳಿದುಹೋಗಿದೆ.ಹಾಡಿನ ಎರಡನೇ ಚರಣದ ಅಂತ್ಯದಲ್ಲಿ ಹಾಡಿನ ದ್ವನಿಮುದ್ರಣದಲ್ಲಿ ದೋಷ


  ಅಂತಹ ಅವಿರ್ಭಾವ ಹಾಡುಗಳ ಸೃಷ್ಟಿಕರ್ತ ಜಿ.ವಿ.ಅಯ್ಯರ್ ಗೆ ಅವರದೇ ಸುಮಧುರ ಹಾಡಿನ ಮೂಲಕ "ಗಾನಗಣಿಗಾರಿಕೆ" ಯಲ್ಲಿ ಶುಭಾಶಯ ಕೋರುವೆ.


  ಗಾನಾಸುಮಾ ಪಟ್ಟಸೋಮನಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಗಾನಗಣಿಗಾರಿಕೆ

 #ಮೊನ್ನೆ_ಹಂಸಲೇಖರು_ನೀಡಿದ #ಗಾನಕರುಹು_ಬೆನ್ನತ್ತಿ_ಹೊರಟ #ಗಾನಶಿಕಾರಿ_ಗಾನಗಣಿಗಾರಿಕೆ #ಯಲ್ಲಿ_ಸೆರೆಯಾಯ್ತು...!!!   ಮೊನ್ನೆ ಎಸ್.ಪಿ‌.ಬಾಲಸುಬ್ರಮಣ್ಯಂ ನಿಧನರಾದಾಗ ಕನ...